ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ

Author : ಸಿ.ಎಸ್. ದ್ವಾರಕಾನಾಥ್

Pages 360

₹ 713.00




Year of Publication: 2020
Published by: ಕಲಾಕುಸುಮ ಕ್ರಿಯೇಷನ್ಸ್
Address: # 2176, 4ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು- 560040,
Phone: 9342520389

Synopsys

ಲೇಖಕ ಸಿ.ಎಸ್. ದ್ವಾರಕನಾಥ ಅವರ ಕೃತಿ-ಭಾರತದ ಸಂವಿಧಾನ: ಐತಿಹಾಸಿಕ ದಾಖಲೆಗಳೊಂದಿಗೆ. ಭಾರತದ ಸಂವಿಧಾನದ ಮಹತ್ವ ಹಾಗೂ ಔನ್ನತ್ಯ ಕುರಿತು ಮನದಟ್ಟು ಮಾಡಿಸಿಕೊಡುವ ಕಳಕಳಿ ಇಲ್ಲಿದೆ. ಭಾರತದ ಸಂವಿಧಾನ ಕುರಿತು ಹಗುರವಾಗಿ ಮಾತನಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕೃತಿಯು ಕನ್ನಡದಲ್ಲಿ ಮೂಡಿ ಬಂದಿದ್ದು, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ ಎಂದು ಕಾನೂನು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಲೇಖಕರ ಕಳಕಳಿಯನ್ನು ಶ್ಲಾಘಿಸಿದ್ದಾರೆ.

About the Author

ಸಿ.ಎಸ್. ದ್ವಾರಕಾನಾಥ್

ಸಿ.ಎಸ್. ದ್ವಾರಕನಾಥ ಅವರು ವೃತ್ತಿಯಿಂದ ವಕೀಲರು. 2019ನೇ ಸಾಲಿನ ’ಅನಿಕೇತನ ಪ್ರಶಸ್ತಿ’ ಪುರಸ್ಕೃತರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.  'ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018'  ಪ್ರಶಸ್ತಿ ಪುರಸ್ಕೃತರು. ವಾರ್ತಾ ಭಾರತಿ ದಿನಪತ್ರಿಕೆಯ ಅಂಕಣಕಾರರು.  ಕೃತಿಗಳು: ಮೂಕ ನಾಯಕ ಹಾಗೂ ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ, ಗಾಂಧಿಮಟ್ಟಿದ ನಾಡಿನಲ್ಲಿ (ಪ್ರವಾಸ ಕಥನ)  -ಇವರ ಕೃತಿಗಳು.  ...

READ MORE

Related Books