About the Author

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು.

ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ (ಸಂಶೋಧನೆ, ಕನ್ನಡ ವಿ.ವಿ ಹಂಪಿ); ಕಾಲಕನ್ನಡಿ (ಸಂದರ್ಶನಗಳು); ಕರುಳ ತಪ್ಪದ ಮೇಳ( ನಾಟಕ); ಒಂದು ಬೋಗಸೆ ಬಿಸಿಲು(ಲೇಖನಗಳು); ಮರದ ಹನಿ ಮಣ್ಣಿಗೆ(ತುಂಬುಗಗಳು); ಕಡಲ ಹಕ್ಕಿಯ ರೆಕ್ಕೆ (ಸಂಪಾದನೆ); ಕನ್ನಡ ಗಜಲ್‌ (ಸಂಪಾದನೆ: ಕೇಂದ್ರ ಸಾಹಿತ್ಯ ಅಕಾದೆಮಿ); ಎಲೆಯುದುರೂ ಕಾಲ (ಅನುವಾದ); ಕಾಲಸಾಕ್ಷಿಯಾಗಿ (ಅನುವಾದ) ಯಜ್ಞ (ಅನುವಾದ, ಕೇಂದ್ರ ಸಾಹಿತ್ಯ ಅಕಾದೆಮಿ) ಮೋಹನಾ ಮೋಹನಾ(ಅನುವಾದ, ಕೇಂದ್ರ ಸಾಹಿತ್ಯ ಅಕಾಡೆಮಿ) (ನಾಲ್ಕೂ ತೆಲುಗಿನಿಂದ); ನೀಲಿ ಸರೋವರ; ಲೀಲಾಳ ಚಮತ್ಕಾರ ಎರಡೂ ಅನುವಾದ ಹಿಂದಿಯಿಂದ, ಪ್ರ: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ): ಇಂದ್ರಸಭಾ (ಸಹ ಅನುವಾದ, ಉರ್ದುವಿನಿಂದ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ); ಟೈನ್ ಟು ಪಾಕಿಸ್ತಾನ್ (ರೂಪಾಂತರ, ಪ್ರ: ಕ.ಧಾ.ಭಾ. ಪ್ರಾಧಿಕಾರ) ಕಥಾನವಕಾಶ (ಅನುವಾದ), ಪದ್ಯ ಪರದೇಶ(ಅನುವಾದ) ಕೃತಿಗಳು

ಕಣವಿ ಕಾವ್ಯ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಪ್ರೊ. ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಬೇಂದ್ರ ಗ್ರಂಥ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ (ಎರಡು ಸಲ). ಸೋಮೇಶ್ವರ ಕಥಾ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಕಟ್ಟಿಮನಿ ಯುವ ಸಾಹಿತ್ಯ ಪ್ರಶಸ್ತಿ, 2020ನೇ ಸಾಲಿನ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳಿಗೆ ಭಾಜನ, ಕರ್ನಾಟಕ ಸರ್ಕಾರದ ಆರನೇ ತರಗತಿ ದ್ವಿತೀಯ ಭಾಷೆ ಕನ್ನಡ, ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿಎ ದ್ವಿತೀಯ ಸೆಮಿಸ್ಟರ್ ರ ಬೇಸಿಕ್‌ ಕನ್ನಡ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿಜಿಎಂ ಬೇಸಿಕ್ ಕನ್ನಡ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿ ಮೂರನೇ ಸೆಮಿಸ್ಟರ್ ಮತ್ತು ಕಸಾಪ ರತ್ನ ಪರೀಕ್ಷೆಯ ಪಠ್ಯಗಳಲ್ಲಿ ಬರೆಹಗಳು ಸೇರ್ಪಡೆ. ಕೆಲವು ಬಿಡಿ ಬಿಡಿ-ಕತೆಗಳು ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷಿಗೆ ಅನುವಾದಿತ.

ಚಿದಾನಂದ ಸಾಲಿ

Awards

BY THE AUTHOR