Poem

ಎಲೈ ಚಿಗುರೇ

ನವಿರಾದ ನವಿಲುಗರಿಯೂ ಕಿರೀಟವಾಗಲಿ
ಅಕ್ಷಯ ರಾಶಿಯು ಸ್ನೇಹದ ಗೀತೆ ಹಾಡಿಯಲ್ಲಿ
ಮಾತು ಬೆಳ್ಳಿ ಮೌನ ಬಂಗಾರ ನಿನ್ನ ಸಂಭಾಷಣೆಯಲಿ
ಅಹ್ಲಾದ ಮೌನದಿ ಬೆಳದಿಂಗಳ ಬಾಲೆಯ ಕನ್ನಿಕೆ.....

ಮುದವೀನ ಒಲವಿನ ಓಲೆ ಸ್ನೇಹಾಮೃತದಲಿ
ಸ್ವರ್ಣಕ್ಷರದಲಿ ಬರೆದ ಭಾವಗೀತೆಯ‌ ಪಲ್ಲವಿ
ಚಿಲಿಪಿಲಿ ಕಂಗಳ ಪ್ರೇಮಾಂಜಲಿ
ಮೆಲುನಗೆಯ ಮುಂಗುರುಳಿನ ಲಹರಿ....

ಅನುಕ್ಷಣದ ಚರಣದಲಿ ಸಿಂಚನ ಹರಿಸಿ
ರಾಗ-ತಾಳ-ಶೃತಿಗಳನ್ನು ನಿನ್ನ ಕಂಠದ ಸ್ವರವಾಗಿಸಿ
ನಗು ಮೊಗದ ಶಿಲ್ಪಾ...
ಈ ಭಾವ ತುಂಬಿಹಿರುವ ಸ್ನೇಹಗೀತೆ...
ನಿನ್ನ ಉಡಿಗೆ

ಈ ಕವಿತೆ ‌ಸ್ನೇಹ ಮಧುರ ಚಿರಂತನ ದೀಪ್ತಿಯ ಸ್ವರೂಪ. ನಮ್ಮಿಬ್ಬರ ನಡುವಿನ ಆಂತರ್ಯದ ಸವಿ ಸ್ನೇಹದ ಭಾವಗೀತೆ ಮೌನದಿ ಅಕ್ಷರಶಃ ಕಾವ್ಯಾಂಜನ ಕೂಡಿ ಬಂದ ಬರಹ ಏನಂತೀರಾ ನಿಮ್ಮ ಕಾವ್ಯ ಸೇವಕ
- ಸಂತೋಷ ಕಾಖಂಡಕಿ

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author