Article

ಮಾನವ ಅನುಭವದ ವಿವಿಧ ಮುಖ ‘ಪರ್ವ’

ನಾನೇಕೆ ಬರೆಯುತ್ತೇನೆ ಕಾದಂಬರಿಯಲ್ಲಿ ಭೈರಪ್ಪನವರು ಪರ್ವ ಬರೆದದ್ದು ಎಂಬುವುದರಲ್ಲಿ ಅವರ ಅನುಭವಗಳನ್ನು ತಿಳಿಸಿದ್ದಾರೆ. ಕಾದಂಬರಿ ಬರೆಯುವುದಕ್ಕೆ ಮುಂಚೆ ಸಾಹಿತಿಯು ಎಷ್ಟೆಲ್ಲಾ ಸಿದ್ಧತೆ ಮಾಡಿಕೊಡಬೇಕೆಂಬುದು ಓದಿದಾಗಲೇ ಅರ್ಥವಾಯಿತು. ಕಾದಂಬರಿ ಶುರುಮಾಡುವುದಕ್ಕೆ ಮೊದಲು ಮಹಾಭಾರತ ನಡೆದಿರುವ ಸ್ಥಳಗಳನ್ನು ವೀಕ್ಷಿಸಲು ನಿರ್ಧಾರ ಮಾಡಿ, ಅದರಂತೆ ಅವರು ಪ್ರವಾಸ ಮಾಡಲು ನಿರ್ಧಾರಿಸುತ್ತಾರೆ. ಕರ್ನಾಟಕದಿಂದ ಶುರು ಮಾಡಿ ಗುಜರಾತ್, ರಾಜಸ್ಥಾನ, ಪಂಜಾಬ್,ಉತ್ತರ ಪ್ರದೇಶ್,ಬಿಹಾರ್ ಇನ್ನೂ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಸುಮಾರು 11,000KM ರಷ್ಟು ಪ್ರವಾಸ ಮಾಡಿ, ಅಲ್ಲಾಗುವ ಅನುಭವಗಳಿಂದ ಕಾದಂಬರಿ ಬರೆಯುವುದಕ್ಕೆ ಇನ್ನೂ ಹೆಚ್ಚು ಪ್ರೇರಿತಗೊಂಡು ಮನಸ್ಸನ್ನು ಗಟ್ಟಿ ಮಾಡಿಕೊಂಡು ಈ ಕಾದಂಬರಿಯನ್ನು ಬರೆದೇ‌ತೀರಬೇಕೆಂದು ನಿರ್ಧರಿಸುತ್ತಾರೆ. 

ಇವರು ಬರೆದಿರುವುದು ಭಾರತದ ಪಾತ್ರಗಳಲ್ಲ, ಮಾನವ ಅನುಭವದ ವಿವಿಧ ಮುಖ, ರೂಪ, ಮಾನವ ಸಂಬಂಧಸ್ವರೂಪ ಮತ್ತು ವಿವೇಚನಗಳು. ಆದರೆ ಅವರು ಕೃಷ್ಣನ ಬಗ್ಗೆ‌ ಬರೆಯುವಾಗ ಬಹಳಾ ಯೋಚಿಸುತ್ತಾರೆ, ಏಕೆಂದರೆ ಕೃಷ್ಣನು ಸಾಮಾನ್ಯನಲ್ಲ. ರಾಮ ಸರಳವಾಗಿ ಅರ್ಥವಾಗುತ್ತಾನೆ, ಕೃಷ್ಣನಲ್ಲಿ ಗ್ರಹಿಕೆ ಮೀರಿದ ಯಾವುದಾದರೊಂದು ಮುಖ ಉಳಿಯುತ್ತೆ. ಅವನ ಕೆಲಸಗಳನ್ನೆಲ್ಲಾ ಎರಡು ಕೋನಗಳಿಂದ ನೋಡಬಹುದು, ಇದರಿಂದ ಅವರು ಕೃಷ್ಣನನ್ನು ಯುದ್ಧದ ಸಮಯದಲ್ಲಿ ಇನ್ನೂ ಹಲವಾರು ಕಡೆ ಅವನ ಪಾತ್ರವನ್ನು ಸೃಷ್ಟಿಸಿದ ರೀತಿ ಅದ್ಭುತ. ಅದಕ್ಕೆ ಅನುಗುಣವಾಗಿ ಯುಯುಧಾನ ಪಾತ್ರವನ್ನು ಸೃಷ್ಟಿಸಿದ್ದಾರೆ.

