ಪ್ರಾಚೀನ ಭಾರತೀಯ ತತ್ವ ದರ್ಶನಗಳು ಒಂದು ಸಮೀಕ್ಷೆ

Author : ಉದಯ್ ಕುಮಾರ್ ಹಬ್ಬು

Pages 234

₹ 200.00




Year of Publication: 2018
Published by: ಅಭಿಷೇಕ್ ಹೌಸ್
Address: ಬಿತುಲು, ತಲಪಾಡಿ ವಿಲ್ಲೇಜ್, ಪಿ.ಓ. ಕಿನ್ನಿಗೋಳಿ, ಮಂಗಳೂರು- 574150
Phone: 9902761720

Synopsys

‘ಪ್ರಾಚೀನ ಭಾರತೀಯ ತತ್ವ ದರ್ಶನಗಳು : ಒಂದು ಸಮೀಕ್ಷೆ’ ಲೇಖಕ ಉದಯ ಕುಮಾರ ಹಬ್ಬು ಅವರ ಕೃತಿ. ಡಾ ಜಿ ಬಿ ಹರೀಶ್ ಅವರು ಈ ಕೃತಿಗೆ ಮುನ್ನುಡಿ ಬರೆದು ‘ನಮ್ಮ ಕಾಲಕ್ಕೆ ವಾದಭೂಮಿಕೆಯೊಂದು ಬೇಕಾಗಿದೆ. ಅದನ್ನು ಭಾರತೀಯ ತತ್ವ ಮತ್ತು ಅನ್ಯ ದರ್ಶನಗಳು ಒದಗಿಸುತ್ತವೆ. ನನ್ನ ಮನಸ್ಸಿನಲ್ಲಿ ಅರಿಸ್ಟಾಟಲ್,ಕಾಂಟ್, ರಸೆಲ್ ಗಿಂತ ಹೆರಕ್ಲಿಟಸ್,ತಾವೊ, ಬೋಧಿಧರ್ಮ, ನಾಗಾರ್ಜುನ, ಕುಂದಕುಂದ, ಸುರೇಶ್ವರ, ಆನಂದ ಕುಮಾರಸ್ವಾಮಿ, ಟ್ಯಾಗೋರ್, ಗಾಂಧಿ, ಬಿಮಲ್ ಕೃಷ್ಣ ಮೋತಿಲಾಲ್, ಹೆನ್ರಿಕ್ ಜಿಮ್ಮರ್ ಅವರ ಚಿತ್ರಗಳು ಮೂಡುತ್ತಿವೆ. ನಮ್ಮ ದೇಶದ ಸಾರ್ವಜನಿಕ ಚರ್ಚೆಯ ಬುನಾದಿಗೂ ದರ್ಶನ ಪ್ರಪಂಚಕ್ಕೂ, ನಿತ್ಯದ ಆಗು ಹೋಗುಗಳಿಗೂ ಹೊಕ್ಕಳು ಬಳ್ಳಿ ಸಂಬಂಧ ಇದ್ದುದನ್ನು ತೋರಿಸುತ್ತದೆ. ಆದರೆ ಈಗ? ವಿಶ್ವವಿದ್ಯಾನಿಲಯಗಳಲ್ಲಿ ತತ್ವ ಶಾಸ್ತ್ರದ ಅಧ್ಯಯನ, ಬೋಧನೆಯ ಮಟ್ಟ ಕುಸಿದಿದೆ. ಅದಕ್ಕೆ ಪೂರಕವಾಗಿ ಬೇಕಾದ ಸಂಸ್ಕೃತ- ಪ್ರಾಕೃತ- ಹಳಗನ್ನಡಗಳ ಇವುಗಳ ಅಧ್ಯಯನವೂ ಸುಸ್ಥಿತಿಯಲ್ಲಿ ಇಲ್ಲ. ಅಂದರೆ ಒಂದು ಕಡೆ ಸಮಾಜಕ್ಕೆ ನಮ್ಮ ಪ್ರಾಚೀನ, ಅರ್ವಾಚೀನ ದರ್ಶನಗಳು, ದಾರ್ಶ‌ನಿಕರನ್ನು ಅರ್ಥಮಾಡಿಕೊಳ್ಳುವ ಹಂಬಲವಿದೆ. ಆದರೆ ಅದನ್ನು ಪೂರೈಸಬೇಕಾದ ಕೇಂದ್ರಗಳು ದಣಿದಿವೆ. ಈ ಹಿನ್ನೆಲೆಯಿಂದಲೂ ಹಬ್ಬು ಅವರ ಕೆಲಸದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು‌’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books