Poem

ಪ್ರೀತಿಯ ಆಳ

ಎದೆ ಬಗಿದು ತೋರಲು
ನಾ...ಹನುಮನಲ್ಲ..

ಉಜ್ಜಿ,ಜಜ್ಜಿ,ತಿಕ್ಕಿ,ತೀಡಿ
ಪೇಳಲು ನಾ ಅಕ್ಕಸಾಲಿಗನಲ್ಲ...

ಪರಿಶುದ್ಧ ಪ್ರೀತಿ ತೋರಗೊಡಲು ನನ್ನಲ್ಲಿ
ಯಾವುದೇ ಹಾಲ್ ಮಾರ್ಕ್ ಇಲ್ಲ..

ಗಂಧದಂತೆ ನಾ ...
ನೀ ಎಷ್ಟು ತಿಕ್ಕಿದರು ಕರಗಿ ಪರಿಮಳವ ಕೊಡುವೆ...
ನಿನ್ನ ಖುಷಿಗೆ ಮಿಗಿಲಾಗಿ ನಂಗಾವ ನೋವಿನ ಹಂಗಿಲ್ಲ..

ನಾ ಕಬ್ಬಂತೆ ...ನೀ ಹಿಂಡಿದಷ್ಟು ಸಿಹಿಯ ಕೊಡುವೆ...
ನನ್ನ ಸೆಳೆತದ ಪರಿವಿಲ್ಲ.

ನಾ ನಿನ್ನ ಪಾದರಕ್ಷೆ ಯಂತೆ..
ನಿನ್ನ ಪಾದಕೆ ಚುಚ್ಚುವ ಪ್ರತಿ ಮುಳ್ಳ ನಾ ಪಡೆವೆ..
ಸವೆವ ಬೇಸರವಿಲ್ಲ

ನಾ..ನಿನ್ನ ನೆರಳಂತೆ..ನಿನ್ನ ಕಷ್ಟದಲಿ ಹಿಂದಿರುವೆ..
ಸುಖದಲ್ಲಿ
ನೀ ..ಬೇಡವೆಂದಾಗ ಮರೆಯಾಗುವೆ..

ನನ್ನೆದೆಯ ನಿನ್ನ ಪ್ರೀತಿ ಆಳ ತೋರಲು ನಾ ಕೈ ಸೋತ ಈಜುಗಾರ..

ನೀ ತೋರಲೇಳಿದರೆ ನಾ ಕಣ್ಮುಚ್ಚಿ
ಹಾರುವೆ ಕೈ ಸೋತರು
ಈಜಲು ಕೂಡದಿರು ಕೈಬಡಿಯದೆ ಕಣ್ಮುಚ್ಚುವೆ ನಿನಗಾಗಿ....

- ಪೌರ್ಣಮಿ ಪ್ರೇಮ್ ಪ್ರಸಾದ್

 

ವಿಡಿಯೋ
ವಿಡಿಯೋ

ಪೌರ್ಣಮಿ ಪ್ರೇಮ್ ಪ್ರಸಾದ್

ಪೌರ್ಣಮಿ ಪ್ರೇಮ್ ಪ್ರಸಾದ್ ರವರು ಮೂಲತಃ ಉಡುಪಿಯವರು. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ಇವರ ಹಲವಾರು ಕಥೆ ಕವನಗಳು ಪ್ರತಿಲಿಪಿಯಲ್ಲಿ ಹಾಗೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕರಾಟೆ, ಕ್ರಾಫ್ಟ್, ಪೇಯಿಂಟಿಂಗ್, ರಂಗೋಲಿ, ಪರಿಸರ, ಇವೆಲ್ಲ ಅವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ತಮ್ಮದೇ ಆದ ಉನ್ನತಿ ಕೆರಿಯರ್ ಅಕಾಡೆಮಿ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

More About Author