BLR ಝೀರೋ ಮತ್ತು ಬೈನರಿ

Author : ಸುಚೇತಾ ಗೌತಮ್

Pages 120

₹ 100.00




Year of Publication: 2019
Published by: ನ್ಯೂ ವೇವ್ ಬುಕ್ಸ್,
Address:  # 90/3, ಮೊದಲ ಮಹಡಿ, ಇ.ಎ.ಟಿ. ಬಸವನಗುಡಿ, ಬೆಂಗಳೂರು-560004
Phone: 9448788222

Synopsys

BLR ಝೀರೋ ಮತ್ತು ಬೈನರಿ-ಸೈಬರ್ ಲೋಖದ ಅಪರಾಧ ಸರಣಿಯ ವಿಷಯ ವಸ್ತುವಿರುವ ಲೇಖಕಿ ಸುಚೇತಾ ಗೌತಮ್ ಅವರ ಪತ್ತೇದಾರಿ ಕಾದಂಬರಿ. ಬೆಂಗಳೂರಿನಲ್ಲಿ ನಡೆಯುವ ಸರಣಿ ಬಾಂಬ್ ಸ್ಫೋಟದ ಸುತ್ತ ಹೆಣೆದ ಕಥೆ. ಅಮೆರಿಕಾದ ಅಧ್ಯಕ್ಷರು ಭಾರತದ ಪ್ರವಾಸದ ಮೇಲೆ ಬಂದಿರುವರು. ಅವರನ್ನು ಸುರಕ್ಷಿತವಾಗಿ ಅಮೆರಿಕಾಕ್ಕೆ ಕಳಿಸುವ ಜವಾಬ್ದಾರಿ ಸೈಬರ್ ಕ್ರೈಮ್ ತಂಡದ ಮೇಲೆ ಏಕೆ ಬಿತ್ತು? ಹೀಗೆ ಕಥೆ ಬಿಚ್ಚಿಕೊಳ್ಳುತ್ತದೆ. ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆ ಓದುಗರ ಗಮನ ಸೆಳೆಯುತ್ತದೆ. 

About the Author

ಸುಚೇತಾ ಗೌತಮ್

ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಪ್ರವಾಸ ಕಥನಗಳನ್ನುಬ್ಲಾಗ್ ( https://suchetagautham.blogspot.com) ನಲ್ಲಿ ಬರೆಯುತ್ತಾರೆ. “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” ಅವರ ಸಾಮಾಜಿಕ, ವೈಜ್ಞಾನಿಕ ಕಥೆಗಳ ಹಾಗೂ ಐಟಿ ಕ್ಷೇತ್ರದಲ್ಲಿ ನಡೆಯುವ ಒಂದು ವಿಭಿನ್ನ ಪತ್ತೇದಾರಿ ಕಥಾ ಸಂಕಲನ. "BLR ಝೀರೋ” ಮತ್ತು “ಬೈನರಿ” ಸೈಬರ್ ಕ್ರೈಮ್ ಸರಣಿಯ ಮೊದಲ ಹಾಗೂ ಎರಡನೆಯ ಕಿರು ...

READ MORE

Related Books