Book Watchers

ನಾಗರಾಜ ಷಣ್ಮುಖಪ್ಪ ರಂಗನ್ನವರ

ನಾಗರಾಜ ಷಣ್ಮುಖಪ್ಪ ಅವರು ಬಾಗಲಕೋಟೆಯ ತಳಗಿಹಾಳದವರು. ನಿರಂತರ ಓದಿನ ಆಸಕ್ತಿ. ಸದಾ ಒಂದಿಲ್ಲೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರವಾಸ, ಚಿತ್ರಕಲೆ, ಸಂಗೀತದ ಹವ್ಯಾಸವುಳ್ಳವರು. ಓಶೋ, ಕೃಷ್ಣಮೂರ್ತಿ, ಗುಲ್ಜಾರ್‌, ತೇಜಸ್ವಿ, ಜೋಗಿ, ಬೈರಪ್ಪ, ಹೆಮಿಂಗ್ವೆ, ಕೇಶವ ಮಳಗಿ ಅವರ ನೆಚ್ಚಿನ ಲೇಖಕರು. ಸಾಹಿತ್ಯವನ್ನು ಬಹುವಾಗಿ ಪ್ರೀತಿಸುವ ಅವರು ಗುಲ್ಜಾರ್‌ರ ’ಲ್ಯಾಂಡ್‌ ಸ್ಕೇಪ್, ಪೇಟಿಂಗ್‌, ಹೂ ಕಂಪನ’, ಓಶೋರ ’ಒಂದು ಕಪ್ ಚಹಾ’ ಮುಂತಾದ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪುಸ್ತಕ ವಿಮರ್ಶೆ ಬರೆಯುವುದರಲ್ಲೂ ಸಕ್ರಿಯರು.

Articles

ಉತ್ತರ ಕರ್ನಾಟಕದ ಗ್ರಾಮೀಣ ಊಟದ ರುಚಿಯನ್ನು ಕಟ್ಟಿಕೊಡುವ ರೊಟ್ಟಿ ಮುಟಗಿ

ಬಹುತೇಕ ಉತ್ತರ ಕರ್ನಾಟಕದ ಜನಜೀವನದ ಕತೆಗಳೂ ಸಹ ಒಂದು ಗ್ರಾಂಥಿಕ ಭಾಷೆಯಲ್ಲಿ ಬರೆಯಲ್ಪಟ್ಟಿರುತ್ತವೆ. ಆದರೆ ಗೊರವರ ಅವರು ಇಲ್ಲಿ ಇಂತಹ ಯಾವುದೇ 'ಬಿಡೆ'ಗಳಿಗೆ ಬೀಳದಯೇ ನಿಸ್ಸಂಕೋಚವಾಗಿ ಗ್ರಾಮೀಣ ಭಾಷೆಯನ್ನು ಖಡಕ್ ಆಗಿಯೇ ಬಳಸಿದ್ದಾರೆ.

Read More...

ಅಸಂಗತ ಅರಿವಿನ ’ಪತನ’

ಕಮೂ ತನ್ನ ತೀರಾ ನೇರಾನೇರವಾದ ವಿಚಾರಗಳನ್ನು ವಾಸ್ತವ ಜಗತ್ತಿನಲ್ಲಿ ಅತ್ಯಂತ ಕಠೋರವಾದರೂ ಸಹ , ಸಹನೀಯ ರೀತಿಯಲ್ಲಿ ತನ್ನ ಕೃತಿಗಳ ಮೂಲಕ ಪ್ರಕಟಿಸುತ್ತ ಬಂದವ. ಕಮೂ ಕೃತಿಗಳ ಕುರಿತು ಓಶೋ ಅವರಿಂದ ಹಿಡಿದು ಕೇಶವ ಮಳಗಿಯವರು ವಿಚಾರಿಸಿ ವಿಮರ್ಶಿಸಿದ್ದಾರೆ. ಕಮೂ ಕೃತಿಗಳು ಯಾವ ಭಾಷೆಯ ಹಂಗೂ ಇಲ್ಲದೇ ಅತೀ ಹೆಚ್ಚು ವಿಮರ್ಶೆಗೊಳಗಾಗಿವೆ.

