About the Author

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.  

ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ಆಧುನಿಕ ಭಾರತ, ಜಗತ್ತನ್ನು ಬದಲಾಯಿಸುವುದು ಹೇಗೆ (ಭಾಷಾಂತರ).: ಸರಸ್ವತಿದೇವಿ ಗೌಡರ, ಪಂಡಿತ ರಮಾಬಾಯಿ ಸರಸ್ವತಿ, ಸಾವಿತ್ರಿಬಾಯಿ ಫುಲೆ, ಆರ್. ಕಲ್ಯಾಣಮ್ಮ, ಪದ್ಮಾಶೆಣೈ, ಪ್ರೇಮಾಕಾರಂತ, ಗಂಗೂಬಾಯಿ ಹಾನಗಲ್(ಬದುಕು-ಬರಹ). ಸ್ತ್ರೀ ವಿಮುಕ್ತಿ ಚಿಂತನೆ ಒಂದು ಅಧ್ಯಯನ, ಕತೆಯಾದಳು

ಹುಡುಗಿ (ಸಂಶೋಧನೆ),. ಕನ್ನಡ ಕಥನ ಸಾಹಿತ್ಯ ಮತ್ತು ಸ್ತ್ರೀ ನಿರ್ವಚನ (ಮಹಾ ಪ್ರಬಂಧ), ಅಂಚಿತ (ವಿಮರ್ಶೆ),  ವಿಶೇಷ ಲೇಖಕಿ, ದೇವರು ಧರ್ಮದ ಚಿಂತೆ, ಅನನ್ಯ, ಸಮೃದ್ದಿ (ಕೆ, ಉಷಾಪಿ ರೈ ಅಭಿನಂದನಾ ಗ್ರಂಥ), ಕಮಲಾದೇವಿ ಚಟ್ಟೋಪಾಧ್ಯಾಯ (ಸಂಪಾದನೆ/ಸಹ ಸಂಪಾದನೆ). ಇವರ ‘ಕಾಳಿಗಂಗಾ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

ಗೀತಾ ಶೆಣೈ

(13 Jun 1954)

Books by Author

Awards