ಅಲ್ಲಿರುವುದು ನನ್ನಮನೆ – ದೊ ಹೊ ಸುಹ್

Date: 03-08-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಇನ್ಸ್ಟಾಲೇಷನ್, ಪೇಂಟಿಂಗ್ ಹಾಗೂ ಫಿಲ್ಮ್ ಕಲಾವಿದ ದೊ ಹೊ ಸುಹ್  ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ದೊ ಹೊ ಸುಹ್  (Do Ho Suh) 
ಜನನ: 1962 
ಶಿಕ್ಷಣ: ಸೋಲ್ ನ್ಯಾಷನಲ್ ಯೂನಿವರ್ಸಿಟಿ, ಕೊರಿಯಾ; ರೋಡ್ಸ್ ಐಲಂಡ್ ಯೂನಿವರ್ಸಿಟಿ ಮತ್ತು ಯೇಲ್ ಯೂನಿವರ್ಸಿಟಿ, ಅಮೆರಿಕ 
ವಾಸ: ನ್ಯೂಯಾರ್ಕ್, ಅಮೆರಿಕ, ಸೋಲ್, ದ. ಕೊರಿಯಾ 
ಕವಲು: ಇನ್ಸ್ಟಾಲೇಷನ್ 
ವ್ಯವಸಾಯ:  ಸ್ಕಲ್ಪ್ಚರ್, ಇನ್ಸ್ಟಾಲೇಷನ್, ಪೇಂಟಿಂಗ್, ಫಿಲ್ಮ್
 

ದೊ ಹೊ ಸುಹ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಒಂದು ಸ್ಥಳಾವಕಾಶ ಮತ್ತು ಅದು ಒಬ್ಬ ವ್ಯಕ್ತಿಗೆ ಕಟ್ಟಿ ಕೊಡುವ ಅನುಭವಗಳನ್ನು ವೈಯಕ್ತಿಕವಾಗಿ, ಸಾಮೂಹಿಕವಾಗಿ, ಭೌತಿಕವಾಗಿ, ಮಾನಸಿಕವಾಗಿ, ಸ್ಥಿರವಾಗಿ ಮತ್ತು ಅಸ್ಥಿರವಾಗಿ ಅನ್ವೇಷಿಸುವ ದೊ ಹೊ ಸುಹ್ ಅವರ ಶಿಲ್ಪಗಳು ಜಾಗತಿಕ ನೆಲೆಯಲ್ಲಿ ಸಾಂಸ್ಕೃತಿಕವಾಗಿ ಒಬ್ಬ ವ್ಯಕ್ತಿಯ ಮತ್ತು ಒಂದು ಸಮೂಹದ ನಡುವಿನ ಸಂಬಂಧಗಳನ್ನು ಬಿಚ್ಚಿಡುತ್ತವೆ. ಸ್ವತಃ ಅಲೆಮಾರಿ ಆಗಿರುವ ಸುಹ್‌ಗೆ ತಾನು ಬದುಕಿದ ಸ್ಥಳಗಳಲ್ಲಿರುವ ಸ್ಥಾವರ “ಮನೆಗಳು” ತನ್ನೊಂದಿಗೆ ಸಂಸ್ಕೃತಿಯಾಗಿ, ಚರಿತ್ರೆಯಾಗಿ, ಜಂಗಮಗೊಂಡು ಭೌಗೋಳಿಕ ಎಲ್ಲೆಗಳನ್ನು ಮೀರಿ ಹರಿದುಬಂದ ಬಗೆಯ ಕುರಿತು ಇರುವ ಕೌತುಕವೇ ಅವರ ಕಲಾಕೃತಿಗಳು. 

