Book Watchers

ರಾಜು ಹಗ್ಗದ

ವೃತ್ತಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಆಗಿರುವ ರಾಜು ಹಗ್ಗದ ಅವರಿಗೆ ಓದು ನೆಚ್ಚಿನ ಹವ್ಯಾಸ. ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್‌ ಗ್ರಾಮದವರು. ತಮ್ಮ ನಿರಂತರ ಓದು, ಸಾಹಿತ್ಯ ರಚನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇತ್ತಿಚೆಗೆ ಕೃತಿಗಳ ವಿಮರ್ಶೆಯತ್ತ ಆಸಕ್ತಿ ತೋರಿದ್ದಾರೆ.

Articles

ಹಳ್ಳಿಯ ಮನಸ್ಸುಗಳ ಅಂತರಾಳ ಸೆರೆಹಿಡಿದ ಕತೆಗಳ ಸಂಕಲನ ‘ಕುದರಿ ಮಾಸ್ತರ’

ಹಳ್ಳಿ ಬದುಕಿನ ಚಿತ್ರಣಗಳ ಆಂತರಿಕ ಬದುಕಿನ ವಿವಿಧ ಚಹರೆಗಳನ್ನು, ಅಲ್ಲಿಯ ಮುಗ್ದತೆ, ಸ್ವಾಭಿಮಾನ, ನೆಮ್ಮದಿ ಹುಡುಕುವ ಹಳ್ಳಿಯ ಮನಸ್ಸುಗಳ ಅಂತರಾಳವನ್ನು ಸೊಗಸಾಗಿ ಸೆರೆಹಿಡಿದು ಚಿತ್ರಿಸಿರುವ ಕತಾ ಸಂಕಲನ ಕುದರಿ ಮಾಸ್ತರ. ಬರಹಗಾರ ಟಿ.ಎಸ್. ಗೊರವರ ರಚನೆಯ ಈ ಕತಾ ಸಂಕಲನದ ಎಲ್ಲಾ ಕಥೆಗಳು ಗ್ರಾಮ ಬದುಕಿನ ಭಿನ್ನಭಿನ್ನ ಭಾವವನ್ನು ಹೊರಹಾಕುತ್ತವೆ.

Read More...

ಗ್ರಾಮೀಣ ಸಾಮಾಜಿಕ ಜನಜೀವನದಲ್ಲಿ 'ಓಡಿಹೋದ ಹುಡುಗ'

ಊರ ಆಲದಮರದ ಕೆಳಗಿರುವ ಹಿರಿಯಜ್ಜನೆಂದರೆ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಅಜ್ಜನಿಂದ ಕುತೂಹಲವೆನಿಸುವ ಕಥೆಗಳನ್ನು ಕೇಳುವುದು ಮಕ್ಕಳಿಗೆ ಸಂತಸದ ವಿಷಯವಾಗಿತ್ತು. ಅಜ್ಜನು ಹೇಳುವ ಭೂಮಿ ಆಗಸಕ್ಕೆ ಸಂಬಂಧಪಟ್ಟ ಕುತೂಹಲದ ಕಥೆಗಳು ಮಕ್ಕಳನ್ನು ಬೆರಗುಗೊಳಿಸುತ್ತಿದ್ದವು.

Read More...

ವ್ಯವಸ್ಥೆಗೆ ಕೀಲೆಣ್ಣೆಯಾಗಿ 'ವಿಮುಕ್ತೆ'

ಇಲ್ಲಿ ಸೀತೆ ಪ್ರತಿ ಕಥೆಯ ಜೀವನಾಡಿಯಾದರೂ ಶೂರ್ಪಣಕಿ, ಅಹಲ್ಯೆ, ರೇಣುಕೆ, ಊರ್ಮಿಳೆ, ಮಂಡೋದರಿ ಈ ಎಲ್ಲ ಸ್ತ್ರೀ ಪಾತ್ರಗಳ ಜೊತೆಗೆ ರಾಮನ ಮೂಲಕವೂ ಅನಾದಿಕಾಲದಿಂದಲೂ ಹೆಣ್ಣಿನ ಸುತ್ತಲೂ ಸುತ್ತಿಕೊಂಡಿರುವ ಶೃಂಖಲೆಗಳಿಂದ ವಿಮುಕ್ತಗೊಂಡು ಹೊರಬರುವಂತೆ ಪ್ರತಿ ಕಥೆಗಳಲ್ಲೂ ಬಿತ್ತರವಾದ ಸಂಭಾಷಣೆ ಅಂದಿನ ಕಾಲಘಟ್ಟವಷ್ಟೇ ಅಲ್ಲ ಇಂದಿಗೂ ಸತ್ಯವೆನ್ನುವಂತೆ ಮೂಡಿಬಂದಿದೆ.

Read More...

ದ್ವೇಷದ ದಳ್ಳುರಿಯಲ್ಲುರಿದ ಸ್ತ್ರೀ ಕಥನ ‘ಪಿಂಜರ್‌’

ರಶೀದ ಕೂಡ ಹಮೀದಾಳನ್ನು ಮದುವೆ ಆದ ಘಳಿಗೆಯಿಂದಲೂ ಕೂಡ ಏಕರೀತಿಯ ಭಾವಹೊತ್ತು ಮಡದಿಯೊಂದಿಗೆ ನೆಮ್ಮದಿಯ ಜೀವನ ನಡೆಸಿದ. ತಾನು ತಪ್ಪು ಮಾಡಿರುವೆ ಏಂದು ಗೊತ್ತಾದಾಗಲೇ ಪೂರೋಗೆ ಈ ಮೊದಲು ನಿಶ್ಚಯವಾಗಿದ್ದ ರಾಮಚಂದ್ರನೊಡನೆ ತನ್ನ ತಂಗಿಯನ್ನು ಹುಡುಕಿಕೊಡುವೆ ಎಂಬ ಮಾತುಕೊಟ್ಟು ಕೊನೆಗೂ ಆ ಮಾತನ್ನು ಇಡೇರಿಸಿದ

Read More...

ವಿಚಿತ್ರ ಸಾಹಸಗಳ ಕಥನ ‘ಡಾನ್ ಕ್ವಿಕ್ಸಾಟ್ ಸಾಹಸ’

"ಡಾನ್ ಕ್ವಿಕ್ಸಾಟ್"ನ ಕಥಾನಾಯಕ ಕಾದಂಬರಿಯ ಬಹುಮುಖ್ಯ ಹಾಗೂ ಹಾಸ್ಯಪ್ರಧಾನ ವ್ಯಕ್ತಿ. ಕಾದಂಬರಿಯುದ್ದಕ್ಕೂ ಹುಚ್ಚು ಸಾಹಸದಲ್ಲಿಯೇ ಕಳೆದ ಕ್ವಿಕ್ಸಾಟ್ ಹುಚ್ಚು ಓದುಗ. ಆರಂಭದಲ್ಲಿ ಮಧ್ಯಕಾಲೀನ ವೀರ ಸರದಾರರ ಸಾಹಸ ಕಥೆಗಳನ್ನು ಓದಿ ತಾನೂ ಅವರಂತೆ ಆಗಬೇಕೆಂದು ತಿರ್ಮಾನಿಸುತ್ತಾನೆ.

Read More...