ಏಕಾಂಗಿನಿ

Author : ನಿರಂಜನ

Pages 228

₹ 1.00




Year of Publication: 1955
Published by: ರಸಿಕ ರಂಜಿನಿ ಪ್ರಕಾಶನ
Address: ಅರಸೀಕೆರೆ

Synopsys

ಹಿಂದೂ ವಿವಾಹ ಶಾಸನಕ್ಕೆ ಬೆಂಬಲವಾಗಿ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಲೋಕಸಭೆಯಲ್ಲಿ (1955 ಮೇ 5) ಮಾಡಿದ ಭಾಷಣಣವಿದು-’ ಹಿಂದೂ ವಿವಾಹವು ಧಾರ್ಮಿಕ ಸಮಾರಂಭ. ಅದನ್ನು ಯಾರೂ ಅಲ್ಲಗಳಿಯುವುದಿಲ್ಲ. ಅಂದಮಾತ್ರಕ್ಕೆ, ಇಬ್ಬರನ್ನು ಬಿಗಿಯಾಗಿ ಕಟ್ಟುವುದು, ಒಬ್ಬರನ್ನೊಬ್ಬರು ಕಚ್ಚುವುದು, ದ್ವೇಷಿಸುವುದು, ಒಬ್ಬರ ಬದುಕನ್ನು ಇನ್ನೊಬ್ಬರು ನರಕ ಸಮಾನವಾಗಿ ಮಾಡುವುದು...ಎಂದರ್ಥವಲ್ಲ’ ಇದರ ಒಟ್ಟು ಸಾರವೇ ಕಾದಂಬರಿಯ ಕಥಾವಸ್ತು.

‘ವಿವಾಹ ವಿಚ್ಚೇದನದ ಹಕ್ಕು ಬಂದಿದೆ ಎಂದಮಾತ್ರಕ್ಕೆ ದಾಂಪತ್ಯ ಜೀವನದಲ್ಲೆಲ್ಲ ವಿರಸವನ್ನೇ ಹುಡುಕುತ್ತಾ ಹೋಗಬೇಕು ಎಂದರ್ಥವಲ್ಲ; ಅಲ್ಲವೆ? ವಿಚ್ಚೇದನ  ತತ್ರವನ್ನು ಒಪ್ಪಿದೊಡನೆಯೇ ಕಾಲಕಾಲಕ್ಕೂ ಬೇರೆ ಬಟ್ಟೆ ಕೊಳ್ಳುವಂತೆ ಬದುಕಿನ ಒಡನಾಡಿಯನ್ನು ಬದಲಾಯಿಸಿಕೊಳ್ಳಬೇಕೆಂದಿಲ್ಲ, ಅಲ್ಲವೆ?’ ಲೇಖಕರ ಈ ರೀತಿಯ ವಿಚಾರಗಳು ಸಮರ್ಥನೆ ಪಡೆಯುತ್ತಾ ಹೋಗುತ್ತವೆ. ಒಂದು ಕಾನೂನು ಕಥಾವಸ್ತುವಾಗಿ ಸಾಹಿತ್ಯಕ ಕೃತಿಯ ರೂಪ ಪಡೆಯುವ ಕಲೆಗಾರಿಕೆಗೆ ಏಕಾಂಗಿನಿ ಉತ್ತಮ ಮಾದರಿ ಕೃತಿಯಾಗಿದೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books