ಇಲ್ಲಿ ಕೆಲವು ಪ್ರದೇಶಗಳ ಮತ್ತು ಆ ಪ್ರದೇಶದ ಮಹತ್ವವನ್ನು ತಿಳಿಸಿದ್ದೇನೆ. ಆ ಪ್ರದೇಶಕ್ಕೆ ಭೇಟಿನೀಡಿದಾಗ ಕಾದಂಬರಿಕಾರರಿಗೆ ಹೊಳೆದ ಪಾತ್ರಗಳು ಅದನ್ನು ಕಾದಂಬರಿಯಲ್ಲಿ ಸೃಷ್ಟಿಸಿದ ರೀತಿಯನ್ನು ಕಂಡರೆ ಅಮೋಘ. ಉದಾಹರಣೆಗೆ 

ಬಿಹಾರದಲ್ಲಿರುವ ರಾಜಗೀರ್ ಪ್ರದೇಶ, ಅದು ಜರಾಸಂಧನ ಗಿರಿವೃಜೆ, ವೈಹಾರಗಿರಿ ಪ್ರದೇಶದವು ಭೀಮ ಜರಾಸಂಧರ ಮಲ್ಲಯುದ್ಧ ಮಾಡಿದ ಸ್ಥಳ. 

ಚಕರ್ ಪ್ರದೇಶವು, ಪಾಂಡವರ ಭಿಕ್ಷಾನ್ನದ ಮತ್ತು ಬಕಾಸುರನ ಏಕಚಕ್ರಾನಗರ.

ಭಲ್ಲ --- ಕೃಷ್ಣನು ಬೇಡನ ಬಾಣ ತಗುಲಿ ಪ್ರಾಣಬಿಟ್ಟಿರುವ ಸ್ಥಳ.

ಪೋರಬಂದರ್ --- ಕೃಷ್ಣನ ಸ್ನೇಹಿತ ‌ಸುಧಾಮನ ಊರು.

ರೈವತಕಪರ್ವತ --- ಯಾದವರು ಮಥುರೆಯಿಂದ ವಲಸೆ ಬಂದ ದಾರಿ.

ಓಖಮಂಡಲ್ --- ಬಾಣಾಸುರನ ಮಗಳ ಉಷೆಯ ಪ್ರಾಂಣ.

ಅಮೀನ --- ಥಾನೇಶ್ವರದಿಂದ ೫ ಮೈಲಿ ದೂರ, ಅಭಿಮನ್ಯು ಸತ್ತ ಜಾಗ.

ರಾಜಕರ್ಣಕಿಕಿಲಾ --- ಕರ್ಣ ಸತ್ತ ಜಾಗ.

ಥಾನೇಶ್ವರ ಪಶ್ಚಿಮದ ಭೋರೆಯಲ್ಲಿ ಭೂರಿಶ್ರವ ಕೊಲ್ಲಪ್ಪಟ್ಟ.

ಥಾನೇಶ್ವರ ನೈರುತ್ಯದ ನಗ್ದುವಿನಲ್ಲಿ ಭೀಷ್ಮ ಕೊಲ್ಲಪ್ಪಟ್ಟ.

ಬುಡಿಗಂಗಾ --- ಪಾಂಡೇಶ್ವರ ಹಾಗು ದುರ್ಯೋಧನ ಮಂದಿರ, ದ್ರೌಪದಿಯ ಅರಮನೆ, ಧರ್ಮಜನ ಆಸ್ಥಾನ,ಕರ್ಣನ ಮಂದಿರ.

ಬರ್ನಾವಾ --- ಅರಗಿನ ಮನೆಯ ಊರು.

ಕುಂಡಿನಪುರ ಈಗಿನ ರಾವಲ್ಪಿಂಡಿ --- ರುಕ್ಮಿಣಿಯ ಸ್ವಯಂವರ ಏರ್ಪಟ್ಟು, ಕೃಷ್ಣನು ಅವಳನ್ನು ಹಾರಿಸಿಕೊಂಡು ಹೋಗಿದ ಪ್ರದೇಶ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