ಏನು ಜನ! ಎಂಥ ಗಾನ!

Author : ದಮಯಂತಿ ನರೇಗಲ್ಲ

Pages 122

₹ 100.00




Year of Publication: 2015
Published by: ಅಭಿನವ ಪ್ರಕಾಶನ
Address: # 17/18-2 1 ನೇ ಮೇನ್, ಮಾರೇನಹಳ್ಳಿ, ವಿಜಯನಗರ, ಬೆಂಗಳುರು-560040

Synopsys

ಮರಾಠಿ ಮೂಲದ ಲೇಖಕ ಅರವಿಂದ ಗಜೇಂದ್ರಗಡಕರ ಅವರ ‘ಅಸೇ ಸೂರ, ಅಶೀ ಮಾಣಸ್’ ಕೃತಿಯನ್ನು ಲೇಖಕಿ ದಮಯಂತಿ ನರೇಗಲ್ಲ ಅವರು ಕನ್ನಡಕ್ಕೆ ಅನುವಾದಿಸಿದ್ದು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರು, ಬಸವರಾಜ ರಾಜಗುರು, ಶಹನಾಯ್ ಸಾಮ್ರಾಟ ಬಿಸ್ಮಿಲ್ಲಾ ಖಾನ್, ಭೀಮಣ್ಣ, ಯಹೂದಿ ಮೆನುಹಿನ್, ಶಿವರಾಮ ಬುವಾ, ಗಾನ ಸರಸ್ವತಿ ಕಿಶೋರಿ ಅಮೋನ್‌ಕರ್ ಹೀಗೆ ಸಂಗೀತ ದಿಗ್ಗಜರ ಬದುಕು-ಸಂಗೀತ ಸಾಧನೆಯನ್ನು ಸಂಕ್ಷಿಪ್ತವಾಗಿಯಾದರೂ ಇಡೀ ಬಹುವಿಸ್ತೃತ ನೆಲೆಯಲ್ಲಿ, ಬಹುಮುಖೀಯವಾಗಿ ಕಟ್ಟಿಕೊಡುವ ಮಹತ್ವದ ಕೃತಿ ಇದು.

About the Author

ದಮಯಂತಿ ನರೇಗಲ್ಲ
(12 May 1937)

ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು  ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು.  ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು.  ...

READ MORE

Related Books