ಗ್ರಾಹಕ ಜಾಗೃತಿ (ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮಾಲಿಕೆ 1)

Author : ವೈ.ಜಿ.ಮುರಳೀಧರನ್

Pages 52

₹ 75.00




Year of Publication: 2023
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

ಗ್ರಾಹಕ ಜಾಗೃತಿ ಎಂದ ಕೂಡಲೇ ಗ್ರಾಹಕರ ಸಂರಕ್ಷಣಾ ಕಾಯ್ದೆ ಮತ್ತು ಗ್ರಾಹಕರ ವೇದಿಕೆಗಳಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯುವುದು ಎಂದು ಭಾವಿಸಲಾಗಿದೆ. ಆದರೆ, ಇದು ತಪ್ಪು ಕಲ್ಪನೆ. ಗ್ರಾಹಕರ ರಕ್ಷಣೆಗೆ ಕಾನೂನು ಒಂದು ಪರಿಣಾಮಕಾರಿ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿದ್ಯಾರ್ಥಿಗಳಿಗೆ, ಅದಕ ್ಕಿಂತ ಹೆಚ್ಚಾಗಿ ಗ್ರಾಹಕ ಶಿಕ್ಷಣ ನೀಡುವ ಅಗತ್ಯವಿದೆ. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೈಪಿಡಿಯನ್ನು ಸಿದ್ಧಪಡಿಸಿದ್ದೇವೆ. ಈ ಕೈಪಿಡಿಯು ವಿದ್ಯಾರ್ಥಿಗಳಲ್ಲಿ ಗ್ರಾಹಕ ಸಂರಕ್ಷಣೆಯ ಬಗ್ಗೆ ಇರಬೇಕಾದ ಕನಿಷ್ಠ ಮಾಹಿತಿಯನ್ನು ನೀಡುತ್ತದೆ. ಗ್ರಾಹಕ ಕ್ಲಬ್‌ಗಳಲ್ಲಿ ಇದನ್ನು ಪಠ್ಯಪುಸ್ತಕವನ್ನಾಗಿ ಉಪಯೋಗಿಸಬಹುದು. * ದೇಶದಲ್ಲಿ ಬಹಳಷ್ಟು ಬಳಕೆದಾರರು ತಾವು ಕೊಂಡ ವಸ್ತುಗಳಿಂದಾಗಿ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಿಲ್ಲದೆ ಇಲ್ಲ. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರಗಳಿವೆ. ಅದನ್ನು ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ನೀವು ಕೊಟ್ಟ ಹಣಕ್ಕೆ ತಕ್ಕ ಮೌಲ್ಯದ ಸರಕನ್ನು ಪಡೆಯುವುದು ನಿಮ್ಮ ಹಕ್ಕು. ಒಬ್ಬ ಗ್ರಾಹಕರಾಗಿ ನಿಮ್ಮ ಹಕ್ಕುಗಳು, ಜವಾಬ್ದಾರಿಗಳು ಯಾವುವು, ಯಾವುದೇ ವಸ್ತು, ಸರಕು ಅಥವಾ ಸೇವೆ ಖರೀದಿಸುವ ಮುನ್ನ ನೀವು ಗಮನಿಸಬೇಕಾದ ಅಂಶಗಳ ಬಗ್ಗೆ ಈ ಪುಸ್ತಕ ಮಾಹಿತಿ ನೀಡುತ್ತದೆ. ಒಂದು ವೇಳೆ ನಿಮಗೆ ಮೋಸ ಆಗಿದೆ ಎಂದಾದರೆ ಅದಕ್ಕೆ ಪರಿಹಾರ ಪಡೆಯುವುದು ಹೇಗೆ ಮತ್ತು ನಿಮ್ಮ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಸೂಕ್ಷ್ಮ ಪರಿಚಯ ಮತ್ತು ಅದನ್ನು ಬಳಸಿಕೊಳ್ಳುವ ಕ್ರಮದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Excerpt / E-Books

https://amulyapustaka.myinstamojo.com/-208da/p3718306/

Related Books