Article

ವಿಚಿತ್ರ ಸಾಹಸಗಳ ಕಥನ ‘ಡಾನ್ ಕ್ವಿಕ್ಸಾಟ್ ಸಾಹಸ’

"ಡಾನ್ ಕ್ವಿಕ್ಸಾಟ್" ಎನ್ನುವುದು ಮಿಗುವೆಲ್ ದ ಸರ್ವಾಂಟಿಸ್ ಸಾವೆದ್ರ ಎಂಬ ಸ್ಪ್ಯಾನಿಶ್ ಲೇಖಕ ಬರೆದ ಹಾಸ್ಯಪ್ರಧಾನ ಕಾದಂಬರಿ.

"ಡಾನ್ ಕ್ವಿಕ್ಸಾಟ್"ನ ಕಥಾನಾಯಕ ಕಾದಂಬರಿಯ ಬಹುಮುಖ್ಯ ಹಾಗೂ ಹಾಸ್ಯಪ್ರಧಾನ ವ್ಯಕ್ತಿ. ಕಾದಂಬರಿಯುದ್ದಕ್ಕೂ ಹುಚ್ಚು ಸಾಹಸದಲ್ಲಿಯೇ ಕಳೆದ ಕ್ವಿಕ್ಸಾಟ್ ಹುಚ್ಚು ಓದುಗ. ಆರಂಭದಲ್ಲಿ ಮಧ್ಯಕಾಲೀನ ವೀರ ಸರದಾರರ ಸಾಹಸ ಕಥೆಗಳನ್ನು ಓದಿ ತಾನೂ ಅವರಂತೆ ಆಗಬೇಕೆಂದು ತಿರ್ಮಾನಿಸುತ್ತಾನೆ. ಸಹಸ್ರ ಸಹಸ್ರ ಪುಸ್ತಕಗಳನ್ನು ಹೊಂದಿರುವ ಕ್ವಿಕ್ಸಾಟ್ ಓದಿ ತಲೆಕೆಟ್ಟಿರುತ್ತದೆ. ಓದಿರುವ ಪುಸ್ತಕದ ಪಾತ್ರಗಳನ್ನು ಚಿಂತಿಸಿ ಭ್ರಮಾಲೋಕದಲ್ಲಿಯೇ ಸುತ್ತುತ್ತ ವಾಸ್ತವ ಜಗತ್ತನ್ನು ಮರೆತು ಅಬ್ಬಾ! ಗಾಬರಿಗೊಳ್ಳುವಂತಹ ಹಾಗೂ ಹೊಟ್ಟೆಹುಣ್ಣಾಗುವಂತೆ ನಗುವಂತಹ ಸಾಹಸಗಳನ್ನು ಮಾಡುತ್ತಾನೆ.

ಕ್ವಿಕ್ಸಾಟ್ ಸಾಂಕೋ ಪಾಂಚಾ ಎಂಬುವನನ್ನು ತನ್ನ ಬಂಟನನ್ನಾಗಿ ನೇಮಿಸಿಕೊಂಡು, ಹೇಸರಗತ್ತೆಯ ಜೊತೆಗೆ ಸಾಹಸಯಾತ್ರೆ ಆರಂಭಿಸುತ್ತಾರೆ. ಅದನ್ನು ಕುದುರೆಯೆಂದೇ ಇಡೀ ಸಾಹಸವನ್ನು ಮುಗಿಸುತ್ತಾನೆ ಕ್ವಿಕ್ಸಾಟ್.

