Poem

ಮೂಢನಂಬಿಕೆ

ಸೂರ ನೆತ್ತರ್ಮೇಲೆ ಹಾರುತ
ಅಕಿರಣನಿತನಾಗಿ ಬಂದನಮ್ಮ
ಅಪಮಾನ ಹೊತ್ತು ಮುನಿಸಿಕೊಂಡನ

ಆಚಾರ ಅನಾಚಾರ ಮನೆಮುಂದೆ
ತೂಗುತಿತು ದೃಷ್ಟಿಯ ಗೊಂಬೆಹಾಂಗ
ಅಳುಕು ಇರಲಿ ಅನುಕೂಲ ಇರಲಿ ಸರಿಸಿ ನಡೆಯಬೇಕ

ಕಾಗೆ ಕೂಗಿಗೆ ನಗುವರಾದರಮ್ಮ
ರತ್ನನಪಕ್ಷಿ ಕಂಡು ಕೈ ಮುಗಿವರು
ಮರೆಯಾದರಮ್ಮ ಕಣಜ ಮರೆಯಾದರಮ್ಮ

-ಸಂತೋಷ ಕಾಖಂಡಕಿ

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author