ಯಾರ ಮಾಹಿತಿ? ಯಾರ ಹಕ್ಕು?

Author : ವೈ.ಜಿ.ಮುರಳೀಧರನ್

Pages 240

₹ 125.00




Year of Publication: 2011
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು -560040
Phone: 9448804905

Synopsys

ಲೇಖಕ ವೈ.ಜಿ. ಮುರಳೀಧರ ಅವರು ಸುಮಾರು ಇಪ್ಪತ್ತು ವರ್ಷಗಳಿಂದ ಗ್ರಾಹಕ ಚಳವಳಿ, ಮಾಹಿತಿ ಹಕ್ಕು, ನಾಗರಿಕ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸಮುದಾಯಕ್ಕೆ ಕಾನೂನು ಮತ್ತು ಮಾಹಿತಿಗಳು ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ’ಯಾರ ಮಾಹಿತಿ? ಯಾರ ಹಕ್ಕು’ ಕೃತಿಯು ಹೊರಬಂದಿದೆ. 

ಮಾಹಿತಿ  ನಿಮ್ಮ ಹಕ್ಕು ಭಾಗ 1 ರಲ್ಲಿ ಮಾಹಿತಿ ಹಕ್ಕು ಕಾನೂನು : ಒಂದು ಪಕ್ಷಿನೋಟ, ಮಾಹಿತಿ ಪಡೆಯುವ ವಿಧಾನ, ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವ ವಿಧಾನ, ಮಾಹಿತಿ ಮಡೆಯಲು ಯಾರು ಅರ್ಹರು?, ಶಿಕ್ಷಣದ ಮೂಲಕ ಮಾಹಿತಿ ಹಕ್ಕು ಜಾಗೃತಿ, ಇತ್ಯಾದಿ ವಿಷಯಗಳ ಬಗ್ಗೆ ಪರಿಚಯಿಸುತ್ತಾರೆ. 

ಮಾಹಿತಿ ಹಕ್ಕು- ಸ್ಥಿತಿಗತಿ ಭಾಗ-2 ರಲ್ಲಿ ಮಾಹಿತಿ ಹಕ್ಕು ಕಾನೂನಿನ ಅನುಷ್ಠಾನ, ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕರ್ತವ್ಯ, ಅನುಷ್ಠಾನದಲ್ಲಿನ ಲೋಪದೋಷಗಳು, ಮಾಹಿತಿ ನೀಡದಿರಲು ಹಲವಾರು ಕಾರಣಗಳು ಮುಂತಾದ ವಿಷಯ ಪ್ರಸ್ತಾಪಗಳ ಬಗ್ಗೆ ಕುರಿತು ಚರ್ಚಿಸಲಾಗಿದೆ. 

ವಿಸ್ತಾರಗೊಳ್ಳುತ್ತಿರುವ ಚೌಕಟ್ಟು ಭಾಗದಲ್ಲಿ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಕಾನೂನಿನ ತೆಕ್ಕೆಗೆ ನ್ಯಾಯಾಲಯ, ರಾಜಕೀಯ ಪಕ್ಷಗಳಿಗೂ ಅನ್ವಯಿಸುವ ಮಾಹಿತಿ ಹಕ್ಕಿನ ಕಾನೂನು, ಮಾಹಿತಿ ಹಕ್ಕು ಮತ್ತು ನ್ಯಾಯಾಂಗ ಮುಂತಾದವುಗಳು ಪ್ರಮುಖವಾದ ಬರಹಗಳಾಗಿವೆ. 

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Related Books