ನೆಲದ ನೆನಹು

Author : ವೀರಭದ್ರಪ್ಪ ಬಿಸ್ಲಳ್ಳಿ

Pages 148

₹ 150.00




Year of Publication: 2020
Published by: ವಿಸ್ಮಯ ಬುಕ್ ಹೌಸ್
Address: #1542, ಮೊದಲನೇ ಮಹಡಿ, ಸಿ&ಡಿ ಬ್ಲಾಕ್, ಅನಿಕೇತನ ರಸ್ತೆ, ಕುವೆಂಪುನಗರ ಮೈಸೂರು
Phone: 9448338956

Synopsys

ಕವಿ ಹಾಗೂ ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ ಅವರ ’ನೆಲದ ನೆನಹು’ ಐತಿಹಾಸಿಕ ವಿಚಾರಗಳನ್ನೊಳಗೊಂಡ ಕಥನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಮುಜಾಫರ್ ಅಸ್ಸಾದಿ ಅವರು, ’ನಾವು ಮಾನಸಿಕ ವಸಾಹತು ಹಿಡಿತದಿಂದ ಬಿಡುಗಡೆ ಹೊಂದಬೇಕು’ ಎಂಬ ಮಹಾತ್ಮ ಗಾಂಧಿ ಅವರ ಮಾತು ಚಾರಿತ್ರಿಕ ಯಜಮಾನಿಕೆಯಿಂದ ಬಿಡುಗಡೆಗೊಳಿಸುವ ಕಥನ, ಸಂಕಥನ, ಕರೆ. ಉದ್ಘೋಷ ಏನಾದರೂ ಅನ್ನಬಹುದು. ವೀರಭದ್ರಪ್ಪ ಬಿಸ್ಲಳ್ಳಿ ಯವರ ’ನೆಲದ ನೆನಹು’ ಪುಸ್ತಕವನ್ನು ಇದೇ ದೃಷ್ಟಿಕೋನದಲ್ಲಿ ನೋಡುವುದು ಮುಖ್ಯವೆನಿಸುತ್ತದೆ. ಚಾರಿತ್ರಿಕವಾಗಿ ಮೂಲೆ ಗುಂಪಾಗಿದ್ದ ಲ್ಯಾಟಿನ್, ಅಮೆರಿಕವನ್ನು ಮತ್ತು ಅದರ ಇತಿಹಾಸವನ್ನು ಬದಲಿಸಿದ ವ್ಯಕ್ತಿಗಳನ್ನು ಪರಿಚಯಿಸಿ, ವಿಸ್ಕೃತಿಯಿಂದ ಹೊರ ಬರಲು ಈ ಪುಸ್ತಕ ಸಹಾಯ ಮಾಡುತ್ತದೆ. ಅಮೆರಿಕದ ಸಾಮ್ರಾಜ್ಯಶಾಹಿಗೆ ಸೆಟೆದು ನಿಂತ ಚೆಗುವೆರಾ ಅದರ ಕಾರಾಸ್ಥಾನಕ್ಕೆ ಬಲಿಯಾದ. ಹ್ಯೂಗೊ ಶಾವೇಝ್ ನಂತೂ ಅಮೆರಿಕದ ಬಂಡವಾಳಶಾಹಿ ಪ್ರತಿರೋಧಕ್ಕೆ ಇನ್ನೊಂದು ಸಾಕ್ಷಿಯಾದ ವ್ಯಕ್ತಿಯಾಗಿದ್ದಾನೆ. ವಿಶ್ವಬ್ಯಾಂಕ್, ವಿಶ್ವ ಹಣಕಾಸು ಸಂಸ್ಥೆಯ ಹಸ್ತಕ್ಷೇಪವನ್ನು ನಿರಾಕರಿಸಿದ್ದು, ಅತ್ಯಂತ ಆಯಕಟ್ಟಿನ ಕೈಗಾರಿಕೆಗಳ ರಾಷ್ಟ್ರೀಕರಣ, ಸಾಲದ ವರ್ತುಲದಿಂದ ಬಿಡುಗಡೆಯ ವಿಚಾರಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಇಂಥ ಪ್ರಮುಖ ಐತಿಹಾಸಿಕ ಕಾರಣಗಳಿಂದ ’ ನೆಲದ ನೆನಹು’ ಅತ್ಯುತ್ತಮ ಕಥನವೆನ್ನಿಸುತ್ತದೆ. ಓದುಗರಿಗೆ ಸ್ಪಷ್ಟವಾಗಿ ಓದಿಸಿಕೊಂಡು ಹೋಗುವ ಕೃತಿ ಇದಾಗಿದ್ದು, ಐತಿಹಾಸಿಕ ವಿಸ್ಕೃತಿಯಿಂಧ ಹೊರಗೆ ತರುವ ಜ್ಞಾನದ ಆಕರವೆಂದೇ ಈ ಕೃತಿಯನ್ನು ಹೇಳಬಹುದು’ ಎಂದಿದ್ದಾರೆ.

About the Author

ವೀರಭದ್ರಪ್ಪ ಬಿಸ್ಲಳ್ಳಿ

ವೀರಭದ್ರಪ್ಪ ಬಿಸ್ಲಳ್ಳಿ ಅವರು ಓದುವಾಗಲೇ ವಾರಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾದರನಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದವರು. ನಂತರ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಪೂರ್ಣಾವಧಿ ವರದಿಗಾರನಾಗಿ ವೃತ್ತಿ ಜೀವನ ಆರಂಭಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ,ಹಿರಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ರಾಜ್ಯಧರ್ಮ ಕನ್ನಡ ದಿನಪತ್ರಿಕೆಯ ಬೆಂಗಳೂರು, ಮೈಸೂರು ಆವೃತ್ತಿಗಳ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.  ...

READ MORE

Related Books