Read More...

ಭಾರತ ಒಂದು  ಮರುಶೋಧನೆ

ಭಾರತದಲ್ಲಿ ಲಿಂಗಾರಾಧನೆ, ಸರ್ಪಾರಾಧನೆ, ಪ್ರಕೃತಿಯಾರಾಧನೆಗಳಂತಹ ಆಚರಣೆಗಳು ಕೇವಲ ಮಾನವ ಸಹಜ ಸ್ವಭಾವಗಳಾದ ಕೃತಜ್ಞತೆ, ಭಯ, ಧನ್ಯತೆ, ಅರ್ಪಣಾ ಮನೋಭಾವಗಳನ್ನು ವ್ಯಕ್ತಪಡಿಸುವ ದಾರಿಗಳಾಗಿದ್ದವೆ ಹೊರತು ಧಾರ್ಮಿಕ ಆಚರಣೆಗಳಾಗಿರಲಿಲ್ಲ. ಪ್ರಕೃತಿಯಾರಾಧನೆಯ ಮಾನವ ಸಹಜ ಭಾವನೆಗಳನ್ನು ಒಂದು ನಿಯಮಬದ್ಧ ಆಚರಣೆಯಾಗಿಸುವ ಉದ್ದೇಶದಿಂದ ಋಗ್ವೇದ ರೂಪಿಸಲ್ಪಟ್ಟಿತು ಎಂದು ರವಿ ಹೇಳುತ್ತಾರೆ.

Read More...

'ನೆಲೆ' ಕಾಣುವುದು

"ನಕ್ಷತ್ರಗಳ ಹೊಳಪು ಜಾಸ್ತಿಯಾಗಿತ್ತು. ಮುಚ್ಚಿದ ಕಣ್ಣುಗಳನ್ನು ತಕ್ಷಣ ತೆರೆದದ್ದಕ್ಕೋ ಅಥವಾ ಭೂಮಿಯ ಈ ಭಾಗದಲ್ಲಿ ಕತ್ತಲು ಸಂಪೂರ್ಣವಾಗಿರುವುದಕ್ಕೋ ಎಂದುಕೊಳ್ಳುವಾಗ ಮನುಷ್ಯನ ಕಣ್ಣಿನ ಶಕ್ತಿಯ ಮಾನದಿಂದ ವಿಶ್ವದಲ್ಲಿ ಕತ್ತಲಿನ ಪ್ರದೇಶ ಹೆಚ್ಚೋ ಬೆಳಕಿನ ಪ್ರದೇಶ ಹೆಚ್ಚೋ ಎಂಬ ಪ್ರಶ್ನೆ ಹುಟ್ಟಿತು. ಅಳತೆ ಮಾಡಿ ಉತ್ತರ ದೊರಕಿಸಬಹುದಾದ ಪ್ರಶ್ನೆ...."

Read More...

ಬೆಳಕಿನ ಬೇಲಿಯ ನ್ಯಾನೋ ಕತೆ

ಮೂಲತಃ ’ನ್ಯಾನೋ’ ತಂತ್ರಜ್ಞಾನದಂತೆ ’ಗಾತ್ರದಲ್ಲಿ ಕಿರಿದು- ಸಾಮರ್ಥ್ಯದಲಿ ಹಿರಿದು’ ಎಂಬ ಪರಿಕಲ್ಪನೆಯನ್ನು ಈ ಕತೆಗಳು ಹೊತ್ತು ತಂದಿವೆ. ಇವನ್ನು ಪೌರಾಣಿಕ ಪರಿಭಾಷೆಯಲ್ಲಿ ’ವಾಮನ ಕಥೆಗಳು’ ಎಂದು ಕರೆಯಬಹುದೇನೋ.

Read More...