ಹೂಬತ್ತಿ

Author : ಸಾಯಿಲಕ್ಷಿ ಎಸ್.

Pages 314

₹ 220.00
Published by: ಹೇಮಂತ ಸಾಹಿತ್ಯ
Address: ಹೇಮಂತ ಸಾಹಿತ್ಯ, ಬೆಂಗಳೂರು

Synopsys

ಕುಟುಂಬ, ಸಂಬಂಧ ಅನ್ನುವುದು ತೆಳುವಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಒಂದು ಚೆಂದದ ಕೌಟುಂಬಿಕ ಕಥಾನಕವನ್ನು ಸಾಯಿಲಕ್ಷ್ಮಿ ನಮ್ಮ ಮುಂದೆ ಇಟ್ಟಿದ್ದಾರೆ. 70-80ರ ದಶಕದಲ್ಲಿ ತಾಯಿ ಕರುಳಿನ ಸ್ತೀ ಕೇಂದ್ರಿತ ಕಾದಂಬರಿಗಳು, ಸಿನಿಮಾಗಳು ಜನಮೆಚ್ಚುಗೆ ಗಳಿಸಿದ್ದವು. ಮಹಿಳೆಯೊಬ್ಬಳು ಮನೆಯ ಎಲ್ಲಾ ಭಾರವನ್ನು ಹೆಗಲ ಮೇಲೆ ಹೊರುವುದು, ಛಲದಿಂದ ಇಡೀ ಸಂಸಾರ ನೌಕೆಯನ್ನು ಮುನ್ನಡೆಸುವ ಕಥೆಗಳಿದ್ದವು.ಈಗ ಹೆಣ್ಣನ್ನು ವಿಷದ ಹಾವಿನಂತೆ ಚಿತ್ರಿಸುವ ಕಥಾನಕಗಳು ಹೆಚ್ಚಾಗಿವೆ.ಈ ಕೃತಿಯಲ್ಲಿ ಗಂಡನನ್ನು ಅಪಘಾತವೊಂದರಲ್ಲಿ ಕಳೆದುಕೊಳ್ಳುವ ಕಾಮಾಕ್ಷಿ, ತನ್ನ ಇಬ್ಬರು ಮಕ್ಕಳಾದ ಅಪರ್ಣ, ಆನಂದನನ್ನು ಬೆಳೆಸಿ, ಅವರಿಗೊಂದು ಬದುಕು ಕಟ್ಟಿಕೊಡುವಲ್ಲಿ ಎದುರಿಸುವ ಸಂಕಷ್ಟಗಳು ಈ ಕಥೆಯಲ್ಲಿ ವಿವರಿಸಲಾಗಿದೆ.

Related Books