ಶಿಶುನಾಳ ಶರೀಫರ ತತ್ವಪದಗಳು

Author : ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ

Pages 232

₹ 45.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಕನ್ನಡ ಸಾಹಿತ್ಯ ಲೋಕದಲ್ಲಿ ತತ್ವಪದಗಳ ರೂವಾರಿಗಳಾದ ಶಿಶುನಾಳ ಶರೀಫರ ತತ್ವಪದಗಳನ್ನು ಪ್ರೊ. ಶಿವಾನಂದ ಗುಬ್ಬಣ್ಣವರ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಸಿದ ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾಗಿದ್ದು, ಶಿಶುನಾಳ ಶರೀಫರ ತತ್ವಪದಗಳನ್ನು ಅಮೂಲಾಗ್ರವಾಗಿ ಅರಿಯಲು ಸಹಕಾರಿಯಾಗಿದೆ. 

About the Author

ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ
(01 January 1946 - 25 July 2020)

ಲೇಖಕ, ಪ್ರಾಧ್ಯಾಪಕ ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ ಅವರು ಮೂಲತಃ ಕುಂದಗೋಳ ತಾಲ್ಲೂಕು ಹಿರೇನರ್ತಿ ಗ್ರಾಮದವರು. ಹುಟ್ಟಿದ್ದು 1946 ಜನವರಿ 01. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲುಮತ ಸಮಾಜ ಸಂಸ್ಕೃತಿ ಚರಿತ್ರೆಯನ್ನು ನಿರೂಪಿಸುವ ಮೌಖಿಕ ರೂಪದ ಡೊಳ್ಳಿನ ಹಾಡುಗಳನ್ನು ಜನಪದರಿಂದ ಸಂಗ್ರಹಿಸಿ ಅವರು "ದೇವರ್ ಬಂದಾವ್ ಬನ್ನಿರೇ" ಶೀರ್ಷಿಕೆಯಡಿ ಎರಡು ಸಂಪುಟದಲ್ಲಿ ಪ್ರಕಟಿಸಿದ್ದರು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದ್ದು ಬರಕೋ ಪದ ಬರಕೊ (ಸಂಪಾದನೆ), ರಾಮೋಜೋಯಿಸರ ಕಾಳಗ, ಶಿಶುನಾಳ ಶರೀಫರ ಪದಗಳು (410 ಹಾಡುಗಳಸಂಗ್ರಹ) - ಅವರ ...

READ MORE

Related Books