ಓದಿನ ಮನೆ

Author : ದೀಪಾ ಫಡ್ಕೆ

Pages 168




Year of Publication: 2021
Published by: ಸಾಹಿತ್ಯ ಸಾಧನಾ
Address: #643, 5ನೇ ಬ್ಲಾಕ್, ಸರ್. ಎಂ. ವಿ ಲೇಔಟ್ , ಉಲ್ಲಾಳುಕೆರೆ ಎದುರು, ಬೆಂಗಳೂರು- 560056
Phone: 9480088960

Synopsys

‘ದೀಪಾ ಫಡ್ಕೆ’ ಅವರ ‘ಓದಿನ ಮನೆ’ ಕೃತಿಯು ಅಂಕಣ ಬರಹಗಳ ಸಂಕಲನವಾಗಿದೆ. ಕೃತಿಗೆ ಮುನ್ನಡಿ ಬರೆದಿರುವ ಅರವಿಂದ ಚೊಕ್ಕಾಡಿ, ‘ನಮ್ಮ ನಡುವಿನ ಪ್ರಮುಖ ಲೇಖಕ ಆಗಿರುವ ಡಾ. ದೀಪಾ ಫಡ್ಕೆ ಅವರು ತಾವು ಓದಿದ ಹಲವು ಪ್ರಸ್ತಕಗಳ ಹಿನ್ನೆಲೆಯಲ್ಲಿ ನಡೆಸಿದ ಸಂಸ್ಕೃತಿ ಚಿಂತನೆಗಳು ಈ ಲೇಖಕರ ಪ್ರಸ್ತಕದ ಪರಿಚಯವೂ ಹೌದು. ದೀಪಾ ಅವರ ಸಾಂಸ್ಕೃತಿಕ ಚಿಂತನೆಗಳೂ ಹೌದು. ಅಂದರೆ ಅವರು ತಮ್ಮ ಚಿಂತನೆಗಳ ಮೂಲಕ ಪುಸ್ತಕವನ್ನು ಪ್ರವೇಶಿಸುವ ಮತ್ತು ಪುಸ್ತಕಗಳ ಓದಿನ ಮೂಲಕ ತಮ್ಮ ಚಿಂತನೆಯನ್ನು ವಿಕಾಸಗೊಳಿಸಿಕೊಳ್ಳುವ ವಿನ್ಯಾಸದಲ್ಲಿ ಈ ಕೃತಿಯನ್ನು ಬರೆದಿದ್ದಾರೆ. ಕೃತಿಯು 40 ಅಧ್ಯಾಯಗಳನ್ನು ಒಳಗೊಂಡಿದ್ದು ಸುಮ್ಮನೆ ಓದೋಣಾ, ಅಭಿಜಾತ ಕನ್ನಡ, ಅನಾರ್ಕಲಿಯ ಸೇಫ್ಟಿ ಪಿನ್, ಯುಗಾವತಾರಿ, ಅಸುರ, ಬಾಡಿಗೆ ಮನೆಗಳ ರಾಜ ಚರಿತ್ರೆ, ಬಾಳ ಪಯಣ, ಭಾರತೀಯ ಸಂಸ್ಕೃತಿ, ಬೊಗಸೆಯಲ್ಲಿ ಮಳೆ, ಧಾತು, ಧರ್ಮಯುದ್ದ, ಗುಲ್ ಮೊಹರ್, ಹಮಾರಾ ಬಜಾಜ್, ಹೊರಳು ದಾರಿ, ಜಾರುವ ದಾರಿಯಲ್ಲಿ, ಜಾಂಬ್ಳಿ ಟುವಾಲು, ಜೀವನದೊಂದು ಕಲೆ, ಜೀವನ ಸೌಂದರ್‍ಯ ಮತ್ತು ಸಾಹಿತ್ಯ, ಕಾಲದೊಂದೊಂದೇ ಹನಿ, ಕ್ಷಮತೆ, ಮಧ್ಯಘಟ್ಟ, ಮನಸ್ಸು ಅಭಿಸಾರಿಕೆ, ಮಾನ್ಯ ಸಾಮಾನ್ಯರ ಪ್ರಸಂಗ, ಮರೆಯಲಾದಿತೇ, ಮುಖಾಂತರ, ನಡೆದಷ್ಟೂ ನಾಡು, ನಮ್ಮ ಸಂಸ್ಕೃತಿ, ನಿಗೂಢ ಭಾರತ, ರಾಮಾಯಣ ಮಹಾಭಾರತ ಮತ್ತು ಧರ್ಮ, ಋಗ್ವೇದ ಸ್ಫುರಣ, ಸಮೀಕ್ಷೆ, ಸಂಪಿಗೆ ಭಾಗವತ, ಶಬ್ದತೀರ, ಶಿಷ್ಟ ವಿಶಿಷ್ಟ, ಸ್ವಪ್ನ ಸಾರಸ್ವತ, ತತ್ತ್ವಮನನ, ವಾಗರ್ಥ ವಿಲಾಸ, ಯರ್ಮುಂಜ ರಾಮಚಂದ್ರ, ಆನೆ ಸಾಕಿದವಳು ಈ ಎಲ್ಲ ವಿಚಾರಗಳನ್ನು ಒಳಗೊಂಡಿದೆ. ದೀಪಾ ಅವರು ಸಿದ್ಧಾಂತಗಳಿಗೆ ಬಂಧಿಯಾಗದೆ ಇರುವುದು ವಿಶೇಷ. ಇಲ್ಲಿ ಅವರು ಏನು ಹೇಳಿದ್ದಾರೆಯೊ ಅದು ಅವರ ಸ್ವತಂತ್ರ ಆಲೋಚನೆಗಳಾಗಿವೆ. ಆ ಆಲೋಚನಾ ಕ್ರಮದ ಕುರಿತಾಗಿ ಏನೇ ಹೇಳಬಹುದು; ಆದರೆ ಈ ಆಲೋಚನಾಕ್ರಮ ಸ್ವತಂತ್ರ ಪ್ರಾಮಾಣಿಕವೂ ಆದದ್ದು ಎನ್ನುವುದರಲ್ಲಿ ಅನುಮಾನವಿಲ್ಲ. 'ಋಗೈದ ಸ್ಫುರಣ' ದ ಬಗ್ಗೆ ಬರೆಯುತ್ತಾ ದೀಪಾ ಅವರು... ಇವೆಲ್ಲದರ ನಡುವಿನ ಪ್ರಜ್ಞಾಮಾರ್ಗವೊಂದು ನಮ್ಮಲ್ಲಿ, ನಮ್ಮ ಯೋಚನೆಗಳಲ್ಲಿ ಪ್ರವಹಿಸುತ್ತಿದ್ದಾಗಲಷ್ಟೆ ಎಲ್ಲ ಮಾರ್ಗಗಳ ಉತ್ತಮ ಮೌಲ್ಯಗಳನ್ನು ನಾವು ಬದುಕಿನಲ್ಲಿ ಧರಿಸಲು ಸಾಧ್ಯವಾಗುತ್ತದೆ. ದೀಪಾ ಅವರು ಈ ಮಾರ್ಗವನ್ನೇ ಅನುಸರಿಸುವುದಿಲ್ಲ. ಆದರೆ ಈ ಮಾರ್ಗದ ಮೂಲಕ ತನ್ನ ಆಲೋಚನೆಯನ್ನು ರೂಪಿಸಿಕೊಳ್ಳಬೇಕು ಎಂಬ ಅರಿವಿನಿಂದಲೇ ಸಾಗುತ್ತಾರೆ. ಹೆಣ್ಣು ಹೆಚ್ಚು ಸಹಜವೂ, ಕ್ರಿಯೇಟಿವ್ ಆಗಿಯೂ, ಗಂಡು ಹೆಚ್ಚು ಕ್ಯಾಜ್ಯುವೆಲ್ ಆಗಿಯೂ ಯೋಚಿಸುವುದು ಒಂದು ಸಹಜ ಕ್ರಮ. ದೀಪಾ ಅವರ ಈ ಕೃತಿಯಲ್ಲಿ ಮಹಿಳಾ ವಾದದ ಸಂಗತಿಗಳು ಕಾಣಿಸುವುದಿಲ್ಲ. ಬದಲು ಮಹಿಳಾ ದೃಷ್ಟಿಕೋನ, ಮಹಿಳೆಯೊಬ್ಬಳು ಓದನ್ನು ಅನುಭವಿಸುವ ವಿಧಾನಗಳು ಹೆಚ್ಚು ಕಾಣಿಸುತ್ತವೆ. ಆದ್ದರಿಂದಲೇ, ದೀಪಾ ಅವರ ಬರೆಹಗಳು ತೀಕ್ಷ್ಣ ಅಲ್ಲ; ಮಂದಸ್ಮಿತ: ತಂಗಾಳಿ ಬೀಸಿದಂತೆ. ಆ ರೀತಿಯಲ್ಲಿ ದೀಪಾ ಅವರು ಓದಿದ ಪುಸ್ತಕಗಳು ನಮ್ಮಲ್ಲೂ ಒಂದು ಆಪ್ತ ಭಾವವನ್ನು ಸೃಷ್ಟಿಸಲು ಯಶಸ್ವಿಯಾಗುತ್ತವೆ. ಅವರ ಆಲೋಚನೆಗಳು ಪರಂಪರೆಯ ಯಾನದ ಒಂದು ಭಾಗವಾಗಿ ರೂಪುಗೊಂಡಿವೆ. ಅಂದರೆ ಇಲ್ಲಿ ಕಾಣಿಸುವ ಆಲೋಚನಾ ಕ್ರಮ ಮತ್ತು ಚಿಂತನೆಗಳು ಈ ಸಂಸ್ಕೃತಿಯ ಯಾನದ ತನ್ನ ಕಾಲದ ಅನುಭವಗಳ ಕೊಂಡಿಯ ರೂಪದಲ್ಲಿ ಇವೆಯೇ ಹೊರತು ಪ್ರತ್ಯೇಕವಾದ ಒಂದು ಹೊಸ ರಚನೆ ಅಲ್ಲ. ಆದ್ದರಿಂದಲೇ, ಅವರ ಚಿಂತನೆಗಳಿಗೆ 'ಭೂತ', 'ವರ್ತಮಾನ'' ಭವಿಷ್ಯ' ದ ವ್ಯಾಪ್ತಿ ಇದೆ. ಒಬ್ಬ ಲೇಖಕಿ ತಾನೂ ಜನ ಜೀವನದ ಭಾಗವಾಗಿದ್ದು, ಒಬ್ಬ ಮಹಿಳೆಯೂ ಆಗಿದ್ದು, ಬದುಕನ್ನು ತನ್ನದಾಗಿಸಿಕೊಳ್ಳುವ ಹಂಬಲದಲ್ಲಿ ಸಾಹಿತ್ಯಕವಾಗಿ ತೊಡಗಿಕೊಂಡಾಗ ಪಡೆದ ಅನುಭವಗಳು ಇಲ್ಲಿನ ವಿಮರ್ಶಾ ಮಾರ್ಗವನ್ನು ರೂಪಿಸಿದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ದೀಪಾ ಫಡ್ಕೆ

ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ ಪಡೆದು, ಕನ್ನಡ ಎಂ.ಎ. ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ' ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ದೀಪಾ ಫಡ್ಡೆಯವರು, ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ 'ಋತ', ’ಹರಪನಹಳ್ಳಿ ಭೀಮವ್ವ', 'ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ' ಹಾಗೂ ’ಲೋಕಸಂವಾದಿ' (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ...

READ MORE

Related Books