ಕ್ವಿಕ್ಸಾಟ್ ನ ವಿಚಿತ್ರ ವಿಚಿತ್ರ ಸಾಹಸಗಳಿಗೆ ಆರಂಭದಲ್ಲಿ ತಲೆಕೆಟ್ಟವರಂತೆ ವರ್ತಿಸುತ್ತಿದ್ದ ಸಾಂಕೋ ಕೂಡ ತದನಂತರದಲ್ಲಿ ಕ್ವಿಕ್ಸಾಟ್ ನೀಡಿದ ಹುಚ್ಚು ಆಮಿಷಕ್ಕೆ ಒಳಗಾಗಿ ಆತನೂ ಭ್ರಮಾಲೋಕದಲ್ಲಿ ವಿಹರಿಸಲಾರಂಭಿಸುತ್ತಾನೆ. ಇವರಿಬ್ಬರ ಹುಚ್ಚುತನದ ಎಲ್ಲ ಸಾಹಸಗಳಿಗೆ ಕತ್ತೆ ಮೂಕಸಾಕ್ಷಿಯಾಗಿ ಕಾದಂಬರಿಯುದ್ದಕ್ಕೂ ಒಂದು ಮುಖ್ಯ ಪಾತ್ರದಂತೆ ಕಾಣುತ್ತದೆ. ಹಲವಾರು ಉಪಟಳಗಳನ್ನು ಸಹಿಸಿಕೊಂಡು, ಹಲವಾರು ಸಂದರ್ಭದಲ್ಲಿ ಅಪಾಯಕ್ಕೆ ಒಳಗಾಗಿ, ಇವರಿಬ್ಬರೂ ಅಲ್ಲದೇ ಕತ್ತೆಯೂ ಸಾಹಸ ಯಾತ್ರೆ ಮಾಡುತ್ತದೆ ಇವರೊಡನೆ.

ಹುಚ್ಚು ಸಾಹಸದಲ್ಲಿ ಎಲ್ಲೂ ಕೂಡ ಕ್ವಿಕ್ಸಾಟ್ ಪರರಿಗೆ ನೋವುಂಟಾಗುವಂತೆ, ಅನ್ಯಾಯವಾಗುವಂತೆ, ಮೋಸಕ್ಕೆ ದೂಡುವಂತೆ ಯಾವುದೇ ಸಾಹಸವನ್ನು ಮಾಡಲಿಲ್ಲ. ನ್ಯಾಯಪರವಾಗಿಯೇ ಅತೀ ಉದಾತ್ತಗುಣಗಳಿಂದ ಅಪಾಯಕ್ಕೆ ಸಿಲುಕಿ ಪಾರಾಗಿ ಮತ್ತೆ ಸಾಹಸಕ್ಕೆ ಅಣಿಯಾಗುತ್ತಿರುತ್ತಾನೆ.

ಕ್ವಿಕ್ಸಾಟ್ ನ ವಿಚಾರದಲ್ಲಿ ಹುಚ್ಚುತನಕ್ಕೆ ಒಂದು ರೀತಿಯಲ್ಲಿ ಅತೀಯಾದ ಓದು ಎಂದಾದರೂ ಎಲ್ಲವನ್ನೂ ಓದಿರುವಂತೆಯೇ ಮನದಲ್ಲಿ ಸೃಷ್ಟಿಸಿಕೊಂಡು ಕನಸುಕಾಣುತ್ತಾ ಸಾಗುವುದು ಮೂರ್ಖತನವಲ್ಲವೇ. ಅದನ್ನೆ ಇಲ್ಲಿ ಕ್ವಿಕ್ಸಾಟ್ ಮಾಡಿದ್ದಾನೆ. ಹಾಸ್ಯಭರಿತವಾದ ಎನ್. ಎಲ್. ಕ್ಯಾರಿಂಗ್ಟನ್ ಎಂಬುವವರು ಮಾಡಿದ ಈ ಕೃತಿಯ ಸರಳ ಸಂಕ್ಷಿಪ್ತ ಇಂಗ್ಲೀಷ ಅನುವಾದದಿಂದ ಕನ್ನಡಕ್ಕೆ "ಡಾನ್ ಕ್ವಿಕ್ಸಾಟನ ಸಾಹಸಗಳು" ಎಂದು ಅನುವಾದವನ್ನು ಮಾಡಲಾಗಿದೆ.

ಕೃತಿಯನ್ನು ಅತೀವವಾಗಿ ಓದಿ. ಆದರೆ ಓದಿದುದೆಲ್ಲವನ್ನೂ ಕ್ವಿಕ್ಸಾಟ್ ನಂತೆ ಮಾತ್ರ ಸಾಹಸಕ್ಕೆ ಕೈಹಾಕಬೇಡಿ. ಕ್ವಿಕ್ಸಾಟ್ ನ ಹುಚ್ಚು ಸಾಹಸ ಓದುತ್ತಾ ನಿಮಗೂ ಆಪ್ತವಾಗುತ್ತದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜು ಹಗ್ಗದ