ತತ್ವಪದ ಪ್ರವೇಶಿಕೆ

Author : ರಹಮತ್ ತರೀಕೆರೆ

Pages 348

₹ 60.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆಯ ಮೊದಲನೆಯ ಸಂಪುಟವನ್ನು ರಹಮತ್ ತರೀಕೆರೆ ಮತ್ತು ಅರುಣ್‌ ಜೋಳದಕೂಡ್ಲಿಗಿ ಸಂಪಾದಿಸಿದ್ದಾರೆ. ತತ್ವಪದ ಪ್ರವೇಶಿಕೆ’ಯಲ್ಲಿ ಇಪ್ಪತ್ತು ಲೇಖನಗಳಿವೆ. ಈ ಲೇಖನಗಳನ್ನು ತತ್ವ-ದರ್ಶನ, ಸಾಹಿತ್ಯ-ಚರಿತ್ರೆ, ಸಮಾಜ-ಧರ್ಮ, ಪದ-ಪದಕಾರ ಎಂಬ ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಲಿಂಗರಾಜು ಅವರ ’ಅನಾದಿಯ ಅನುಭಾವದ ಸೆಲೆ’, ನಟರಾಜ ಬೂದಾಳು ಅವರ ’ಶರಣರ ತತ್ವಪದಕಾರರ ತಾತ್ವಿಕ ನೆಲೆಗಳು’, ಜಿ. ರಾಮಕೃಷ್ಣ ಅವರ ’ಸಂತರ ಚಿಂತನೆ ಮತ್ತು ಸಂಘರ್ಷದ ನೆಲೆಗಳು’, ಎಂ.ಜಿ. ರಾನಡೆ ಅವರ ’ಕನ್ನಡ ಸಂತರ ಪರಮಾರ್ಥ ಪಥದಲ್ಲಿ ಗುರುಶಿಷ್ಯರ ಸಂಬಂಧ’ ಲೇಖನಗಳಿವೆ.

ಎರಡನೆಯ ಸಾಹಿತ್ಯ-ಚರಿತ್ರೆ ಭಾಗದಲ್ಲಿ ಶಾಂತರಸ ಅವರ ’ತತ್ವಪದಕಾರರನ್ನು ಗುರುತಿಸದೆ ಹೋದರೆ...’, ಓ.ಎಲ್‌. ನಾಗಭೂಷಣಸ್ವಾಮಿ ಅವರ ’ತತ್ವಪದಗಳು ಹಾಗೂ ಹೊಸಗನ್ನಡದ ಅರುಣೋದಯ’, ಕಿ.ರಂ. ನಾಗರಾಜ ಅವರ ’ಹದಿನೇಳು ಹದಿನೆಂಟನೆಯ ಶತಮಾನದ ಅನುಭಾವ ಸಾಹಿತ್ಯ’, ಬಿ. ಶಿವಮೂರ್ತಿಶಾಸ್ತ್ರಿಗಳ ’ಕನ್ನಡದಲ್ಲಿ ಹಾಡುಗಬ್ಬಗಳು’, ಬಸವರಾಜ ಮಲಶೆಟ್ಟಿ ಅವರ ’ಸ್ವರವಚನ ಸಾಹಿತ್ಯ- ಒಂದು ಮರುವಿಚಾರ’, ಜಿ.ವಿ. ಆನಂದಮೂರ್ತಿ ಅವರ ’ತತ್ವಪದಗಳು: ನೆಲದ ಮರೆಯ ನಿಧಾನ’, ಅಮರೇಶ ನುಗಡೋಣಿ ಅವರ ’ತತ್ವಪದ ಸಾಹಿತ್ಯ ಚಳವಳಿ: ಒಂದು ಚರ್ಚೆ’, ವೀರಣ್ಣ ದಂಡೆ ಅವರ ’ಕಲ್ಯಾಣ ಕರ್ನಾಟಕದ ತತ್ವಪದಕಾರರು’ ಲೇಖನಗಳಿವೆ.

ಮೂರನೆಯ ಸಮಾಜ-ಧರ್ಮ ಭಾಗದಲ್ಲಿ ಎಂ.ಎಂ. ಕಲಬುರ್ಗಿ ಅವರ ’ವೀರಶೈವ ಸ್ವರವಚನ ಸಾಹಿತ್ಯ’, ಎಚ್‌.ಎಸ್‌. ಶಿವಪ್ರಕಾಶ್‌ ಅವರ ’ಎಲ್ಲಾ ಜಾತಿಯ ಮರಗಳ ಕಾಡು: ತತ್ವಪದಕಾರರು’, ಲಕ್ಷ್ಮೀಪತಿ ಕೋಲಾರ ಅವರ ’ತತ್ವಪದಕಾರರ ನಿರ್ವಸಾಹತೀಕರಣ ಚಿಂತನೆ, ರಹಮತ್‌ ತರೀಕೆರೆ ಅವರ ’ಮುಸ್ಲಿಂ ತತ್ವಪದಕಾರರು: ಹೀಗೆನ್ನುವುದು ಯಾಕೆ ಕಷ್ಟ’ ಎಂಬ ಲೇಖನಗಳಿವೆ.

ಪದ-ಪದಕಾರ ಎಂಬ ನಾಲ್ಕನೆಯ ಭಾಗದಲ್ಲಿ ದ.ರಾ. ಬೇಂದ್ರೆಯವರ ’ನಿಜಗುಣದ ಶಿವಯೋಗ’, ಚೆನ್ನವೀರ ಕಣವಿ ಅವರ ’ಮುಪ್ಪಿನ ಷಡಕ್ಷರಿಯ ಮುಪ್ಪರಿಯದ ಹಾಡುಗಳು’, ರಾ.ಯ. ಧಾರವಾಡಕರ ಅವರ ’ಗುರುಲಿಂಗ ಜಂಗಮ ಮಹಾರಾಜರು’, ಆರ್‌. ನರಸಿಂಹಾಚಾರ್‌ ಅವರ ’ಚಿದಾನಂದಾವಧೂತ’ ಬರೆಹಗಳಿವೆ.

ಅನುಬಂಧದಲ್ಲಿ ಅರುಣ್‌ ಜೋಳದಕೂಡ್ಲಿಗಿ ಸಿದ್ಧಪಡಿಸಿದ ತತ್ವಪದ ಆಕರಸೂಚಿ: ಕೆಲವು ಟಿಪ್ಪಣಿಗಳು ಬರೆಹ ಇದೆ. ಲೇಖನಸೂಚಿ ಮತ್ತು ಲೇಖಕರ ಮಾಹಿತಿ ನೀಡಲಾಗಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books