ಚಾರ್ಲ್ಸ್ ಡಾರ್ವಿನ್ ಜೀವ ಸಂಕುಲಗಳ ಉಗಮ

Author : ಕೆ. ಪುಟ್ಟಸ್ವಾಮಿ

Pages 272

₹ 150.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018

Synopsys

ಜೀವ ಸಂಕುಲಗಳ ವಿಕಾಸವನ್ನು ಅಧ್ಯಯನ ಮಾಡಿದ ಚಾರ್ಲ್ಸ್ ಡಾರ್ವಿನ್ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿ-ಜೀವ ಸಂಕುಲಗಳ ಉಗಮ. ಮಂಗನಿಂದ ಮಾನವನಾದ ಎಂಬ ಪರಿಕಲ್ಪನೆ ನೀಡಿದ್ದೇ ಚಾರ್ಲ್ಸ್ ಡಾರ್ವಿನ್. ಈತನ ವಿಕಾಸವಾದವನ್ನು ಆಧುನಿಕ ಜೀವವಿಜ್ಞಾನದ ಬುನಾದಿ ಎಂದೇ ಹೇಳಲಾಗುತ್ತದೆ. ಈ ಕೃತಿಯು ಪ್ರಪಂಚದಲ್ಲಿ ಜೀವ ಸೃಷ್ಟಿಯ ಕುರಿತು ಬೈಬಲ್ ಸೇರಿದಂತೆ ಇತರೆ ಧರ್ಮಗ್ರಂಥಗಳು ಪ್ರತಿಪಾದಿಸಿದ ನಂಬಿಗೆಗಳ ಬೇರನ್ನೇ ಅಲ್ಲಾಡಿಸಿತು.ಈ ವಾದಕ್ಕೆ ಸಮರ್ಥನೆಗಳಾಗಿ ಚಾರ್ಲ್ಸ್ ಡಾರ್ವಿನ್ ನೀಡಿರುವ ಅಧ್ಯಯನದ ಆಕರಗಳು, ಜೀವ ಸಂಕುಲ ಹುಟ್ಟು, ಬೆಳವಣಿಗೆಯ ರೀತಿಗಳು ಜಗತ್ತಿನ ಗಮನ ಸೆಳೆದವು. ಭೂಮಿಯ ಮೇಲೆ ಜೀವ ಉತ್ಪತ್ತಿಯಾಗಿ ನಂತರ ಅಳಿದು ಹೋಗಿ ತದನಂತರ ಅವು ಪಡೆದುಕೊಳ್ಳುವ ರೂಪುಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು ಈ ವಾದದ ಹೆಚ್ಚುಗಾರಿಕೆ. ಈ ಕುರಿತು ವಿವರ ಮಾಹಿತಿ ಒಳಗೊಂಡ ಕೃತಿ ಇದು.  

About the Author

ಕೆ. ಪುಟ್ಟಸ್ವಾಮಿ

ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಕನಕಪುರ ಕೆ.ಜಿ.ಎಫ್ ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ.  ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ...

READ MORE

Related Books