Poem

ತನುಮನದಲಿ ಕನ್ನಡದ ಡಿಂಡಿಮ

ಅಮೃತದಂತೇ ಹರಿಯುವ ಕರುನಾಡಿನ ಕಣವೆ
ಅನರ್ಘ್ಯ ಜನಗಳಿಗೆ ಅದಿತಿಯ ಕವಚ ಕನ್ನಡಮ್ಮ
ಅದ್ರಿ ಅದಿತಿಪ್ರಿಯ ಪುತ್ರ ಮಾಧವಿಹೂವಿನ ಇಂಪು
ಅನಂತರತ್ನ ಅನಂತವೀರ್ಯ ಹೆಮ್ಮೆ ಕನ್ನಡಿಗರು
ಅಷ್ಟಶೋಭೆವು ಗಗನಕೇರುವ ನೋಟ ಸವಿಜೇನಿನಂತೆ ll೧ll

ಆಕೆವಾಳತನ ಆಗಮವೇದಿ ಕನ್ನಡಾಂಬೆ
ಆತ್ರೇಯದ್ಯುತಿ ಹಸಿರಿನ ವನಸಿರಿಯ ನಾಡಯೇ
ಆದ್ಯಾಕಾವ್ಯಯ ಆಪಗಾ ಆಪ್ತಾಗಮ ಹೊನ್ನನಾಡು
ಶಿವಸೂತ್ರ ಜಾಲದ ಡಿಂಡಿಮ ಮೊಳಗಿದ ಗಂಧದತವರು ll೨ll

ಇಲ್ಲಿರುವ ಕನ್ನಡದ ಸೊಬಗು ಎಲ್ಲೆಲ್ಲೂ ಸವಿನುಡಿಯೋ
ಇನಿಯ ಸನಿಹದಲಿಯು ಕನ್ನಡಜಯ
ಇರುವುದು ಕನ್ನಡ ಕನ್ನಡಿಗ ಎಂದೆಂದಿಗೂ ಜಯಿಸುವಲಿ
ಇಂದ್ರನೀಲ ಹವಳಗಳ ನಾಡು ನನ್ನದು
ಇನಿದನಿ ಕೋಗಿಲೆಯ ಕುಹೂ ಕುಹೂ ಕಲರವ ll೩ll

ಈಗಲೇ ಎಲ್ಲಾಕಡೆ ಕನ್ನಡಮ್ಮನ ಈಜ್ಯೆ
ಈಶ್ವರಶೈಲದಲಿ ಈಸರದಿಂದ ಗೌರವದ ನೃತ್ಯ ll೪ll

ಉಸಿರಿನಲಿ ಮನಸಿನಲಿ ಕನ್ನಡ ಕನ್ನಡ
ಉಚ್ಚವದಲಿ ನಲಿದಾಡತಿರುವ ಕನ್ನಡ ಪ್ರೇಮಿಗಳು
ಉತ್ಕಳಿಕಾವಿಲಾಸದಲಿ ಹೊಳೆಯುವ ನಾಡು ll೫ll

ಊರ್ಜಿತಮತಿ ನಾಡು ಕನ್ನಡನಾಡು
ಊರ್ಜಿತೋಕ್ತಿ ರಸಋಷಿಗಳ ಬೀಡು ll೬ll

ಋತುಸಾರ್ವಭೌಮ ವಚನ್ಸಾಹಿತ್ಯದ ನಾಡು ಗಂಧದನಾಡು
ಋಷಿರೂಪಕರ ತಪಸ್ಸಿನ ತೀರ್ಥಂಕರ ವೀರರ ಕಲೆಗಳಬೀಡು
ಋಗ್ವೇದ ಮಂತ್ರವ ಸಾರಿದ ನಾಡು ನನ್ನ ಕನ್ನಡನಾಡು ll೭ll

ಎದೆಯೊಳಗೆ ಇರುವುದು ಕನ್ನಡದ ಪ್ರಾಣ
ಎಳೆಗಾರದಲಿ ಎಳೆದಾವರೆಯ ಕಂಪು
ಎಲ್ಲೆ ಇರು ಕನ್ನಡ ನಡೆ-ನುಡಿಯ ಚಿಲುಮೆ ಇರಲಿ ll೮ll

ಏಕರಸ ಏಕರೂಪ ಏಕವಾಕ್ಯ ಕನ್ನಡ ನಾಡು
ಏಣಗಿನ ಸೊಬಗು ಕಾಣುವ ಕಲ್ಪತನಾಡು ll೯ll

ಐರಾವತ ಮೇಲೇರಿ ಬಂದ ಚಂದಿರ
ಐಳಬಿಳ ನಾಡು ನನ್ನದು ಕನ್ನಡನಾಡು ll೧೦ll

ಒಗಂಟಿನರ್ಥವ ಜಯಿಸಿದ ಒಡನಾಡು
ಒಲವರದಿಂದ ಗೌರವಿಸುವ ಸಿರಿಗನ್ನಡ ನನ್ನದು
ಒಸಗೆವರಸಿನುಡಿವು ನುಡಿ ಶ್ರೀಗಂಧದ ನುಡಿ ll೧೧ll

ಓಂಕಾರಕ್ಷರದ ಸುಪ್ರಭಾತ ಹಾಡಿಸಿದ ನಾಡು

ಓ ಜ್ಞಾನಿ ಕಲಾಪ್ರೀಯ ಶಾರದಾ ವಿಲಾಸ
ಓಲೆಯಲಿ ಓದಿಸಿದ ವಿದ್ಯಾಪೀಠ ಕನ್ನಡನಾಡು ll೧೨ll

ಔತ್ಸುಕ್ಯದ ನಾಡು ನುಡಿ ನೆಲ
ಔಡುವ ಮೇಲೆ ಕನ್ನಡ ನುಡಿ ಜಾತ್ರೆ ll೧೩ll

ಸಂತೋಷ ಕಾಖಂಡಕಿ

ವಿಡಿಯೋ
ವಿಡಿಯೋ

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author