ಸ್ವರ ರಾಗ ಸುಧಾ

Author : ಡಿ.ಎಸ್. ಶ್ರೀನಿವಾಸ್ ಪ್ರಸಾದ್

Pages 120

₹ 135.00




Year of Publication: 2021
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು
Phone: 9844192952

Synopsys

ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ಕೃತಿ-ಸ್ವರ ರಾಗ ಸುಧಾ. ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್ ಎಂಬ ಉಪಶೀರ್ಷಿಕೆಯ ಈ ಕೃತಿಯು ಪ್ರಕೃತಿಯ ಲಯ, ಸಂಗೀತದ ಅಸ್ತಿತ್ವ ಕುರಿತು ಹೇಳುತ್ತದೆ. ಪ್ರಣವದಿಂದ ಸೃಷ್ಟಿ, ತಾಂಡವದಿಂದ ಲಯ - ಪ್ರಳಯ. ಇದರಲ್ಲಿನ ನಾದ ನಿನಾದಗಳ ಝೇಂಕಾರಕ್ಕೆ ಸಂಗೀತ ಎಂದು ಕರೆಯಲಾಗಿದೆ. ಅದನ್ನು ಶಾಸ್ತ್ರೀಯವಾಗಿಯೂ ಒಪ್ಪ ಓರಣಗೊಳಿಸಲಾಗಿದೆ. ಶಬ್ದದಲ್ಲಿಯೇ ಮೃದು ಮಧುರ ಆಪ್ತತೆ ಅಥವಾ ಕೇಳಲಾಗದ ಕರ್ಕಶತೆ ನಡುವಿನ ಅಂತರ ಹಾಗೂ ಸಂಗೀತ ಮತ್ತು ಸಿನಿಮಾ ಜಗತ್ತಿನ ಸ್ವರ ಮಾಧುರ್ಯದ ಶಾಸ್ತ್ರೀಯ ಪರಿಚಯವನ್ನೂ ನೀಡುತ್ತದೆ.

About the Author

ಡಿ.ಎಸ್. ಶ್ರೀನಿವಾಸ್ ಪ್ರಸಾದ್

ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು.  ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು.  ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್.  ...

READ MORE

Related Books