Book Watchers

ಅಜಿತ ಹೆಗಡೆ

ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿದ್ದಾರೆ. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿರುವ ಅವರು ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ’ಪರಿಧಾವಿ’ ಎಂಬ ಕಥಾಸಂಕಲನ , ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಪುಸ್ತಕಗಳು. ಪ್ರತಿಲಿಪಿ ಸ್ಪರ್ಧೆಯಲ್ಲಿ ಅವರ ’ತಾಯಿ’ ಕಥೆ ಮೊದಲ ಬಹುಮಾನ,. ಹುತ್ತ ಕಥೆ ಹಾಗೂ ನ್ಯಾಸಾಂತರ ಕವನ ತೀರ್ಪುಗಾರರ ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.

Articles

`ಅಶ್ವತ್ಥಾಮನ್' ಎಂಬ ನಮ್ಮೊಳಗಿನ ನಟ

ಅಹಂಕಾರ, ಅತಿಕಾಮ, ಭ್ರಮೆ ಇವುಗಳನ್ನೆಲ್ಲ ತನ್ನ ಶಕ್ತಿಯೆಂದೇ ಆತ ಭಾವಿಸುತ್ತಾನೆ. ಪಾತ್ರವಾಗಿ ಬದುಕುವುದು, ಬದುಕಿನುದ್ದಕ್ಕೂ ನಟಿಸುವುದು ಆತನಿಗೆ ಇಷ್ಟದ ಕಾಯಕ. ಆತ ಬಹಳ ಓದಿಕೊಂಡವನು, ವಾದಕ್ಕೆ ನಿಂತರೆ ಸೋಲಿಸುವುದು ಸಾಧ್ಯವಿಲ್ಲ! ಅದೆಷ್ಟೋ ಕೃತಿಗಳನ್ನು ರಚಿಸಿದ ನಿರೂಪಕನೂ ಅಶ್ವತ್ಥಾಮನ ಪ್ರಭಾವಕ್ಕೆ ಒಳಗಾಗುತ್ತಾನೆ.

Read More...

ಪೋರ್ಚುಗಲ್ ಐತಿಹಾಸಿಕತೆಯ ಅನಾವರಣ ‘ತೇಜೋ ತುಂಗಭದ್ರಾ’

ಪೋರ್ಚುಗಲ್ ನ ಲಿಸ್ಬನ್ ನಿಂದ ಆರಂಭವಾಗುವ ಕತೆ ತೇಜೋ ನದಿಯ ದಂಡೆಯ ಮೇಲೆ ನಿಧಾನವಾಗಿ ಹರಿಯುತ್ತದೆ. ಅಲ್ಲಿನ ಜನಪದ ಕತೆ ಸ್ವಾರಸ್ಯಕರವಾಗಿದೆ. ಪೋರ್ಚುಗಲ್ ನ ರಾಜ ಮ್ಯಾನ್ಯುಯಲ್, ಸ್ಪೇನಿನ ರಾಣಿ, ಯಹೂದಿಗಳ ಮೇಲೆ ಆಕ್ರಮಣ; ಹೀಗೆ ರಾಜಕೀಯ, ಧಾರ್ಮಿಕ ಮತ್ತು ಪ್ರಭುತ್ವದ ಮುಖಗಳನ್ನು ನಿರೂಪಕ ಅನಾವರಣ ಮಾಡಿದ್ದಾರೆ.

Read More...

’ಮಡಿಲ ನಕ್ಷತ್ರ’ದ ಅಂತರಂಗ

' ಇಲ್ಲಿ ಭಾವ ತೀವ್ರತೆಯೊಂದೆ ಇಲ್ಲ; ಬದುಕು ಕಟ್ಟುವ ಕಲೆ, ಮಾನವೀಯ ಅಂತಃಕರಣ, ಕಾಳಜಿ, ಆರ್ತತೆ, ಆರ್ದ್ರತೆ ಎಲ್ಲವೂ ಇವೆ. ಇನಿಯ ದನಿಯ ಬಯಕೆಯಿದೆ'.

Read More...

ಮೇಲುಸ್ತರದ ವೈವಿಧ್ಯಮಯ ಕಥೆಗಳ ’ಗೀರು’

ಮೊಹರು, ಶೀರ್ಷಿಕೆ ಕಥೆ ಗೀರು, ನೆರಳಿನಾಚೆ, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲಿಷ್, ಕುದಿ, ರೊಕ್ಕ ದೋಷ ಎಲ್ಲವೂ ಮೇಲುಸ್ತರದ ವೈವಿಧ್ಯಮಯ ಕಥೆಗಳು. ಈ ಟೆಂಡರ್ ಕಥೆಯಲ್ಲಿ ಕಟು ವಾಸ್ತವ ಸಂಗತಿಯನ್ನು ದೇವರ ಮುಖಾಂತರ ವಿಡಂಬನೆ ಮಾಡಿದ್ದು ದೀಪ್ತಿ ವಿಚಾರದ ವಿಸ್ತಾರವಾದ ಹರಿವಿನ ದ್ಯೋತಕವಾಗಿದೆ. ಹೀಗೆ ಒಂದೇ ಕಥಾಸಂಕಲನದಲ್ಲಿ ಹಲವು ಒಳ್ಳೆಯ ಕಥೆಗಳು ಇವೆ. ಆ ಕಾರಣದಿಂದ ಖಂಡಿತಾ ಕೊಂಡು ಓದಲೇ ಬೇಕಾದ ಪುಸ್ತಕವಿದು.

Read More...

ಆಫ್ರಿಕಾ ನೋವು, ನಲಿವಿನ ’ಸೂರ್ಯನ ನೆರಳು’

ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪುಶಿನ್ ಸ್ಕಿ 'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ "ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

Read More...