ಬಲಿ ಮತ್ತು ಇತರ ಕಥೆಗಳು

Author : ಉದಯ್ ಕುಮಾರ್ ಹಬ್ಬು

Pages 420

₹ 440.00
Year of Publication: 2021
Published by: ಅನುಗ್ರಹ ಪ್ರಕಾಶನ
Address: # 174, 1ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ, ಲಕ್ಕಪ್ಪ ಲೇಔಟ್, ಬೆಂಗಳೂರು- 560097

Synopsys

‘ಬಲಿ ಮತ್ತು ಇತರ ಕಥೆಗಳು’ ಲೇಖಕ ಉದಯಕುಮಾರ ಹಬ್ಬು ಅವರ ಕಥಾಸಂಕಲನ. ಪ್ರತಿಯೊಬ್ಬನ ಒಳಗೂ ಒಂದಲ್ಲಾ ಒಂದು ಕತೆ ಇದ್ದೇ ಇರುತ್ತದೆ. ಇಷ್ಟೇ ಅಲ್ಲ. ಪ್ರತಿಯೊಬ್ಬನಿಗೂ ತನಗೆ ಗೊತ್ತಿರುವ ಕತೆಯನ್ನು ಇನ್ನೊಬ್ಬರಿಗೆ ಹೇಳಬೇಕೆನ್ನುವ ಹಂಬಲವೂ ಇರುತ್ತದೆ. ಒಂದು ಅರ್ಥದಲ್ಲಿ ನಮ್ಮ ದಿನನಿತ್ಯದ ಸಂಭಾಷಣೆಗಳೆಲ್ಲಾ ಕತೆಗಳ ಅದರಲ್ಲೂ ಬದುಕಿನ ಕತೆಗಳ ಚಿಕ್ಕ ಚಿಕ್ಕ ಮಾದರಿಗಳೇ ಆಗಿರುತ್ತವೆ. ಅದರ ಒಳಗಿರುವ ಕತೆ ಹೇಗೆ ಹೊರ ಬರುತ್ತದೆ, ಯಾವ ರೂಪಕದ ಮೂಲಕ, ಯಾವ ಶೈಲಿಯ ಮೂಲಕ ಪ್ರಕಟವಾಗುತ್ತದೆ ಎನ್ನುವುದರಲ್ಲೇ ಕತೆಯ ಮಹತ್ವ ಅಡಗಿರುತ್ತದೆ. ಕೆಲವೊಮ್ಮೆ ಕತೆಗಳು ನೇರವಾಗಿ ಸರಳವಾಗಿ ಬಯಲಾದರೆ ಕೆಲವು ಸಲ ಕತೆಗಳು ನಿಗೂಢವಾಗಿ ಒಂದು ಬಗೆಯ ಕತೆಗಳಿಗೂ ಓದುಗರು ಇರುತ್ತಾರೆ ಎನ್ನುವ ಉತ್ತರ ಕೊಡಬೇಕಾಗುತ್ತದೆ. ಈ ಅರ್ಥದಲ್ಲಿ ಕತೆಗಳು ಎಂದೂ ಸೋಲುವುದಿಲ್ಲ. ಕತೆ ಹೇಳುವವನ ಇತಿಮಿತಿಗಳಿಂದ ಕತೆ ಒಂದಿಷ್ಟು ಮಂಕಾಗಬಹುದು, ಮಾಡಬೇಕಾದ ಪರಿಣಾಮ ಮಾಡದೆ ಹೋಗಬಹುದು. ಆದರೆ ಇವು ಕತೆಯ ಸೋಲಂತೂ ಖಂಡಿತಾ ಅಲ್ಲ. ಬಲಿ ಮತ್ತು ಇತರ ಕಥೆಗಳು ಎನ್ನುವ ಈ ಸಂಕಲನದಲ್ಲಿರುವ ಕತೆಗಳು ಲೇಖಕ ಉದಯಕುಮಾರ ಹಬ್ಬು ಅವರೊಳಗಿನ ಕತೆಗಾರನನ್ನು ಓದುಗರ ಒಳಗಿರುವ ಕತಾಪ್ರೇಮದೊಂದಿಗೆ ಮುಖಾಮುಖಿಯಾಗಿಸುತ್ತವೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books