Article

ಹೆಣ್ಣಿನ ಸ್ವಾಭಿಮಾನಿ ಬದುಕಿನ ಚಿತ್ರಣ ಸಾಯಿಲಕ್ಷ್ಮಿಯವರ 'ಹೂಬತ್ತಿ' ಕಾದಂಬರಿ

ಜೀವನದಲ್ಲಿ ಹೆಣ್ಣಿಗೆ ಎದುರಾಗುವ ಕಷ್ಟ-ಕಾರ್ಪಣ್ಹ ಮತ್ತು ಸುಖಗಳನ್ನು ಎದುರಿಸಿ ಸ್ವಾಭಿಮಾನಿ ಜೀವನ ನಡೆಸುವ ಆತ್ಮಸ್ಥೈರ್ಯವನ್ನು 'ಹೂಬತ್ತಿ' ಕಾದಂಬರಿಯಲ್ಲಿ ನಿರೂಪಿಸಲಾಗಿದೆ, ಮತ್ತು ಅಂತಹ ಆತ್ಮಸ್ಥೈರ್ಯವನ್ನೂ ಪಾತ್ರಗಳ ಮೂಲಕ ಕೊಡ ಮಾಡಿದ್ದಾರೆ ಲೇಖಕಿ ಸಾಯಿಲಕ್ಷ್ಮಿಯವರು. ಈ 'ಹೂಬತ್ತಿ' ಕಾದಂಬರಿಯಲ್ಲಿ ಬದುಕೇ ಒಂದು ಹೋರಾಟವಾಗಿರುವಾಗ ಇಂದಿನ ದಿನಮಾನದಲ್ಲಿ ಮಹಿಳೆಯರು ಎದುರಿಸುವ ಕಷ್ಟ-ಅಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವ, ಆ ಸಮಸ್ಯೆಗಳನ್ನು ಎದುರಿಸುವ ಆತ್ಮಸೈರ್ಯವನ್ನು ತುಂಬುವಿಕೆ ಆಗುತ್ತಿಲ್ಲವಲ್ಲ ಮತ್ತು ಅಂತಹ ಮಹಿಳೆಗೆ ಕಾದಂಬರಿಕಾರ್ತಿ ಪರಿಹಾರವನ್ನೂ ಪಾತ್ರಗಳ ಮೂಲಕ  ಇಲ್ಲಿ ತೋರಿಸುತ್ತಾರೆ. 

ಇಂದು ಹೆಣ್ಣು ಹೇಗಿರಬೇಕು-ಹೇಗಿರಬೇಡವೆಂದು ಮೊದಲೇ ನಿರ್ಧರಿಸಲ್ಪಡುತ್ತಿರುವಾಗ ಮತ್ತು ಇಂತಹ ದುರ್ಗಮ ಪುರುಷ ಪ್ರಧಾನ ಕಾಲಘಟ್ಟದಲ್ಲಿ ಮಹಿಳೆಯು ವಿಭಿನ್ನ ವಾತಾವರಣದಲ್ಲಿ ಜೀವಿಸುತ್ತಿದ್ದಾಳೆ. ಇಂತಹ ದುರ್ಗಮ ಸನ್ನಿವೇಶದಲ್ಲಿರುವ ಮಹಿಳೆಯರು ವರ್ತಮಾನದ ಈ ಕಾಲಘಟ್ಟದಲ್ಲಿ ಮಹಿಳೆಗೆ ಆತ್ಮಸ್ಥೈರ್ಯ ತುಂಬುವ ಸಾಹಿತ್ಯ ಕೃತಿಗಳ ಅಗತ್ಯ ಸಂದರ್ಭದಲ್ಲಿ ಸಾಯಿಲಕ್ಷ್ಮಿಯವರ ಈ 'ಹೂಬತ್ತಿ'ಯೊಂದು ಮಾರ್ಗೋಪಾಯದಂತೆ ಗೋಚರಿಸುತ್ತದೆ. ಅಂತಹ ಸಾಹಿತ್ಯ ಕೃತಿಯೂ ಸಾಯಿಲಕ್ಷ್ಮಿಯವರ ಈ ಕೃತಿಯೂ ಆಗಿದೆ 'ಹೂಬತ್ತಿ'.

ಈ ನಿಟ್ಟಿನಲ್ಲಿ 'ಹೂಬತ್ತಿ' ಕಾದಂಬರಿಯಲ್ಲಿನ ಪಾತ್ರಗಳು ವಿಶೇಷ ಸ್ಥಾನದಲ್ಲಿ ನಿಲ್ಲುತ್ತವೆ. ಈ ಕಾದಂಬರಿಯಲ್ಲಿನ ನಾಯಕಿ ತನಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾಳೆ. ಆ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಇಂದು ಸಂಘರ್ಷದ ಹಾದಿಯಲ್ಲಿ ತೊಡಗಿಕೊಂಡೇ ತಮ್ಮತನವನ್ನು ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲೂ 'ಹೂಬತ್ತಿ'ಯ ಅನೇಕ ಪಾತ್ರಗಳಿದ್ದು ಬಹಳ ಪಾತ್ರಗಳು ಒಳಿತಿನ ಗುಣವನ್ನು ಎತ್ತಿತೋರಿಸುತ್ತವೆ. ಈ ನಿಟ್ಟಿನಲ್ಲಿ ಹರಿಯುವ ನೀರಿನಂತೆ ಸರಳ, ಸುಲಲಿತವಾಗಿ 'ಹೂಬತ್ತಿ' ಕಾದಂಬರಿ ರಚನೆಗೊಂಡು ಓದುಗರನ್ನು ತನ್ನತ್ತ ಸೆಳೆಯುತ್ತದೆ.

