
ಮೀನಾ ಕಾಕೋಡಕಾರ ರಚಿಸಿರುವ ಕತೆಗಳ ಸಂಕಲನವನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವೆಯ ಗ್ರಾಮೀಣ ಪರಿಸರ, ಅಲ್ಲಿಯ ಸಮುದ್ರ ತೀರ, ಎಡಬಿಡದೆ ಸುರಿಯುವ ಮಳೆ ಹಾಗೂ ಬಡಜನರ ಬದುಕಿನ ಹೋರಾಟದ ಚಿತ್ರಣವಿದೆ. ಮಾನವ ಸಂಬಂಧದ ಅತಿ ಸೂಕ್ಷ್ಮ ಎಳೆಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ.
ಮನುಷ್ಯನ ಬದುಕಿನಲ್ಲಿ ಹುಟ್ಟಿಗಿಂತ ಸಾವು ಬೀರುವ ಪರಿಣಾಮ ಹೆಚ್ಚು ಗಹನವಾದುದು ಎಂಬುದನ್ನು ಇಲ್ಲಿಯ ಅನೇಕ ಕಡೆಗಳಲ್ಲಿ ಮೀನಾ ಕಾಕೋಡಕಾರ ಎತ್ತಿ ತೋರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಘಟಿಸುವ ಮಹತ್ವಪೂರ್ಣ ಸಂಗತಿಗಳು, ಆ ವ್ಯಕ್ತಿಯ ಸಾವಿನೊಂದಿಗೆ ಇಲ್ಲವಾಗುವುದಾದರೆ, ಅಂತಿಮವಾಗಿ ಅವುಗಳಿಗೆ ಯಾವ ಅರ್ಥವೂ ಇಲ್ಲವೆಂದಾಗುವುದಿಲ್ಲವೇ ಎಂಬ ತಾತ್ವಕ ಪ್ರಶ್ನೆಯೊಂದಿಗೆ ಅವರು ಓದುಗರನ್ನು ಗಂಭೀರ ಚಿಂತನೆಗೆ ಒಳಪಡಿಸುತ್ತಾರೆ. ಇಂತಹ ಹಲವು ಕತೆಗಳು ಇಲ್ಲಿವೆ.
©2025 Book Brahma Private Limited.