ಕನ್ನಡ ಸಾಹಿತ್ಯದಲ್ಲಿ ಮುಸ್ಲಿಮ್‌ ಸಂವೇದನೆ

Author : ಉದಿನೂರು ಮುಹಮ್ಮದ್‌ ಕುಂಞ

Pages 126

₹ 300.00




Year of Publication: 2023
Published by: ಕೈರಳಿ ಪ್ರಕಾಶನ
Address: ಸುಬ್ಬಯ್ಯ ಕಟ್ಟೆ ,ಕಾಸರಗೋಡು 674 371
Phone: 9446395295

Synopsys

ಕನ್ನಡ ಸಾಹಿತ್ಯದಲ್ಲಿ ಮುಸ್ಲಿಮ್‌ ಸವೇದನೆ ಉದಿನೂರು ಮುಹಮ್ಮದ್‌ ಕುಂಞ ಅವರ ಕೃತಿಯಾಗಿದೆ . ಈ ಕೃತಿಯಲ್ಲಿ ಒಟ್ಟು 47 ಮುಸಲ್ಮಾನ ಪುರುಷ ಲೇಖಕರು ಹಾಗು 10 ಮಹಿಳಾ ಸಾಹಿತಿಗಳ ಬಗ್ಗೆ ಇಲ್ಲಿ ಬಹು ಅಮೂಲ್ಯವಾದ ಮಾಹಿತಿಯನ್ನು ನೀಡಲಾಗಿದೆ. ಪುಸ್ತಕದ ಪ್ರಾರಂಭದಲ್ಲಿ, ಇಡೀ ಇಸ್ಲಾಂ ಧರ್ಮೀಯರ ಆರ್ಥಿಕ ಸಾಮಾಜಿಕ, ಔದ್ಯೋಗಿಕ, ಸಾಹಿತ್ಯಕ/ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳ ಇತಿಹಾಸದ ಒಂದು ಸಂಕ್ಷಿಪ್ತ ಆದರೆ ಸೂಕ್ತವಾದ ಕಿರು ಚಿತ್ರಣವನ್ನೂ ನೀಡಿದ್ದು ಓದುಗರಿಗೆ ಮುದ ನೀಡುತ್ತದೆ. ಸಾವಿರ ವರ್ಷಗಳ ಈ ಪರಂಪರೆಯನ್ನು ಕಟ್ಟಿಕೊಡುವಾಗ ಸಂದರ್ಭಾನುಸಾರ ಆಕರ ಗ್ರಂಥಗಳ ಬಗ್ಗೆ, ಅಲ್ಲಿನ ಬರಹಗಾರರ ಬಗ್ಗೆಯೂ ನಿರೂಪಿಸಿರುವ ಹೆಸರುಗಳು, ಸಂದರ್ಭಗಳು ಕೇವಲ ಊಹಾಪೋಹದಿಂದಾಗಲಿ, ವೈಭವೀಕರಿಸಬೇಕೆನ್ನುವ ಹಂಬಲದಿಂದಾಗಲಿ ಮೂಡಿ ಬಂದವುಗಳಲ್ಲ ಎಂಬುದನ್ನು ಖುಲ್ಲಂ ಖುಲ್ಲಾ ಹೇಳದೇ ಸೂಚ್ಯವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಕೃತಿಕಾರರದ್ದಾಗಿದೆ.

About the Author

ಉದಿನೂರು ಮುಹಮ್ಮದ್‌ ಕುಂಞ

ಉದಿನೂರು ಮುಹಮ್ಮದ್‌ಕುಂಞ ಅವರು 1963 ರಲ್ಲಿಗಡಿನಾಡು ಕಾಸರಗೋಡು ಜಿಲ್ಲೆಯ ತ್ರಿಕಾರಿಪುರದ ಉದಿನೂರ್ ಎಂಬಲ್ಲಿ ಹುಟ್ಟಿದರು. ಮೂಲ ಶಿಕ್ಷಣವನ್ನು ಬೆಂಗಳೂರಿನ ಸಂತಜೋಸೆಫ್ ಶಾಲೆ ಮತ್ತು ಕಾಲೇಜಿನಿಂದ ಪಡೆದರು. ನಂತರ 23 ವರ್ಷ ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಸೌದಿ ವೈಟ್ ಸಿಮೆಂಟ್ ಕಂಪನಿಯಲ್ಲಿ ಕಾರ್ಯದರ್ಶಿಯಾಗಿ ದುಡಿದರು. ಸೌದಿ ಅರೇಬಿಯಾದ ಸಚಿವಾಲಯದ ಅಧೀನದಲ್ಲಿರುವ ಜಾಲತಾಣದಲ್ಲಿ ಭಾರತೀಯ ಭಾಷೆಗಳ ಅನುವಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಲ್ಲೇ ಸಾಹಿತ್ಯಾಸಕ್ತರಾಗಿದ್ದ ಅವರು ಮಲಯಾಳಂ ಭಾಷೆಗೆ ಎರಡು ಹಾಗೂ ಇಂಗ್ಲೀಷ್ ಗೆ ಒಂದು ಪುಸ್ತಕವನ್ನು ಅನುವಾದ ಮಾಡಿದ್ದಾರೆ. ಸೌದಿ ಅರೇಬಿಯಾ ಹಾಗೂ ಭಾರತದ ಹಲವಾರು ದಿನಪತ್ರಿಕೆಗಳಲ್ಲಿ ಮತ್ತು ...

READ MORE

Related Books