ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ- 2019

Author : ರಾಜಾರಾಂ ತಲ್ಲೂರು

Pages 40

₹ 50.00




Year of Publication: 2019
Published by: ಬಹುರೂಪಿ ಪ್ರಕಾಶನ
Address: ಎಂಬೆಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 7019182729

Synopsys

ವಿವಾದಕ್ಕೀಡಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆ- 2019 ಏನು? ಯಾಕಿದನ್ನು ಜಾರಿಗೆ ತರಲು ಸರ್ಕಾರಗಳು ಹವಣಿಸುತ್ತಿವೆ. ಈ ಕಾಯಿದೆ ಜಾರಿಯಾದರೆ ಆಗುವ ಸಮಸ್ಯೆಗಳೇನು ಎಂಬುದರ ಕುರಿತು ರಾಜಾರಾಂ ತಲ್ಲೂರು ಬರೆದಿರುವ ’ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ- 2019’ ಕೃತಿಯು ವಿವರಿಸುತ್ತದೆ.

ಕೃತಿಯ ಬಗ್ಗೆ ಬರೆಯುತ್ತಾ ಲೇಖಕರು ’ಜನರಿಂದ, ಜನರಿಗಾಗಿ ಇರಬೇಕಾದ ಜನರ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಇರುವ ಏಕೈಕ ದಿಕ್ಕೂಚಿ-ಮಾರ್ಗದರ್ಶಿ, ಮಾನದಂಡ ಎಂದರೆ "ಸಂವಿಧಾನ.” ಆದರೆ ಯಾವ ಸಂವಿಧಾನದ ಹೆಸರಿನಲ್ಲಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದಾರೋ, ಅದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸ್ವಹಿತಾಸಕ್ತಿಗಳನ್ನು ಸಾಧಿಸಲು ಹೊರಟಾಗ ಪೌರತ್ವ (ತಿದ್ದುಪಡಿ) ಕಾಯಿದೆ -2019 ಯಂತಹ ಕಾಯಿದೆಗಳು ಶಾಸನಸಭೆಗಳಲ್ಲಿ ಸಿದ್ಧಗೊಳ್ಳುತ್ತವೆ. ಈಗಾಗಲೇ ಹತ್ತು ಬಾರಿ ತಿದ್ದುಪಡಿ ಕಂಡಿರುವ ಈ ಕಾಯಿದೆ,  ಈ ಹಿಂದೆ ಕನಿಷ್ಠ ಎರಡು ಬಾರಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಬದಲಾಗಿದೆ. ಆಯಾ ಕಾಲದ ರಾಜಕೀಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಈ ದೂರದೃಷ್ಟಿ ಇಲ್ಲದ ನಿರ್ಧಾರಗಳು, ನಾವು ಭಾರತೀಯರು ನಮ್ಮ ಶಾಸಕಾಂಗವನ್ನು ಲಘುವಾಗಿ ಪರಿಗಣಿಸಿರುವುದರ ಫಲ ಎಂದೇ ಅನ್ನಿಸುತ್ತದೆ.’ ಎಂದಿದ್ದಾರೆ.

 

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Related Books