ವಿಶ್ವದ ವೈವಿಧ್ಯ

Author : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

Pages 168

₹ 150.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001
Phone: 080221619

Synopsys

‘ವಿಶ್ವದ ವೈವಿಧ್ಯ’ ವಿಜ್ಞಾನ ಲೇಖಕ ಪಿ.ಆರ್. ವಿಶ್ವನಾಥ್ ಅವರ ಕೃತಿ. ಈ ಪುಸ್ತಕದ ಮೊದಲನೆಯ ಭಾಗದಲ್ಲಿ ಗೆಲಿಲಿಯೊ, ಪಾಸ್ಕಲ್, ಎಡಿಂಗ್ಟನ್, ಡಬಲ್ ಮತ್ತು ಇತರರು ನಡೆಸಿದ ಭೌತವಿಜ್ಞಾನದ ಕೆಲವು ಮೂಲಭೂತ ಮತ್ತು ಎಂದೆಂದಿಗೂ ಪ್ರಸ್ತುತವಾದ ಮಹಾಪ್ರಯೋಗಗಳ ವಿವರ ಮತ್ತು ಚರ್ಚೆಗಳಿವೆ. 'ಸೃಷ್ಟಿ ವಿಜ್ಞಾನದಲ್ಲಿ ಮಹಾಸ್ಪೋಟ, ಅಗೋಚರ ಚೈತನ್ಯ, ಕೇಸಾರ್‌ಗಳ ಬಗ್ಗೆ 'ತಾರಾಲೋಕ'ದಲ್ಲಿ ಸಾಧಾರಣ ನಕ್ಷತ್ರಗಳು (ಉದಾ : ಸೂರ್ಯ), ಕಪ್ಪುರಂಧ್ರ, ಸೂಪರ್ನೋವಾ, ಪಲ್ವಾರ್ ಇತ್ಯಾದಿಗಳ ಬಗ್ಗೆ ಮತ್ತು 'ವೀಕ್ಷಣಾ ಪ್ರಪಂಚದಲ್ಲಿ ಮಂಗಳ ಗ್ರಹ, ಹಬಲ್ ದೂರದರ್ಶಕ, ಧೂಮಕೇತು, ಕ್ಷುಧ್ರ ಗ್ರಹಗಳು ಇತ್ಯಾದಿಗಳ ಬಗ್ಗೆ ಲೇಖನಗಳಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲದೆ ವಿಜ್ಞಾನದಲ್ಲಿ ಆಸಕ್ತಿ ಇರುವವರೆಲ್ಲಾ ಓದಬಹುದಾದ ಬರಹಗಳಿವು.

About the Author

ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books