ವಿಸ್ಮಯ ವಿಜ್ಞಾನ – ವಿಜ್ಞಾನ ಲಹರಿ

Author : ಲಿಂಗರಾಜ ರಾಮಾಪೂರ

Pages 124

₹ 185.00




Year of Publication: 2022
Published by: ಶ್ರೀ ಮರಡಿಲಿಂಗೇಶ್ವರ ಪ್ರಕಾಶನ, ಮೈಸೂರು
Address: Shri Maradilingeshwsr Prakashana N0-376, 3rd Main, 13th Cross, A-1 Block, Vijayanagara, 3rd Stage, Mysore
Phone: 9686535465

Synopsys

ಈ ಕೃತಿಯಲ್ಲಿ ೧೦೧ಕ್ಕೂ ಹೆಚ್ಚು ಸೋಜಿಗಗಳಿವೆ. ಓದಿದ ತಕ್ಷಣ ಹೌದಲ್ಲವೇ? ಎಂಬ ಜಿಜ್ಞಾಸೆಗೆ ಒಳಗಾಗುವ ತರ್ಕಗಳಿವೆ. ಪ್ರಕೃತಿಯ ನಿಗೂಢಗಳಿವೆ. ಈ ಭೂಮಂಡಲದ ನೆಲ, ಜಲ, ವಾಯು ಅಲ್ಲದೇ ಭೂಮಂಡಲದ ಆಚೆಯೂ ಲೇಖಕರು ಓದುಗರನ್ನು ಕರೆದುಕೊಂಡು ಸಾಗಿ ಬೆರಗುಗೊಳಿಸುತ್ತಾರೆ. ಪುಸ್ತಕದ ಅಂತರಂಗದಲ್ಲಿ ಪ್ರಾಣಿಗಳ ಆಟೋಟ, ಹೊಂದಾಣಿಕೆ, ರಕ್ಷಣೆ, ಬೇಟೆ, ಹವ್ಯಾಸ ಮುಂತಾದ ಪ್ರಾಣಿ, ಪಕ್ಷಿ, ಮನುಷ್ಯನ ಹೊರನೋಟವನ್ನು ಮನೋಜ್ಞವಾಗಿ, ವೈಜ್ಞಾನಿಕ ದೃಷ್ಟಿಕೋನದಿಂದ ಬಿಚ್ಚಿಟ್ಟಿರುವ ಡಾ.ಲಿಂಗರಾಜ ರಾಮಾಪೂರರವರ ಪ್ರಯತ್ನ ತೃಪ್ತಿಕರವಾದದು. ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ, ಓದುಗರಲ್ಲಿ, ವೈಜ್ಞಾನಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸುವ ಅವಶ್ಯಕತೆಯ ಇಂದಿನ ದಿನಮಾನದಲ್ಲಿ ‘ಸೋಜಿಗ ಈ ಜಗ’ ಇಂತಹ ಪುಸ್ತಕಗಳ ಅಗತ್ಯತೆ ಸಾಕಷ್ಟಿದೆ. ಜಗತ್ತಿನ ವಿಸ್ಮಯ ಪರಮಾದ್ಭುತ. ಹಲವು ವೈವಿಧ್ಯ ವಿಚಿತ್ರಗಳ ತಾಣ. ವೈಜ್ಞಾನಿಕ ದೃಷ್ಟಿಯಿಂದ ಜಗದ ಸತ್ಯಾಸತ್ಯತೆಯನ್ನು ತಿಳಿಯಬೇಕಾದರೆ, ಮನುಷ್ಯರಾದ ನಾವು ಹೊರಗಣ್ಣನ್ನು ತೆರೆದ ಜಗತ್ತನ್ನು ಅದರ ಸೌಂದರ್ಯವನ್ನು, ಜೀವಜಾಲಗಳ ವರ್ತನೆ, ಮನೋಭಾವ, ವ್ಯಕ್ತಿತ್ವ ಹಾಗೂ ಜೀವಿಸಲು ನಡೆಸುವ ಹೋರಾಟಗಳನ್ನು ಸೂಕ್ಷ್ಮವಾಗಿ ತಿಳಿಯಬೇಕಾಗಿದೆ. ಅಂತಹ ಪ್ರಯತ್ನದ ಭಾಗವೇ ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರವರ ‘ಸೋಜಿಗ ಈ ಜಗ’.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Related Books