ಪುಸ್ತಕ ಪ್ರೀತಿ ವಿಮರ್ಶಾ ಲೇಖನಗಳು

Author : ಉದಯ್ ಕುಮಾರ್ ಹಬ್ಬು

Pages 260

₹ 175.00




Year of Publication: 2015
Published by: ದುರ್ಗ ಬುಕ್‌ ಹೌಸ್‌
Address: ಗೋವಿಂದರಾಜನಗರ, ಬೆಂಗಳೂರು
Phone: 89871227876

Synopsys

'ಪುಸ್ತಕ ಪ್ರೀತಿ ವಿಮರ್ಶಾ ಲೇಖನಗಳು' ಉದಯಕುಮಾರ್ ಹಬ್ಬು ಅವರು ರಚಿಸಿರುವ ವಿಮರ್ಶಾ ಲೇಖನಗಳ ಸಂಕಲನ. ಕೃತಿಯ ಕುರಿತು ತಿಳಿಸುತ್ತಾ ಪುಸ್ತಕಗಳನ್ನು ಓರ್ವ ಸಹೃದಯ ಓದುಗನಾಗಿ ಓದಿ ಆ ಬಗ್ಗೆ ನಾನು ಹರಿಸಿದ ಚಿಂತನ-ಮಂಥನಗಳು ನವನೀತದಂತೆ ಮೂಡಿಬಂದಿವೆ. ಇತ್ತೀಚಿಗಿನ ಹಲವಾರು ನೂತನ ಕೃತಿಗಳ ಪರಿಚಯ ಮತ್ತು ವಿಮರ್ಶೆ ಲೇಖನಗಳಿವೆ. ಓರ್ವ ಕನ್ನಡ ಓದುಗ ಈ ಪುಸ್ತಕದಿಂದ ಖಂಡಿತ ಪ್ರೇರಣೆ ಪಡೆಯಬಲ್ಲ. ಮತ್ತು ಇಲ್ಲಿ ಉಲ್ಲೇಖಿಸಿರುವ ಪುಸ್ತಕಗಳನ್ನು ಓದಲು ಮನಸ್ಸು ಮಾಡಲು ಒಂದು ಪ್ರೇರಕಶಕ್ತಿ ಇವುಗಳಿಗೆ ಇದೆ ಎಂದ ನಾನು ಖಂಡಿತವಾಗಿ ಹೇಳಬಲ್ಲೆ. ಸಹೃದಯ ಓದುಗರು ಈ ಪುಸ್ತಕವನ್ನು ಓದಿ ಇದರ ಲಾಭ ಪಡೆಯಲೆಂದು ನಾನು ಆಶಿಸುತ್ತೇನೆ. ಎಂದಿನಂತೆ ಓದುಗರ ಮುಕ್ತ ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ. ಇಲ್ಲಿನ ಹಲವಾರು ಲೇಖನಗಳು 'ಪ್ರಜಾವಾಣಿ', 'ಸಂಕ್ರಮಣ', 'ಗಾಂಧಿ ಬಜಾರ್', 'ಸಂವಾದ' ಇನ್ನೂ ಹಲವಾರು ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ ಎಂದಿದ್ದಾರೆ ಲೇಖಕ ಉದಯಕುಮಾರ ಹಬ್ಬು.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books