ಮಕ್ಕಳು ಮೆಚ್ಚುವ ಜಾತಕ ಕಥೆಗಳು

Author : ನಿರಂಜನ

Pages 184

₹ 90.00




Year of Publication: 2014
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ ಬಿ-ಮುಖ್ಯ ರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 0802244 3996

Synopsys

ಖ್ಯಾತ ಕಥೆಗಾರ, ಅನುವಾದಕ ನಿರಂಜನ ಅವರು ಬರೆದ ಕೃತಿ-ಮಕ್ಕಳು ಮೆಚ್ಚುವ ಜಾತಕ ಕಥೆಗಳು. ಮಕ್ಕಳ ಆರ್ಥಪೂರ್ಣ ಭವಿಷ್ಯಕ್ಕಾಗಿ ದಾರಿತೋರುವ ಕಥೆಗಳು, ಮನರಂಜನೆಯ ಜೊತೆ ಜೊತೆಗೆ ಮನೋವಿಕಾಸ, ಸರಳ ನಿರೂಪಣೆ, ರೇಖಾ ಚಿತ್ರಗಳು ವಿನೂತನ ವಿನ್ಯಾಸದಲ್ಲಿ ರೂಪಗೊಂಡ ಕೃತಿ ಇದು. ಒಟ್ಟು 24 ಕಥೆಗಳು ಒಳಗೊಂಡಿವೆ. 

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books