ದರೋಡೆ ಚಕ್ರವರ್ತಿ

Author : ಎನ್. ನರಸಿಂಹಯ್ಯ

Pages 137

₹ 55.00




Year of Publication: 2011
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧೀನಗರ, ಬೆಂಗಳೂರು

Synopsys

ಅರವತ್ತು ಎಪ್ಪತ್ತರ ದಶಕದಲ್ಲಿ ಪತ್ತೆದಾರಿ ಕಾದಂಬರಿ ಅಂದರೆ ಮೊದಲು ಬರುವ ಹೆಸರು ಎನ್.ನರಸಿಂಹಯ್ಯ ಸಾಕಷ್ಟು ಪತ್ತೆದಾರಿ ಕಾದಂಬರಿ ಬರೆದ ಇವರ ಮತ್ತೊಂದು ಕಾದಂಬರಿ ದರೋಡೆ ಚಕ್ರವರ್ತಿ.ದರೋಡೆಕೊರ ಹಾಗು ಪೋಲಿಸರ ನಡುವೆ ನಡೆಯುವ ರೋಚಕ ಕಥೆ.ಪತ್ತೆದಾರಿ ಕಾದಂಬರಿ ಇಷ್ಟ ಪಡುವವರಿಗೆ ಈ ಕಾದಂಬರಿನೂ ಇಷ್ಟ ಆಗುತ್ತದೆ. 1973ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2011ರಲ್ಲಿ ಎರಡನೇ ಮುದ್ರಣ ಕಂಡಿದೆ. ಕುಂವೀ ಅವರು ಈ ಕಾದಂಬರಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ಎನ್. ನರಸಿಂಹಯ್ಯ
(18 September 1925 - 25 December 2011)

ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್‌. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್‌ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ...

READ MORE

Related Books