1962ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕಲಾವಿದ ಕುಟುಂಬದಲ್ಲಿ ಜನಿಸಿದ ಸುಹ್ ಅವರ ತಂದೆ ಸೆ-ಒಕ್ ಸುಹ್, 60ರ ದಶಕದಲ್ಲಿ ಕೊರಿಯಾದ ಸಾಂಪ್ರದಾಯಿಕ ಶಾಯಿಚಿತ್ರಗಳಿಗೆ ಆಧುನಿಕ ಸ್ವರೂಪ ನೀಡಿದ ಪ್ರಸಿದ್ಧ ಕಲಾವಿದರು. ಸೋಲ್ ನ್ಯಾಷನಲ್ ವಿವಿಯಲ್ಲಿ ಸಾಂಪ್ರದಾಯಿಕ ಕೊರಿಯನ್ ಕಲೆಯನ್ನು ಅಭ್ಯಾಸ ಮಾಡಿದ ಬಳಿಕ, ಕಡ್ಡಾಯ ಸೇನಾ ಸೇವೆಯ ಅವಧಿಯನ್ನು ಪೂರೈಸಿ, ಆ ಬಳಿಕ ತನ್ನ ಶಿಕ್ಷಣವನ್ನು ಮುಂದುವರಿಸಲು ಅಮೆರಿಕಕ್ಕೆ ತೆರಳಿದ ಸುಹ್, ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಆರಂಭದಲ್ಲಿ ಮೀನುಗಳ ಬಗ್ಗೆ (ಮರೈನ್ ಬಯಾಲಜಿ) ಕಲಿಯಬೇಕೆಂದಿದ್ದ ಸುಹ್, ಸಾಕಷ್ಟು ಅಂಕಗಳು ಬರದ್ದರಿಂದ ಕಲೆಯ ಕಡೆ ತಿರುಗಿಕೊಂಡಿದ್ದರು. ಅವರ ಕಲಾವಿದ ತಂದೆಯ ಬಳಗದ ಕಲಾ ಸಂಬಂಧಿ ಚರ್ಚೆಗಳು ಅವರಲ್ಲಿದ್ದ ಕಲಾವಿದನನ್ನು ಎಚ್ಚರಿಸಿದ್ದವು. 

ತನ್ನ ತಾಯಿಯ ಸಾಂಪ್ರದಾಯಿಕ ಹೊಲಿಗೆಯಿಂದಲೂ ಪ್ರೇರಿತರಾಗಿರುವ ಸುಹ್, ತಮ್ಮ ಕಲಾಕೃತಿಗಳಲ್ಲಿ ಮುಖ್ಯವಾಗಿ ನೈಲಾನ್ ಅಥವಾ ರೇಷ್ಮೆಯಲ್ಲಿ ಕಲಾಕೃತಿಗಳನ್ನು ಸೂಕ್ಷ್ಮವಾದ ವಿವರಗಳ ಸಹಿತವಾಗಿ ಹೊಲಿಯುತ್ತಾರೆ. ಅವರ ಮನೆಯ ಕಲಾಕೃತಿಗಳು ತಮ್ಮ ಗಾತ್ರ ಮತ್ತು ಸ್ವರೂಪದಲ್ಲಿ ವಾಸ್ತವವಾಗಿ ಮನೆಯಂತೆಯೇ ಇರುತ್ತವೆ. ಮನೆಯ ಅಡುಗೆ ಕೋಣೆಯ ಸಿಂಕ್, ಶೌಚಾಲಯದ ಕಮೋಡ್, ಮೈಕ್ರೋವೇವ್ ಒವೆನ್ ಸೇರಿದಂತೆ ಎಲ್ಲ ವಿವರಗಳನ್ನೂ ಸೂಕ್ಷ್ಮವಾಗಿ ದಾಖಲಿಸಿರುವ ಈ ಕಲಾಕೃತಿಗಳು ಅರೆಪಾರದರ್ಶಕ ಬಟ್ಟೆಯಲ್ಲಿ ಹೊಲಿಗೆಯಾಗಿ, ಪ್ರದರ್ಶನಾಂಗಣದಲ್ಲಿ ನೇತಾಡುತ್ತಿರುತ್ತವೆ. ಈ ಭಾರ ರಹಿತ ಸ್ಥಿತಿ ವೀಕ್ಷಕನಿಗೆ ಕಟ್ಟಿ ಕೊಡುವ ಕಲ್ಪನೆ-ವಾಸ್ತವಗಳ ನಡುವಿನ ಒಂದು ವಿಶಿಷ್ಠ ಅನುಭೂತಿ ಆ ಕಟ್ಟಡದ ಮಾನಸಿಕವಾದ ಒಳಾಂಗಣವನ್ನೂ ಭೌತಿಕವಾದ ಹೊರಾಂಗಣವನ್ನೂ ಏಕಕಾಲಕ್ಕೆ ತೆರೆದಿರಿಸುತ್ತದೆ. ಈ ಕಲಾಕೃತಿಗಳನ್ನು ಸುಲಭವಾಗಿ ಮಡಿಚಿ ಸೂಟ್‌ಕೇಸ್‌ನ ಒಳಗಿರಿಸಿಕೊಂಡು ಇನ್ನೊಂದು ಜಾಗಕ್ಕೆ ಕೊಂಡೊಯ್ಯಬಹುದು. ಅವರು ಪ್ರತೀ ಬಾರಿ ಸ್ಥಲ ಬದಲಿಸಿದಾಗಲೂ ಹೊಸದೊಂದು ಸ್ಥಳ ಆ ಕಲಾಕೃತಿಗೆ ಸೇರ್ಪಡೆಗೊಳ್ಳುತ್ತದೆ. ಮನೆಯೊಳಗೆ ಮನೆಯೊಳಗೆ ಮನೆ ಕಟ್ಟಿ ಇರಿಸುವ ಈ ಕಲಾಕೃತಿ ಇನ್ನೂ ಸಂಪೂರ್ಣಗೊಂಡಿಲ್ಲ. ಅದಕ್ಕವರು ಹೀಗೆ ಹೆಸರಿಟ್ಟಿದ್ದಾರೆ: Seoul Home/L.A. Home/New York Home/Baltimore Home/London Home/Seattle Home… (1999) 

