ಮಹಿಳೆ-ಕಾನೂನು-ಪರಿಹಾರ

Author : ಆರ್. ಸುನಂದಮ್ಮ

Pages 274

₹ 300.00
Published by: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

Synopsys

ನ್ಯಾಯದಾನವನ್ನು ಪರಿಣಾಮಕಾರಿಯಾಗಿ ಅರಿಯುವ ಶಕ್ತಿ ಮಹಿಳೆಯರಿಗೆ ಬೇಕಾಗುತ್ತದೆ ಎಂಬುದನ್ನು ಮನಗಂಡ  ಆರ್‌.ಸುನಂದಮ್ಮ ಅವರು ಕೃತಿಯಲ್ಲಿ ಸ್ತ್ರೀಯರಿಗೆ ಅನುಕೂಲವಾಗುವಂತಹ ವಿವಿಧ ಕಾನೂನುಗಳನ್ನು ಪರಿಚಯಿಸಿದ್ದಾರೆ. 

ವರದಕ್ಷಿಣೆ, ಭ್ರೂಣ ಲಿಂಗ ಪತ್ತೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಆಗದಂತೆ ಮಹಿಳೆಗೆ ರಕ್ಷಣೆಗೆ ಒದಗಿಸುವುದು, ದೇವದಾಸಿ ಪದ್ಧತಿಯ ನಿಷೇಧಕ್ಕೆ ಜಾರಿಗೆ ತಂದ ಕಾಯ್ದೆ, ಹೆರಿಗೆ ಸೌಲಭ್ಯಕ್ಕೆ ಸಂಬಂಧಿಸಿದ ಕಾಯ್ದೆ, ಅತ್ಯಾಚಾರ ತಡೆ ಕಾಯ್ದೆ, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು, ಕೌಟುಂಬಿಕ ಹಿಂಸೆ ತಡೆ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆ, ವಿವಿಧ ಮಹಿಳಾ ಕಾನೂನುಗಳ ಕುರಿತು ಇರುವ  ಒಟ್ಟು 11 ಲೇಖನಗಳ ಸಂಗ್ರಹ ಇದು. 

About the Author

ಆರ್. ಸುನಂದಮ್ಮ
(22 August 1960)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು.  ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು.  ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್‌.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ.  ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು. ...

READ MORE

Related Books