ಕಾಳಿ ಗಂಗಾ

Author : ಗೀತಾ ಶೆಣೈ

Pages 280

₹ 275.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು

Synopsys

ಕೊಂಕಣಿಯ ಭಾಷೆಯಲ್ಲಿ ಮಹಾಬಳೇಶ್ವರ ಸೈಲ್‌ ಅವರು ಬರೆದ ಕಾಳಿ ಗಂಗಾ ಕಾದಂಬರಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯಲ್ಲಿ ಶಿಸ್ತು, ಪ್ರಾಮಾಣಿಕತೆ, ವಿಶ್ವಾಸ, ಕಾಳಜಿ, ಸಹಕಾರ ಇದ್ದಂತೆಯೇ ಮೂಢನಂಬಿಕೆ, ಸಂಪ್ರದಾಯಶೀಲತೆ, ಸ್ವಾರ್ಥ, ಜಗಳ, ಆಸ್ತಿ ಸಂಬಂಧ ದಾಯಾದಿ ಮತ್ಸರ, ಹಿರಿತನದ ಗತ್ತು, ಪರಂಪರಾಗತ ನಡವಳಿಕೆ ಹಾಸುಹೊಕ್ಕಾಗಿವೆ. ಕುಲ - ಮನೆತನದ ವಿಷಯಕ್ಕೆ ಇನ್ನಿಲ್ಲದ ಪ್ರಾಶಸ್ತ್ಯವಿದೆ. ಆಧುನಿಕತೆಯ ಹಲವು ವಿಚಾರಗಳು ಬದುಕಿನಲ್ಲಿ ಇಣುಕಿ ನೋಡಿದಾಗ ಆಘಾತ - ಗೊಂದಲಗಳೇರ್ಪಡುತ್ತವೆ. ಜಗತ್ತು ಬದಲಾಗುತ್ತಿದ್ದರೂ ಆಚರಣೆಯಲ್ಲಿ ಅದನ್ನೊಪ್ಪಿಕೊಳ್ಳುವ ಉದಾರತೆಯಂತೂ ಇಲ್ಲವೇ ಇಲ್ಲ. ಇಂತಹ ವಿಷಯಗಳನ್ನಿಟ್ಟುಕೊಂಡು ಹೆಣೆದಿರುವ ಕಾದಂಬರಿ ಇದಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Awards & Recognitions

Reviews

ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಅವರ ಮೊದಲ ಕಾದಂಬರಿ 'ಕಾಳಿ ಗಂಗಾ'. ಈ ಕಾದಂಬರಿ ಹಲವು ಮರುಮುದ್ರಣಗಳನ್ನು ಕಂಡಿದೆ. ಇದನ್ನು ಲೇಖಕಿ ಗೀತಾ ಶೆಣೈ ಅಷ್ಟೇ ಸೊಗಸಾದ ನಿರೂಪಣೆಯಲ್ಲಿ ಕನ್ನಡೀಕರಿಸಿದ್ದಾರೆ. ಗೋವಾದಿಂದ ಕರ್ನಾಟಕದ ಕಾಳಿ ನದಿ ತೀರಕ್ಕೆ ವಲಸೆ ಬಂದ ಕುಟುಂಬ ಕಾಲಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ, ಕೃಷಿ ಸಮಾಜವೊಂದು ನಿರ್ಮಾಣವಾಗುವ ಕಥಾವಸ್ತು ಈ ಕಾದಂಬರಿಯ ಹೂರಣ. ಮಂಜುಳಾ ಮತ್ತು ಸುಮನಾ ಎಂಬ ಎರಡು ಸ್ತ್ರೀಪಾತ್ರಗಳು ಕಾದಂಬರಿಯ ಜೀವಾಳ. ಶರಣಾಗತಿ ಮತ್ತು ಪ್ರತಿರೋಧದ ಪ್ರತಿಮಾರೂಪದಂತಿರುವ ಈ ಪಾತ್ರಗಳು ಓದಿನ ಆಸಕ್ತಿ ಹೆಚ್ಚಿಸುತ್ತವೆ.

ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 5)

Related Books