ಪತಿಯ ಆಧಾರ ತಪ್ಪಿದ, ವಿದ್ಯೆಯೂ ಉದ್ದೋಗವೂ ಯಾವುದರ ಬಲವಿಲ್ಲದ, ಮಕ್ಕಳೊಟ್ಟಿಗಳಾದ ಮಹಿಳೆಯೊಬ್ಬಳು ತನ್ನ ಒಳ್ಳೆತನದಿಂದಲೇ ದುರ್ಗಮ-ದುಸ್ತರವಾದ ಬದುಕನ್ನು ಗೆದ್ದ ಮತ್ತು ಬದುಕಿನಲ್ಲಿ ಸಾಕಾರಗೊಂಡ ಮಹಿಳೆಯ ಕಥೆಯನ್ನು ಲೇಖಕಿ ಸಾಯಿಲಕ್ಷ್ಮಿ 'ಹೂಬತ್ತಿ' ಕಾದಂಬರಿಯಲ್ಲಿ ಹೃದಯಂಗಮವಾಗಿ ಬರೆದಿದ್ದಾರೆ. ಕಾಮಾಕ್ಷಿ ತನ್ನ ಬಾಳುವೆಯ ತಾಪದ ಮಧ್ಯೆದಲ್ಲೇ ತಾಪಸಿಯಂತೆ ನಡೆನುಡಿ ರೂಪಿಸಿಕೊಂಡವಳು. ಬದುಕಿನ ಗತಿಯನ್ನು ಹಳಿದುಕೊಳ್ಳದೇ ಅದು ಹೋದ ದಾರಿಯಲ್ಲಿ ಸಾಗಿ ತೊಂದರೆ-ತಾಪತ್ರಯಗಳನ್ನು ಸರಿಮಾಡಿಕೊಳುತ್ತಾ ಬದುಕಿನ ಪಯಣ ನಡೆಸಿದವಳು. ಮತ್ತೊಬ್ಬರಿಗಾಗಿ ಮಿಡಿದವಳು. ಅಸ್ಮಿತೆ ಕಳೆಯದೇ ತನ್ನ ಸುತ್ತಣದ ಜನರಿಗಾಗಿ ವಾತ್ಸಲ್ಯದಿಂದ ದುಡಿದವಳು ಮತ್ತು ಮಿಡಿದವಳು. ತಾರುಣ್ಯದಲ್ಲಿ ಯಾವ ವಿಧಿ ಅತಂತ್ರಕ್ಕೆ ದೂಡಿ ಅಟ್ಟಹಾಸ ಮೆರೆಯಿತೋ ಅದೇ ವಿಧಿ ಮುಂದೆ ಬದುಕಿನುದ್ದಕ್ಕೂ ಅವಳಿಗೆ ಮತ್ತು ಅವಳ ಮಕ್ಕಳಿಗೆ ಅನುಕೂಲವಾಗುವ ಪರಿ ತಣ್ಣಗಿನ ಗಾಳಿಯಂತೆ ವಿವರಗೊಂಡಿದೆ.

ಇಲ್ಲಿರುವುದು ದುಷ್ಟರ ಜೊತೆಗಿನ ಹೊಯ್ದಾಟವಲ್ಲ. ಮನುಷ್ಯ ಸಹಜ ಸ್ವಾರ್ಥಿಗಳ ಮತ್ತು ಸಹಜ ಸಹೃದಯಿಳ‌ ಜೊತೆಗಿನ ಸಹಜ ಬದುಕು. ಇವರೆಲ್ಲರ ನಡುವೆ ಸಮಾಧಾನಸಿ, ಸಾವಧಾನಿಸಿ ಸಮತೋಲನ ಸಾಧಿಸಿ ಆತ್ಮಸಂಮಾನ‌ ಕಾಯ್ದುಕೊಂಡು ಜೀವನ ಸಾಗಿಸಿದ ಏಕನೀಯ ಕಥೆ. ಕಹಿಯಿಲ್ಲದ, ಏನೇ ಎದುರಾದರೂ ಸಹನೆ, ಪ್ರೀತಿ ಕಳೆದುಕೊಳ್ಳದ ಮಿಡಿದೀಪದಂತೆ ಉರಿದು ಬೆಳಕು ಚೆಲ್ಲುವ ಅಪರೂಪದ ಚೇತನಚಿತ್ರಣಕ್ಕೇ 'ಹೂಬತ್ತಿ' ತಲೆಬರಹ ಒಪ್ಪುವಂತಾದು. ಈ ಚಿತ್ರಣವನ್ನು ತಮ್ಮ 'ಹೂಬತ್ತಿ' ಕಾದಂಬರಿಯಲ್ಲಿ ಸಾಯಿಲಕ್ಷ್ಮಿ.ಎಸ್.ರವರು ಒಂದು ರೂಪಕದಂತೆ ಕಟ್ಟಿಕೊಟ್ಟಿದ್ದಾರೆ.

ಪುಸ್ತಕದ ಕುರಿತ ಮಾಹಿತಿ- https://www.bookbrahma.com/book/hoobutti

ಶಿವು ಕೆ. ಲಕ್ಕಣ್ಣವರ