About the Author

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. 

ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ಜಾನಪದ ಚಿಂತನ, ಜಾನಪದ ಕಥನಗೀತ ಸಂಚಯ, ಶರಣ ಸಂಗಾತ, ಜಾನಪದ ಸಮಾಲೋಕ, ವಿಮರ್ಶನ ಗ್ರಹಿಕೆ, ಗೋಕಾವಿನಾಡಿನ ಹೊನ್ನ ಬೆಳೆ, ವಚನಕಾರ ಜೇಡರದಾಸಿಮಯ್ಯ, ಉತ್ತರ ಕರ್ನಾಟಕದ ಭಜನೆ ಹಾಡುಗಳು, ಸಹೃದಯ, ಬೆಳಗಲಿ ಶರಣ ಕಿರಣ, ಅಮೃತದುಂದುಭಿ, ಸಮೃದ್ಧಿ, ಸುವರ್ಣ ಸಂಪಿಗೆ, ಚಂದ್ರಶೇಖರ ಕಂಬಾರ, ಜನಪದ ತ್ರಿಪದಿಗಳು, ಅಂಬಿರ ಚೌಡಯ್ಯನವರ ವಚನಗಳು ಹಾಗೂ ಶರೀರ ಜಾನಪದ, ಉತ್ತರ ಕರ್ನಾಟಕದ ಕೃಷಿ ಜನಪದ ಸಾಹಿತ್ಯ, ಡಾ.ಬಿ.ಎಸ್. ಗದ್ದಗಿಮಠ, ಡಾ.ಆರ್‌.ಸಿ. ಹಿರೇಮಠ, ಡಾ.ಎಂ.ಎಸ್. ಸುಂಕಾಪುರ, ಬಸವ ಬೆಳಗು, ಜಂಗಮ ಜಾನಪದ, ನನ್ನೂರು, ರಸದಾಳಿ, ಜನಪದ ರಂಗಭೂಮಿ ಕಲಾವಿದ ಶ್ರೀ ನಿಮಗಯ್ಯಸ್ವಾಮಿ ಪೂಜಾರಿ, ಪ್ರೊ. ಜ್ಯೋತಿ ಹೊಸೂರ, ಆಧುನಿಕ ಕನ್ನಡ ಆತ್ಮಕತೆಗಳು, ಬೆಳಗಾವಿ ಜಿಲ್ಲೆ ಜನಪದ ಕಲಾವಿದರು, ಡಾ. ಬಸವರಾಜ ಮಲಶೆಟ್ಟಿ, ಶರಣ ಕ್ಷೇತ್ರಗಳು, ಜಾನಪದ ಸಂಭ್ರಮ, ಹತ್ತು ಮಂದ್ಯಾಗ ಹಾಡೇನ, ಜಾನಪದ ಸಡಗರ, ಸಾಹಿತ್ಯ ಸಂವಾದ-೨, ಸೋಮಲಿಂಗ ಕವಿಯ ಲಾವಣಿಗಳು, ವಚನ ಸಂಪದ, ಶೂನ್ಯ ಸಂಪದ, ಸತ್ಯಾರ್ಥಿ, ಶತಾಯುಷಿ, ಲಾವಣಿ ಸಾಮ್ರಾಟ,, ಸೋಲಿಂಗಪ್ಪ ದೊಡವಾಡ, ದೇಸೀ ಸಂಭ್ರಮ, ಸಾಹಿತ್ಯ ಸಂಕೀರ್ಣ, ಕುವೆಂಪು ಕಥನ ಕವನಗಳು, ನಿಜಗುಣ ಶಿವಯೋಗಿ  ಮುಂತಾದವು. 

ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ, ಸಿರಿಗನ್ನಡ ಗೌರವ ಪ್ರಶಸ್ತಿ, ಡಾ.ಬಿ.ಎಸ್. ಗದ್ದಗಿಮಠ ಗೌರವ ಪ್ರಶಸ್ತಿ, ರಂಗ ಸಂಸ್ಥಾನ ಪ್ರಶಸ್ತಿ ಪುರಸ್ಕಾರ, 

ಸಿ.ಕೆ ನಾವಲಗಿ

(01 Aug 1956)

Books by Author