ಸೋಲ್‍ನಿಂದ ಅವರ ಅಮೆರಿಕ ವಲಸೆಯನ್ನು ಬಿಂಬಿಸುವ Blue Green Bridge (2000), ಗುಂಪಿನ ಮತ್ತು ಏಕಾಂಗಿತನದ ನಡುವಿನ ಸಂಬಂಧಗಳನ್ನು ವಿಶ್ಲೇಷಿಸುವ Who Am We? (2000) ಇಂತಹ ಕಲಾಕೃತಿಗಳಲ್ಲಿ ಟ್ರಾನ್ಸಿಷನ್ ಸ್ಥಿತಿಯನ್ನು ಬಿಂಬಿಸುವ ಅವರ ಹೆಚ್ಚಿನ ಕಲಾಕೃತಿಗಳು ಅವರ ಅಲೆಮಾರಿತನದ ಟ್ರಾನ್ಸಿಷನ್‍ಗಳ ವೇಳೆಯಲ್ಲಿ ಅವರು ಮುಖಾಮುಖಿಯಾಗುವ ಕಾರಿಡಾರ್‌ಗಳು, ಮೆಟ್ಟಿಲುಗಳು, ಸೇತುವೆಗಳು, ಹೆಬ್ಬಾಗಿಲುಗಳ ಮೂಲಕ ವ್ಯಕ್ತಗೊಳ್ಳುತ್ತವೆ. 

ಸುಹ್ ತನ್ನ ಕಲಾಭ್ಯಾಸದ ಬಗ್ಗೆ ಹೀಗೆ ಹೇಳುತ್ತಾರೆ: I have two studios, one in New York and one near seoul.that is where I make my work, where I give form to my work. The conceptualization part happens in-between places, when in transit, like in an airport, on the airplane or on the train – those in-between places. I think I have more inspiration when I don’t actually make something. In the beginning, I didn’t like traveling too much. but now it’s part of my job. I have to travel a lot and I sort of developed a habit to use that time for more creative things. For example, instead of reading, I actually do a lot of sketching during a flight.  (2008ರಲ್ಲಿ ಡಿಸೈನ್ ಬೂಮ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ)   

ದೊ ಹೊ ಸುಹ್   ಅವರ ಸಂದರ್ಶನ: 

ದೊ ಹೊ ಸುಹ್ ಕಲಾಪ್ರದರ್ಶನವೊಂದರ  ಕುರಿತ ವಿವರ:  

 

ಚಿತ್ರ ಶೀರ್ಷಿಕೆಗಳು: 

ದೊ ಹೊ ಸುಹ್  ಅವರ 348 West 22nd Street, Apt. A, Corridor and Staircase, New York NY 10011, USA, (2012)  

ದೊ ಹೊ ಸುಹ್  ಅವರ Blue Green Bridge (2000)  

ದೊ ಹೊ ಸುಹ್  ಅವರ Fallen Star, (2012) 

ದೊ ಹೊ ಸುಹ್  ಅವರ Floor, (1997-2000)  

ದೊ ಹೊ ಸುಹ್  ಅವರ karma (2003)  

ದೊ ಹೊ ಸುಹ್  ಅವರ paratrooper I (2004)  

ದೊ ಹೊ ಸುಹ್  ಅವರ SEOUL HOME-SEOUL HOME-KANAZAWA HOME-BEIJING HOME-POHANG HOME-GWANGJU HOME( 2012-PRESENT)  

ದೊ ಹೊ ಸುಹ್  ಅವರ Staircase III, (2003-2010)  

ದೊ ಹೊ ಸುಹ್  ಅವರ TO BE TITLED (THREAD DRAWING)  (2013)  

ದೊ ಹೊ ಸುಹ್  ಅವರ uni-form  

ಈ ಅಂಕಣದ ಹಿಂದಿನ ಬರೆಹಗಳು:
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...