Poem

ಸಂಸಾರ

ಅವರ ಬೆವರ ಹನಿಯು ಸ್ವಾತಿ ಮುತ್ತಾಗಿ ಅದನ್ನು
ಮಾರಿದ ಹಣದಿಂದ ಸಂಸಾರವು ಸಾಗುತ್ತೆ.

ಸಂಸಾರವೆಂಬ ಉತ್ಸವವ ಅವಿರತವಾಗಿ ಅಷ್ಟು
ಋತುಗಳಲ್ಲೂ ದಶಕಗಳ ಕಾಲ ಹೊತ್ತ ಭುಜವು
ಅವರದು.

ಅವರ ಸ್ವಾರ್ಥವನ್ನು ಎಂದೋ ಸ್ಮಶಾನದಲ್ಲಿ ಸುಟ್ಟು
ಬಂದರು.

ಹಬ್ಬಕ್ಕೆರಡು ಅಂಗಿ ಕೊಂಡು ಸಂವಾತ್ಸರವೇ
ಕಳೆದಿದೆ, ಮಕ್ಕಳು ಊದುವ ತುತ್ತೂರಿಯ
ನಿನಾದದಲ್ಲಿಯೇ ಅವರ ಆನಂದ.

ಅವರು ಸೋತರು , ಬಳಲಿದರು , ಕಷ್ಟಗಳನ್ನು
ನುಗಿದ, ಅವರ ಸಂಸಾರಕ್ಕೆ ಇದರ ಅರಿವಿಲ್ಲ
ಅವರ ನಗುವನ್ನು ನಿರಂತರವಾಗಿ ಉಳಿಸಿದ್ದ.

ಮಕ್ಕಳ ಏಳಿಗೆಯಲ್ಲಿ ಜೀವನದ ಜಯವನ್ನು ಸವಿದ,
ಅವರ ಕನ್ನಡಕದ ಒಳಗಿನ ಕಣ್ಣು ತೇವಗೊಂಡು
ಜೀವನದ ಕಷ್ಟವನ್ನು ತೊಳೆಯಿತು.

ಅಪ್ಪ ನೀವು ನೀಡಿದ ಶಿಸ್ತು, ತೋರಿಸಿದ ಕೋಪ,
ಕೊಟ್ಟ ಏಟು ಎಲ್ಲದರಲ್ಲೂ ನನ್ನ ಗೆಲುವಿನ ಹೆಜ್ಜೆ
ಗುರುತಿದೆ ಎಂದು ನಾ ತಿಳಿಯದೆ ಹೋದೆ

ಪ್ರದೀಪ್ ಬೇಲೂರು

ಪ್ರದೀಪ್ ಬೇಲೂರು

ಲೇಖಕ ಪ್ರದೀಪ್ ಬೇಲೂರು ಅವರು ಮೂಲತಃ  ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಒರಾಕಲ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ ಅವರ ಹವ್ಯಾಸವಾಗಿದೆ.

ಕೃತಿಗಳು : ಎಲವೋ ವಿಭೀಷಣ (ಕಥಾ ಸಂಕಲನ), ಶತ್ರುಘ್ನ (ಕಾದಂಬರಿ) 

 

More About Author