Poem

ಒಂದು ಬಾಟಲಿಯ ಕರೆ

ನಾನು ಒಂದು ಪ್ಲಾಸ್ಟಿಕ್ ಬಾಟಲಿ
ನನ್ನ ಹೆಸರು ರಂಗೋಲಿ
ನೀರಿನ ಬಾಟಲಿಗಳಲ್ಲಿ ನಾನೇ ಫೇಮಸ್ಸು
ಗಲ್ಲಿ ಗಲ್ಲಿಯಲ್ಲಿ ನನ್ನ ಬಗ್ಗೆಯೇ ಗುಸುಗುಸು

ನಾನು ನಿಮಗೆ ಸಿಗುವೆ ಎಲ್ಲಾ ಕಡೆಯಲ್ಲೂ
ಬೇಕರಿ, ಮಾಲ್, ಅಂಗಡಿ ಹಾಗೂ ಪ್ರವಾಸಿ ತಾಣದಲ್ಲೂ
ಎಲ್ಲಾ ಕಡೆ ನನ್ನನ್ನು ಕೊಳ್ಳುತ್ತಾರೆ ಕೊಟ್ಟು ಕಾಸು
ಆದರೆ ಭೂಮಿತಾಯಿಗೆ ನನ್ನ ಕಂಡರೆ ಯಾಕೋ ಮುನಿಸು

ಯಾಕೆ ಹೀಗೆ ತಾಯಿ ಎಂದು ತೋಡಿಕೊಂಡೆ ಅಳಲು
ಆಕೆ ಹೇಳಿದಳು ನನ್ನ ಕೈಲಾಗುವುದಿಲ್ಲ ನಿನ್ನ ಕರಗಿಸಲು
ಜನ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಎಸೆವರು ನಿನ್ನ
ಪ್ರಾಣಿ ಪಕ್ಷಿಗಳ ಹೊಟ್ಟಿಗೆ ಮಾಡಿರುವೆ ನೀನು ಕನ್ನ

ಬೆಟ್ಟ ಹತ್ತೋವಾಗ ಕಷ್ಟಪಟ್ಟು ಹಿಡಿದೊಯ್ಯುವರು ನನ್ನ
ನೀರು ಖಾಲಿಯಾದ ತಕ್ಷಣ ಅಲ್ಲೇ ಬಿಸುಡುವರು ಎನ್ನ
ಸುರಿವ ಮಳೆ ನನ್ನನ್ನು ಕರೆದೊಯ್ಯುವುದು ಸಮುದ್ರಕೆ
ಸಮುದ್ರ ಸೇರಿ ನಾನು ಆಗುವೆ ಅಪಾಯ ಜಲಚರಕೆ

ನನ್ನಿಂದ ಜೀವ ಸಂಕುಲಕೆ ಎದುರಾಗಿದೆ ಆಪತ್ತು
ಯಾರಿಗೂ ಅರ್ಥವಾಗುತ್ತಿಲ್ಲ ಮುಂದೆ ಬರುವ ವಿಪತ್ತು
ನನ್ನೊಳಗಿನ ನೀರನ್ನು ಕುಡಿವ ಅನು, ರಫಿ, ರಾಘು
ನಿಮಗೆ ಕೇಳಿಸದೇ ನನ್ನ ಸರಿಯಾಗಿ ವಿಲೇವಾರಿ ಮಾಡಿ ಎಂಬ ಕೂಗು

ನಿಮಗಾದರೂ ಕೇಳಿಸಿತೇ.......???

- ಅರ್ಚನಾ ಪರಂಜ್ಯೋತಿ ಕುಮಾರ್

 

" width="1920">

 

" width="1920">

 

 

 

 

ಅರ್ಚನಾ ಪರಂಜ್ಯೋತಿ ಕುಮಾರ್

ಅರ್ಚನಾ ಪರಂಜ್ಯೋತಿ ಕುಮಾರ್ ವೃತ್ತಿಯಲ್ಲಿ ವೈದ್ಯರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನವನ್ನು ಮಾಡಿರುತ್ತಾರೆ.

More About Author