ಗಾಂಧೀಜಿಯವರ ಕಥೆಗಳು

Author : ಉದಯ್ ಕುಮಾರ್ ಹಬ್ಬು

Pages 148

₹ 140.00




Year of Publication: 2022
Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 09916595916

Synopsys

ಉದಯಕುಮಾರ್ ಹಬ್ಬು ಅವರ ಕನ್ನಡ ಅನುವಾದಿತ ಕೃತಿ ‘ಗಾಂಧೀಜಿಯವರ ಕಥೆಗಳು’. ಈ ಕೃತಿಗೆ ಚಂದ್ರಕಾಂತ್ ಪೋಕಳೆ ಅವರು ಬೆನ್ನುಡಿ ಬರೆದಿದ್ದು, ‘ ಗಾಂಧೀಜಿಯವರನ್ನು ಪ್ರಸ್ತುತಪಡಿಸುವಾಗ ಲೇಖಕರು ಕೇವಲ ಅವರ ವಿಚಾರಗಳನ್ನಷ್ಟೇ ಹೇಳಿ ವಿಶ್ಲೇಷಿಸಬಹುದು. ಇನ್ನು ಕೆಲವರು ಸಂಕಥನದ ಮೂಲಕ ಗಾಂಧಿ ವಿಚಾರಗಳನ್ನು ಪ್ರಸ್ತುತಪಡಿಸಬಹುದು. ಉದಯಕುಮಾರ ಹಬ್ಬು ಅವರು ಸಂಕಥನದ ಮಾರ್ಗವನ್ನು ಹಿಡಿದು ಓದುಗರಿಗೆ ಹೆಚ್ಚು ಆಪ್ತವಾಗುತ್ತಾರೆ’ ಎಂದು ಹೇಳಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Reviews

‘ಗಾಂಧೀಜಿ ಕಥೆಗಳು’ ಕೃತಿಯ ವಿಮರ್ಶೆ 

ಭಾರತ ಸ್ವಾತಂತ್ಯ್ರಗೊಂಡು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುವುದು ಗುಲಾಮಗಿರಿಯಿಂದ ಹೊರಬಂದ ಆ ದಿನಗಳು ಮತ್ತು ಗಾಂಧೀಜಿ. ಗಾಂಧೀಜಿ ಅವರ ಕುರಿತಾದ ಕೃತಿಗಳು ಕನ್ನಡದಲ್ಲಿ ಮಾತ್ರವಲ್ಲ ಹಲವು ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇವೆ. ಇಂತಹ ಮತ್ತೊಂದು ಕೃತಿ ಕನ್ನಡದಲ್ಲಿ ಲೋಕಾರ್ಪಣೆಗೊಂಡಿದೆ. ಅದುವೇ ಹಿರಿಯ ಲೇಖಕ ಉದಯಕುಮಾರ ಹಬ್ಬು ಅವರ 'ಗಾಂಧೀಜಿಯವರ ಕಥೆಗಳು'. ಲೇಖಕರೇ ಹೇಳಿಕೊಂಡಂತೆ ಇಂಟರ್ ನೆಟ್‌ನಿಂದ ಸಿಕ್ಕ ಮಾಹಿತಿಗಳನ್ನು ಆಧರಿಸಿ ಬರೆದ ಲೇಖನಗಳಿವು. ಒಂದು ಪುಟದಿಂದ ಹಿಡಿದು ಮೂರು ಪುಟಗಳಷ್ಟು ಇರುವ ಒಟ್ಟು 64 ಲೇಖನಗಳಿವೆ. ಬೇಸಿಕ್ ಪೆನ್, ಗಾಂಧಿ ಮತ್ತು ದಿಲ್ಲಿ, ದಂಡಿ ವಾರ್ತೆ, ಬಾಲಾ ಆಯ್ಕೆ ಇವೇ ಮುಂತಾದ ಶೀರ್ಷಿಕೆಗಳುಳ್ಳ ಲೇಖನಗಳು. ಲೇಖನದ ಶೀರ್ಷಿಕೆಗಳೇ ಹೇಳವಂತೆ ಗಾಂಧಿ ಅವರ ಬದುಕಿನ ಮಜಲುಗಳ ಪರಿಚಯ ಇಲ್ಲಿದೆ. ಕೃತಿಯ ಬಗ್ಗೆ ಚಂದ್ರಕಾಂತ ಪೋಕಳೆಯವರು ಹೇಳಿದ ಮಾತು ಇಲ್ಲಿ ಉಲ್ಲೇಖನಿಯ. 'ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆ, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಹಬ್ಬು ಅವರು ಇವೆರಡಕ್ಕಿಂತ ಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ.' ಪುಸ್ತಕವು ಚೊಕ್ಕವಾಗಿ ಮುದ್ರಣಗೊಂಡಿರುವುದು ಗಮನಾರ್ಹ.

( ಕೃಪೆ : ವಿಶ್ವವಾಣಿ)

---

Related Books