Article

ದೇವರು-ಧರ್ಮದ-ಮಾನವರ ನಂಬುಗೆಯ ವಿಶ್ಲೇಷಣೆ ‘ಮೂಕಜ್ಜಿಯ ಕನಸುಗಳು’

ಇದೊಂದು ಹಾಸ್ಯ ಕಾದಂಬರಿಯೆಂದೆ ಕರೆಯಬಹುದು. ಮೂಕಜ್ಜಿ ಮತ್ತು ಆಕೆಯ ಮೊಮ್ಮಗ ಸುಬ್ಬರಾಯ ಇವರೇ ಮುಖ್ಯ ಪಾತ್ರಗಳು. ಮೂಡೂರು, ಕೊಲ್ಲೂರು, ಹಿಡುಂಗಾನ ಇನ್ನೂ ಕೆಲವು ಊರಿನ ಪ್ರಕೃತಿಯನ್ನು ‌ಸುಂದರವಾಗಿ ವಿವರಿಸಿದ್ದಾರೆ. ಅವರು ವಿವರಿಸಿದ ವರ್ಣನೆಯನ್ನು ಓದಿದರೆ ನಾವೇ ಆ ಪ್ರದೇಶದಲ್ಲಿ ಸುತ್ತಾಡುತ್ತಿರುವ ಭಾವನೆಯಾಗುತ್ತದೆ. ಎಂಟನೆಯ ವರ್ಷದಲ್ಲಿ ಮದುವೆಯಾಗಿ,‌ಮದುವೆಯಾದ ಕೆಲವು ವರ್ಷದಲ್ಲೇ ಗಂಡನನ್ನು ಕಳೆದುಕೊಂಡ ಮೂಕಜ್ಜಿಯು ಅಂದಿನಿಂದ ಮೂಕಿಯೇ ಆಗುತ್ತಾಳೆ. ಅಂದಿನಿಂದ ಕೆಲವರು ಆಕೆಯನ್ನು ಮೂಕಿಯೆಂದರು, ಕೆಲವರು ಮಾತು ನಿಂತೇ ಹೋಯಿತೆಂದರು, ಕೆಲವರು ಆಕೆಗೆ‌ ತಲೆಯೇ ಕೆಟ್ಟಿದೆ ಎಂದರು. ಕಾರಂತರು ಸೃಷ್ಟಿಸಿದ ಈ 2 ಪಾತ್ರಗಳು ಅದ್ಭುತ. ಆಕೆಯನ್ನು ಮಾತಾನಾಡಿಸುವುದಕ್ಕೆ ಕೆಲವರಿಗೆ ಅಂಜಿಕೆ, ಏಕೆಂದರೆ ಅವರು ಮುಚ್ಚೂ ಮರೆಯಿಲ್ಲದೆ ತನಗೆ ತಿಳಿದಿದ್ದನ್ನು ಹೇಳಿಬಿಡುತ್ತಿದ್ದರು, ಕೆಲವರಿಗೆ ಅದು ಹಿಡುಸುವುದು ಕೆಲವರಿಗೆ ಅಜ್ಜಿ ಹೀಗೆಂದರೆಂದು ಅವರನ್ನು ಬೈದದ್ದೂ ಉಂಟು. ಆದರೆ ಅವರಿಗೆ ಮುಂದಿನದು ಹಿಂದಿನದು ಎಲ್ಲವೂ ತಿಳಿಯುತ್ತಿತ್ತು, ಯಾವ ಯುಗದಲ್ಲಿ ನಡೆದ ಘಟನೆಗಳೋ ಅವೆಲ್ಲವೂ ಅವರು ಹೇಳುತ್ತಿದ್ದರು. 

