ಚುಟುಕು ಚಿತ್ತಾರ

Author : ಎ.ಎನ್.ರಮೇಶ್. ಗುಬ್ಬಿ

Pages 64

₹ 40.00




Year of Publication: 2013
Published by: ವೈದ್ಯವಾರ್ತಾ ಪ್ರಕಾಶನ
Address: ವಿದ್ಯಾರಣ್ಯಪುರಂ ಮೈಸೂರು-570008

Synopsys

‘ಚುಟುಕು ಚಿತ್ತಾರ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಚುಟುಕು ಸಂಕಲನ. ಈ ಕೃತಿಗೆ ಎಚ್.ಬಿ. ಸೋಮಶೇಖರ್ ರಾವ್ ಬೆನ್ನುಡಿ ಬರಹವಿದೆ. ಚುಟುಕು ಸಾಹಿತ್ಯವಲಯದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಚುಟುಕುಗಳು ಚಿಮ್ಮಿ ಬರುತ್ತಿವೆ. ಚುಟುಕುಗಳನ್ನು ಅಷ್ಟಾಗಿ ಗಮನಿಸದಿದ್ದ ಸಾಹಿತಿಗಳೂ ಕೂಡ ಅದನ್ನು ಮೆಚ್ಚುತ್ತಿದ್ದಾರೆ. ಕೆಲವರು ಸ್ವತಃ ಚುಟುಕಗಳನ್ನು ರಚಿಸುತ್ತಿದ್ದಾರೆ. ಈಗ ಅದಕ್ಕೇ ಒಂದು ವಿಶಿಷ್ಟ ಸ್ಥಾನ ದೊರಕಿದೆ. ಚುಟುಕು ಚಿತ್ತಾರದಲ್ಲಿನ ಚುಟುಕುಗಳಲ್ಲಿ ಭಾಷೆಯ ಚಾಕಚಕ್ಯತೆ, ವಸ್ತು ವೈವಿಧ್ಯತೆ, ಚುರುಕಿನ ಚಿನಕುರುಳಿಯ ಹಾರಿಕೆ, ವಿಸ್ತಾರ-ಎಲ್ಲವೂ ಜನಾದರಣೀಯವಾಗುತ್ತಿವೆ. ಈಗ ಜನರಿಗೆ ಸಮಯಾಭಾವದ ಸಮಸ್ಯೆಯಿದೆ. ಕೊಂಚ ಕಾಲ ಒಂದೆಡೆ ಕೂರಲೂ ಸಮಯವಿಲ್ಲದವರಿಗೆ- ಚುರುಕು ಬದುಕಿನವರಿಗೆ, ಚುಟುಕು-ಚಿತ್ತಾರದಂಥವು ಜೀವನೋತ್ಸಾಹಕ್ಕೊಂದು ಸಂಜೀವಿನಿ. ಈ ಚುಟುಕುಗಳು ಚಿಕ್ಕದಾಗಿ ಚೊಕ್ಕವಾಗಿವೆ. ಪ್ರತಿ ಚುಟುಕದಲ್ಲೂ ವಿವೇಕದ- ವಿವೇಚನೆಯ ಪುಟ್ಟ ಪಟಾಕಿಯಿದೆ. ಅದ್ಯಾವುದೂ ಟುಸ್ ಆಗುವಂಥದ್ದಲ್ಲ. ಇಲ್ಲಿರುವ 127 ಚುಟುಕಗಳು ವಿವಿಧ ವಸ್ತುಗಳನ್ನೊಳಗೊಂಡಿವೆ. ಇದೆಲ್ಲದರಲ್ಲೂ ಕಲ್ಪನೆಯಿದೆ. ಕನಸಿದೆ, ಬದುಕಿದೆ ವಾಸ್ತವವಿದೆ. ತ್ರಾಸವಿಲ್ಲದ ಸುಖದ ಪ್ರಾಸವಿದೆ. ಅದು ತಿಣುಕಿದ್ದಲ್ಲ, ಸಂಕ್ಷಿಪ್ತತೆ, ಸಹಜತೆ, ವಿಡಂಬನೆ, ವಿನೋದ, ವಿಷಾದ ಮೃದುಹಾಸ್ಯ ಇದ್ದು ಖುಷಿಕೊಡುತ್ತದೆ. ಕೆಲವು ಚುಟುಕಗಳ ಕುತೂಹಲಕಾರಿ ಕೊನೆಯ ತಿರುವುಗಳು ಸೊಗಸಾಗಿವೆ. ಎಲ್ಲೂ ಗಾಂಭೀರ್ಯದ ಗೆರೆ ದಾಟಿಲ್ಲ ಎಂದು ಎಚ್.ಬಿ.ಸೋಮಶೇಖರ್ ರಾವ್ ಮೆಚ್ಚುಗೆ ಸೂಚಿಸಿದ್ದಾರೆ.

About the Author

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...

READ MORE

Related Books