ಕಾಲಕನ್ನಡಿ

Author : ಚಿದಾನಂದ ಸಾಲಿ

Pages 94

₹ 80.00




Year of Publication: 2014
Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ , ಚನ್ನಪಟ್ಟಣ ಅಂಚೆ, ಎಮ್ಮಿಗನೂರು ಮಾರ್ಗ ಬಳ್ಳಾರಿ - 583113
Phone: 9480353507

Synopsys

ಲೇಖಕ ಚಿದಾನಂದ ಸಾಲಿಯವರು ಭಾರತದ ಹಲವು ಸಾಹಿತ್ಯ ಪ್ರತಿಭೆಗಳೊಂದಿಗೆ ನಡೆಸಿದ ಮುಖಾಮುಖಿಗಳು ’ಕಾಲಕನ್ನಡಿ'ಯಲ್ಲಿವೆ. ಕಲಾವಿದರು ಹಾಗೂ ಸಾಹಿತಿಗಳ ಖಾಸಗಿ ಲೋಕದ ಪ್ರಶ್ನೆಗಳು, ಅವರ ಕಲೆಯ ಸ್ವರೂಪ ಹಾಗೂ ಕಾಲದ ವಿದ್ಯಮಾನಗಳಿಗೆ ಅವರ ಸ್ಪಂದನೆಗಳನ್ನು ದಾಖಲಿಸುವ ಕೆಲಸವನ್ನೂ ಈ ಪುಸ್ತಕ ಪರಿಚಯಿಸುತ್ತದೆ.  ಸಾಲಿಯವರ ಕಥನ ಪ್ರತಿಭೆ ಹಾಗೂ ತಾವು ಸಂದರ್ಶಿಸುತ್ತಿರುವವರ ಕಲಾವಿದರ, ಸಾಹಿತಿಗಳ ಕೃತಿಗಳ ಬಗೆಗಿನ ವಿಮರ್ಶಾತ್ಮಕ ಗ್ರಹಿಕೆಗಳು ಕೂಡ ಸ್ಪಷ್ಟವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.  ಭಾರತದ ಸಾಹಿತ್ಯ ಚಳುವಳಿಗಳು ಹಾಗೂ ಸಾಮಾಜಿಕ ಚಳುವಳಿಗಳ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳು ರೂಪುಗೊಳ್ಳುವ ವಿಶಿಷ್ಟ ರೀತಿಗಳನ್ನೂ ಸಂದರ್ಶನದ  ಮಾತುಕತೆಗಳ ರೂಪದಲ್ಲಿ ಹೊರತಂದಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕತಿಗೆ ಅಗತ್ಯವಾಗಿರುವ ಹೊಸ ಪ್ರೇರಣೆಗಳನ್ನೂ ಹುಡುಕುವ ’ ಕಾಲ ಕನ್ನಡಿ' ಪುಸ್ತಕ ಭಾರತೀಯ ಸಾಹಿತ್ಯದ ವಿಭಿನ್ನ ಧಾರೆಗಳನ್ನೂ ಭಾರತದ ಹಲವು ಕಲಾಪ್ರಕಾರಗಳನ್ನೂ ತೌಲನಿಕವಾಗಿ ಅರಿಯಬಯಸುವವರಿಗೆ ಉತ್ತಮ ಆಕರವಾಗಿದೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books