ಸುಬ್ಬರಾಯನಿಗೆ ಏನನ್ನೂ ನೋಡಿದರೂ ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬುದು ಒಂದು ಚಟ, ಏನೇ ಕಂಡರೂ,ಏನೇ ಸಿಕ್ಕಿದರೂ ಅದನ್ನು ಮೂಕಜ್ಜಿಯ ಹತ್ತಿರ ಕೊಟ್ಟು ಅದರ ಬಗ್ಗೆ ಕೇಳುವುದು ಮತ್ತು ತಿಳಿದುಕೊಳ್ಳುವುದು ಸುಬ್ಬರಾಯರ ಗುಣ, ಆಕೆಗೆ ಮೂಕಜ್ಜಿಯೇ ದೇವರಿದ್ದ ಹಾಗೆ ಅವರು ಹೇಳುವುದೆ ಅವರಿಗೆ ವೇದವಾಕ್ಯ. ಎಷ್ಟೋ ಜನರು,ಸುಬ್ಬರಾಯನ ಪತ್ನಿ ಯಾದ ಸೀತೆಯೂ ಸಹ ಮೂಕಜ್ಜಿಗೆ ಮರುಳೆಂದರು, ಅವರ ಮಾತನ್ನು ಕೇಳುವ ಸುಬ್ಬರಾಯರನ್ನು ಮರುಳೆಂದರೂ. ಸುಬ್ಬರಾಯ ತನ್ನ ಬಿಡುವಿನ ಸಮಯದಲ್ಲಿ ತನ್ನ ಸುತ್ತ ಮುತ್ತಿನ ಪ್ರದೇಶದಲ್ಲಿ ಅಚ್ಚರಿ ಪಡಿಸುವಂತಹುದು ತಂದು ಅಜ್ಜಿಗೆ ತೋರಿಸುವುದು. ಅಜ್ಜಿ ಆ ವಸ್ತುವನ್ನು ಮುಟ್ಟಿಯೇ ಹಿಂದಿನ ದಿನದಲ್ಲಿ ನಡೆದ ಘಟನೆಗಳನ್ನೆಲ್ಲಾ ಹೇಳುತ್ತಿದ್ದರು. ಮೂಡೂರನ್ನು ಜೈನರು, ನಂತರ ಬೌದ್ಧರು ಆಳಿದರೆಂದೂ ಹೇಳಿದ್ದುಂಟು.

ಅಶ್ವತ್ಥ ಕಟ್ಟೆಯಲ್ಲಿ ಅಜ್ಜಿ ಮತ್ತು ಸುಬ್ಬರಾಯ ಇಬ್ಬರೂ ಯಾವುದಾದರೊಂದು ವಿಷಯದ ಬಗ್ಗೆ ಚರ್ಚಿಸುವುದು ಅವರ ವಾಡಿಕೆ. ಅಜ್ಜಿಯ ಪ್ರಕಾರ ದೇವರಿದ್ದಾನೆ ,ಅಮ್ಮನನ್ನು ಪೂಜೆ ಮಾಡುತ್ತೇವೆ ಅದರಲ್ಲಿ ತಪ್ಪು ಕಾಣುವುದಿಲ್ಲ. ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿ ಎಲ್ಲಾ ಸೌಲಭ್ಯಗಳನ್ನು ಕೊಟ್ಟರೂ ಈ ಜನಗಳೇಕೆ ಅವಳನ್ನು ಇದು ಕೊಡು ಅದು ಕೊಡು ಎಂದು ಬೇಡುವುದು?ಈ ಅಮ್ಮನಿಗೆ ಕೋಟಿ ಕೋಟಿ ಮಕ್ಕಳಿಲ್ಲವೇ ಅವಳು ಕೊಟ್ಟ ಇದ್ದಷ್ಟು ಆಯುಷ್ಯವನ್ನು ಇದ್ದಷ್ಟು ಕಾಲ ಬಾಳಿ ಬದುಕುವುದೇ ಪೂಜೆ ಎಂಬ ಬುದ್ದಿ ಯಾಕೆ ಬರಬಾರದು?. ಈಗ ಕೊಲ್ಲೂರೆ ಒಂದು ಉದಾಹರಣೆ‌ ಮಗು, ಕೊಲ್ಲೂರಿಗೆ ಕೊಲ್ಲೂರು ಮೂಕಾಂಬಿಕೆ ‌ಎಂದು ಏಕೆ ಹೆಸರು ಬಂತು. ಅಲ್ಲಿ ಮನುಷ್ಯರನ್ನು ಕೊಲ್ಲುತ್ತಿದ್ದರಂದೆ? ಮಹಿಷಾಸುರನನ್ನು ಸಂಹರಿಸಿದ್ದಕ್ಕೆ ಮೂಕಾಂಬಿಕೆಯೆಂದೆ?ಅಥವಾ ಅಮ್ಮ ಮಾತಾನಾಡದೇ ಇರುವುದಕ್ಕೆ ಅವಳು ಮೂಕಿಯಾದಳೆ? ಮತ್ತೊಂದು ಎಂದರೆ ಕಪಾಲಿಗರು ಪೂಜೆ ಮಾಡುವ ದೇವರನ್ನು ಕಪಾಲಿಗರೆಂದರು. ಇನ್ನೂ ಹಲವು, ಅವರ ಪ್ರಕಾರ ಮನುಷ್ಯರು ತಮ್ಮ ಅನುಕೂಲಕ್ಕಾಗಿ ಎಷ್ಟೆಲ್ಲಾ ಬದಲಾಯಿಸಿದರೆಂದು. ದೇವರು ಅವತಾರವನ್ನು ಎತ್ತಿಯೇ ರಾಕ್ಷಸರನ್ನು ಸಂಹರಿಸಬೇಕೆ?ದೇವರಿಗೆ ಅಷ್ಟು ಶಕ್ತಿಯಿಲ್ಲವೇ, ಮತ್ತು ರಾಕ್ಷಸನನ್ನು ಸಂಹರಿಸುವುದಕ್ಕೆ ದೇವರೇ ಬರಬೇಕೆ ಮನುಷ್ಯ ರೂಪವನ್ನು ತಾಳಿ ರಾಕ್ಷಸರನ್ನು ಕೊಂದ ಆದರ್ಶ ಪುರುಷರು ಎಷ್ಟಿದ್ದಾರೆ ಹೇಳು?ಉದಾಹರಣೆಗೆ ವಿಷ್ಣು ಶ್ರೀರಾಮನಾಗಿ ಜಯಿಸಿ ರಾವಣನನ್ನು ಕೊಂದು ನಮಗೆಲ್ಲಾ ಆದರ್ಶ ವ್ಯಕ್ತಿಯಾಗಲಿಲ್ಲವೇ? ನೋಡು ಮಗು ಇದೆಲ್ಲವೂ ನಮ್ಮ ನಂಬಿಕೆಗಳು. ಕೆಲವರು ದೇವಸ್ಥಾನಕ್ಕೆ ಹೋದರೇನೆ ಮನಸ್ಸಿಗೆ ನೆಮ್ಮದಿಯೆಂದು ಇನ್ನು ಕೆಲವರು ಎಲ್ಲೆಲ್ಲಿಯೂ ದೇವರಿದ್ದಾನೆಂದು ಒಟ್ಟಾರೆ ಇದೆಲ್ಲವೂ ನಮ್ಮ ನಂಬಿಕೆಗಳು ಎನ್ನುತ್ತಾರೆ.

