ಕೈವಾರ ನಾರೇಯಣಪ್ಪ ಮತ್ತು ಇತರರ ತತ್ವಪದಗಳು

Author : ಪದ್ಮಾಲಯ ನಾಗರಾಜ್

Pages 372

₹ 70.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ 1730ರಲ್ಲಿ ಜನಿಸಿದ ನಾರೇಯಣಪ್ಪ ಹೆಗಲಮೇಲೆ ಬಳೆಯ ಮಲಾರ ಹೊತ್ತುಕೊಂಡು ಬದುಕು ನಡೆಸುತ್ತಿದ್ದರು. ವ್ಯಾಪಾರಕ್ಕೆಂದು ಚಿತ್ತೂರಿನ ಮುಗಳಿವೆಂಕಟಗಿರಿ ಕಣಿವೆಯಲ್ಲಿ ವಿಶ್ರಮಿಸುತ್ತಿರುವಾಗ ’ಪರದೇಸಿಸ್ವಾಮಿ’ಗಳಿಂದ ಅನುಗ್ರಹಕ್ಕೆ ಪಾತ್ರರಾದರು. 1884ರಲ್ಲಿ ಸಮಾಧಿಯಾದ ನಾರೇಯಣಪ್ಪ ಅವರು ’ವೇದಾಂತ ಸಾರಾವಳಿ’ ಮತ್ತು ಅಮರನಾರೇಯಣ ಶತಕ’ ಕೃತಿಗಳನ್ನು ರಚಿಸಿದ್ದಾರೆ. ಬಹುಪಾಲು ನಾರೇಯಣಪ್ಪನವರ ಸಾಹಿತ್ಯ ತೆಲುಗಿನಲ್ಲಿಯೇ ಇದೆ. ’ವೇದಾಂತ ಸಾರಾವಳಿ’ಯ ’ಸುಜ್ಞಾನ ತತ್ವಮುಲು’ ಎಂಬ ವಿಭಾಗದಲ್ಲಿ ಹದಿನೇಳು ತತ್ವಗಳು ಮಾತ್ರ ಕನ್ನಡದಲ್ಲಿವೆ.

ನಾರೇಯಣಪ್ಪ ಅವರಲ್ಲದೇ ರಾಮಾವಧೂತರು, ಮಲ್ಲಾರ್‍ಯರ ಸಂತತಿಯವರಾದ ಕೊಂಡಾರ್‍ಯರು ಮತ್ತು ನಾಗಾರ್‍ಯರು ಬರೆದ ತತ್ವಪದಗಳು, ಗಗನಾನಂದಾರ್ಯರು ಹಾಗೂ ಅನಾಮಿಕ ತತ್ವಪದಕಾರರು ರಚಿಸಿದ ಪದಗಳನ್ನು ಈ ಸಂಕಲನ ಒಳಗೊಂಡಿದೆ. 

   

About the Author

ಪದ್ಮಾಲಯ ನಾಗರಾಜ್

ಬಹುಮುಖ್ಯ ಸಂಸ್ಕೃತಿ ಚಿಂತಕರು, ಅಪರೂಪದ ಸಂಶೋಧಕರು, ಎಲ್ಲಕ್ಕಿಂತ ಮುಖ್ಯವಾಗಿ ಅಚಲಮಾರ್ಗಿಗಳು ಮತ್ತು ಅಪೂರ್ವ ತತ್ವಸಾಧಕರು ಪದ್ಮಾಲಯ ನಾಗರಾಜ್. ‘ಅಚಲ ಗುರು ಮಾರ್ಗ’ ಅವರ ಮಹತ್ವಪೂರ್ಣ ಕೃತಿ. ಕನ್ನಡ ಮತ್ತು ತೆಲುಗಿನ ಅಚಲ ತತ್ವಪದಗಳನ್ನು ಸಂಪುಟಗಳಲ್ಲಿ ಸಂಪಾದಿಸುತ್ತಿದ್ದಾರೆ. ಜೊತೆಗೆ ತಲೆಮಾರು ಕುಟೀರದ ನಾಟಿ ವೈದ್ಯರು. ...

READ MORE

Related Books