ನಮ್ಮ ನಡುವಿನ ಗೋಡೆ

Author : ನಿರಂಜನ

Pages 102

₹ 1.00
Year of Publication: 1951
Published by: ಪುರೋಗಾಮಿ ಪ್ರಕಾಶನ
Address: # 16, 3ನೇ ರಸ್ತೆ, ಚಾಮರಾಜಪೇಟೆ, ಬೆಂಗಳೂರು-2.

Synopsys

ನಮ್ಮ ನಡುವಿನ ಗೋಡೆ-ಕಥಾ ಸಂಕಲನ. ನಿರಂಜನ ಹಾಗೂ ವಾಸುದೇವ ಅವರು ಸಂಪಾದಿಸಿದ್ದು, ಶಿವೇಶ್ವರ ದೊಡ್ಡಮನಿ ಅವರ ನಮ್ಮ ನಡುವಿನ ಗೋಡೆ, ನಿರಂಜನರ ಇಬ್ಬರು ಗುಂಡರು, ಹೊಸ ಕೂಸು, ಸೈತಾನನ ಸ್ಮಶಾನಯಾತ್ರೆ ಹಾಗೂ ನಂಬರ 108 ಮತ್ತು ನೀಲಿ ಬುಕ್ ಕೋಟು ಮತ್ತು ಚೆನ್ನವೀರ ಕಣವಿ ಅವರ ಮಣ್ಣಿನ ಮಕ್ಕಳು-ಹೀಗೆ ಒಟ್ಟು ಆರು ಕಥೆಗಳನ್ನು ಇಲ್ಲಿ ಸಂಪಾದಿಸಲಾಗಿದೆ. 1947ರಲ್ಲಿ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ಜನಶಕ್ತಿ ಕನ್ನಡ ವಾರಪತ್ರಿಕೆಯಲ್ಲಿ ಮೊದಲ 5 ಕಥೆಗಳು ಪ್ರಕಟವಾದವು. ಕೊನೆಯ ಕಥೆ ( ನಂಬರ 108 ಮತ್ತು ನೀಲಿ ಬುಕ್ ಕೋಟು ) ಕತೆಗಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books