"ಕೆಲವರು ಮಾಡುವ ಕಾರ್ಯಗಳನ್ನು ಇತರರ ಹೊಗಳಿಕೆಗಾಗಿ ಮಾಡಬಾರದು. ತಾನು ಏನೇ‌ ಕೆಲಸ ಮಾಡಿದರೂ ತೋರಿಸಿಕೋಳ್ಳಬಾರದು. ಇದನ್ನು ತಾನೇ ಮಾಡಿದೆ ತಾನೇ ದೊಡ್ಡವನೆಂದು ಮೆರೆಯಬಾರದು. ಅದು ದೇವರ ಕಾರ್ಯವೇ ಆಗಿರಲಿ ಮತ್ತೊಂದೆ ಆಗಿರಲಿ. ತಾನು ಮಾಡುವ ಕಾರ್ಯ ತನ್ನ ಮನಸ್ಸಿಗೆ ನೆಮ್ಮದಿಯನ್ನು ತಂದಿತೆ?. ನಾನು ಹಾಗೆ‌,ನಮ್ಮ ಕಡೆ‌ ಹೀಗೆ‌ ನಿಮ್ಮ ಕಡೆ ಹಾಗೆ‌ ಎಂದು ಕೊಚ್ಚಿಕೊಳ್ಳಬಾರದು ಅದು ಅವರ ಸಣ್ಣತನ. ಏಕೆಂದರೆ‌ ಮಗು ಒಂದೊಂದು ಕಡೆ‌ ಒಂದೊಂದು ತರ ನಂಬಿಕೆ‌ ತನ್ನದೇ ಮೇಲು" ಎಂದು ಮೆರೆಯಬಾರದು.

ಹೀಗೆ ಅವರಿಬ್ಬರ ನಡುವೆ ಹಲವಾರು ಸಂಶೋಧನಾ ಸಂಭಾಷಣೆಗಳು ನಡೆಯುತ್ತವೆ.ಅವರಿಬ್ಬರ ಪಾತ್ರಗಳನ್ನು ಇಟ್ಟುಕೊಂಡು ಕಾರಂತರು ನಮ್ಮ ಸಮಾಜದಲ್ಲಿ ನಡೆಯುವ ಘಟನೆಗಳನ್ನು, ಮನುಷ್ಯರ ಸಂಬಂಧಗಳನ್ನು, ಅವಿಗಿರುವ ನಂಬಿಕೆಗಳನ್ನು. ಮನುಷ್ಯನಿಗೆ ನಾನು ಎಂಬ ಅಹಂ ಇರಕೂಡದೆಂಬುವುದನ್ನು, ದೇವರ ಮೇಲಿರುವ ನಂಬಿಕೆಗಳನ್ನು, ಇತರ ಧರ್ಮದವರು ತಮ್ಮ ಧರ್ಮಕ್ಕೆ ಪರಿವರ್ತಿಸುವ ಸಂಗತಿಗಳನ್ನು ಪ್ರಕೃತಿಯ ಸೌಂದರ್ಯವನ್ನು ಪುಟ ಪುಟದಲ್ಲೂ ವಿವರಿಸಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