Poem

ವಿಧಿಯ ಚೆಲ್ಲಾಟ

ನಿತ್ಯ ಸರಣಿ ಸಾವುಗಳ ನೋಡಿ
ಸತ್ತು ಮನಸೊರಗಿದೆ
ಕನಸುಗಳು ಬಾಡಿ

ಗುರಿಮುಟ್ಟುವ ತವಕಗಳ
ನೋಡಿ, ನಗುತಿದೆ ವಿಧಿ
ತಮಾಷೆ ಮಾಡಿ

ಎಲ್ಲಿಗೆ ಈ ಪಯಣ
ಯಾಕಾಗಿ ಈ ಕದನ
ಬದುಕಿನ ಪಯಣ ಅರ್ಥವಾಗದ ಕದನ

ಸತ್ಯದ ಬಿರುಗಾಳಿ ಒಮ್ಮೆ ಬೀಸಿದಾಗ
ಮಿತ್ಯದ ಕನಸಿನ ಗಾಳಿಗೋಪುರ
ಚದುರಿ ಹೋಗುವುದು

ಬೆಚ್ಚಿ ಬೆದರಿದ ಮನಸ್ಸು,
ಮರುಗಿ ಕೊರಗಿ
ಮತ್ತದೇ ಚದುರಿದ ಕನಸನ್ನ
ಮತ್ತೆ ಮತ್ತೆ ಚಿತ್ರಿಸುವುದು

ಇದೇ ನಮ್ಮ ಬದುಕಿನ ಹೋರಾಟ
ಇದು ವಿಧಿಯ ಚೆಲ್ಲಾಟ

-ಸರಸ್ವತಿ ಎಲ್ ಮಂಜು, ಚಿತ್ರದುರ್ಗ

ಸರಸ್ವತಿ ಎಲ್. ಮಂಜು

ಸರಸ್ವತಿ ಎಲ್. ಮಂಜು ಅವರು ಮೂಲತಃ ಚಿತ್ರದುರ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕತೆ, ಕವನ, ಲೇಖನ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

More About Author