ಹಸಿರು-ಹಸಿವು

Author : ವಿಜಯಕುಮಾರ ಜಿ. ಪರುತೆ

Pages 124

₹ 0.00




Year of Publication: 2007
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಿಂಚೋಳಿ

Synopsys

ಲೇಖಕ ಡಾ.ವಿಜಯಕುಮಾರ ಜಿ ಪರುತೆ ಸಂಪಾದಿಸಿದ ಸ್ಮರಣ ಸಂಚಿಕೆ-ಹಸಿರು-ಹಸಿವು. ಚಿಂಚೋಳಿ ತಾಲೂಕು 4 ಪೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಲೋಕಾರ್ಪಣೆ ಗೊಂಡಿದೆ. ಸಾಹಿತಿ ಎಸ್.ಎನ್.ದಂಡಿನಕುಮಾರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕೊಟ್ಟ ಕೀರ್ತಿ ಕಲ್ಯಾಣ ಕರ್ನಾಟಕದ್ದಾಗಿದೆ.ಕಲಬುರ್ಗಿ ಜಿಲ್ಲೆಯ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಬೀಡಾಗಿದೆ.ಇಲ್ಲಿಯ ಅನೇಕ ವಚನಕಾರರು,ಜನಪದ ಕಲಾವಿದರು, ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.ಇಂದು ಕನ್ನಡ ಭಾಷೆ ಬಳಕೆ, ಓದು, ಬರ‌ಹ ಕಡಿಮೆಯಾಗುತ್ತಿದೆ. ಆದ್ದರಿಂದ ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕು,ಆ ದಿಶೆಯಲ್ಲಿ ಈ ಸಮ್ಮೇಳನವು ಬಲ ಮತ್ತು ಬೆಲೆ ತರಲಿ ಎಂದು ಸಂಪಾದಕರು ಆಶಿಸಿದ್ದಾರೆ. ಕನ್ನಡ ಶಾಸನ ಮತ್ತು ಸಾಹಿತ್ಯದ ಭಾಷೆ, ಸಾಹಿತ್ಯ_ಸಂಸ್ಕ್ರತಿ, ಚಿಂಚೋಳಿ ತಾಲೂಕಿನ ನೀರಾವರಿ ಯೋಜನೆಗಳು., ಸಮ್ಮೇಳನದ ಸರ್ವಾಧ್ಯಕ್ಷರ ನುಡಿ., ಗಡಿ ಸಮಸ್ಯೆಗಳು., ಅಕ್ಷರ ದಾಸೋಹ ಯೋಜನೆ, ಐತಿಹಾಸಿಕ ದೇವಾಲಯಗಳು, ತಾಲೂಕಿನ ವೈಶಿಷ್ಟ್ಯಗಳು, ತಾಲೂಕಿನ ಸಾವಯವ ಕೃಷಿ, ತಾಲೂಕಿನ ಮಹಿಳಾ ಮಂಡಳಗಳು, ತಾಲೂಕಿನ ಪ್ರವಾಸಿ ತಾಣಗಳು, ತಾಲೂಕಿನ ಜನಪದ ಕಲಾವಿದರು, ತಾಲೂಕಿನ ನಾಟಕಕಾರರು, ತಾಲೂಕಿನ ಭಾವೈಕ್ಯತೆ ತಾಣಗಳು, ತಾಲೂಕಿನ ಚಿತ್ರಕಲಾವಿದರು, ತಾಲೂಕಿನ ಸಾಹಿತ್ಯ, ಸಾಹಿತಿಗಳು, ತಾಲೂಕಿನ ಕನ್ನಡ ಬೆಳವಣಿಗೆ ಹೀಗೆ ಅನೇಕ ವಿಷಯಗಳ ಕುರಿತು ಕೃತಿಯಲ್ಲಿ ಚರ್ಚಿಸಲಾಗಿದೆ. .ಬೆಲೆ ನಮೂದಿಸಿಲ್ಲ.

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books