ಹೆಜ್ಜೆ ಗುರುತು

Author : ಬುಸ್ಸಣ್ಣ ವಿ ಯಾದವ್

Pages 80

₹ 75.00
Year of Publication: 2021
Published by: ಯಾದವ್ಸ್ ಪ್ರಕಾಶನ,
Address: ಬದ್ದೆಪಲ್ಲಿ-585202 ಗುರುಮಿಠಕಲ್ ತಾಲೂಕ, ಯಾದಗಿರಿ ಜಿಲ್ಲೆ
Phone: 9606280098

Synopsys

‘ಹೆಜ್ಜೆ ಗುರುತು’ ಕೃತಿಯು ಬುಸ್ಸಣ್ಣ ವ್ಹಿ. ಯಾದವ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಹುಲಿಯೂರುದುರ್ಗ ಲಕ್ಷ್ಮಿನಾರಾಯಣ್ ಅವರು, ‘ಹೆಜ್ಜೆ ಗುರುತು ಹದಿಹರೆದಯ ಹುಡುಗನ ಎದೆಯ ತಿದಿಯೊತ್ತಿ ಹೊರಬಿದ್ದ ಸಾಲುಗಳು, ಕವನಗಳಾಗಿ, ಕವನಗಳು ತೆನೆಗೂಡಿದ ಬಳ್ಳಿಯಂತೆ ಸಂಕಲನವಾಗಿ ರೂಪುಗೊಂಡಿದೆ. ಹರೆಯದ ಬರಹಗಳೆಂದರೆ ಹಸಿ ಹಸಿ ಪ್ರೀತಿ ಪ್ರೇಮ ಪ್ರಣಯದಂತೆ ಎಂದುಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಇವೆಲ್ಲಾ ಮಾತುಗಳನ್ನು ಹುಸಿಗೊಳಿಸುವಂತೆ ಬುಸ್ಸಣ್ಣ. ವ್ಹಿ ಯಾದವ್ ತನ್ನ ಬರಹಗಳನ್ನು ಎರಕ ಹೊಯ್ದಿದ್ದಾರೆ. ಬೆಳೆದು ಪ್ರಜ್ವಲಿಸಬಲ್ಲ ಸಂಪೂರ್ಣ ಲಕ್ಷಣಗಳು ಇವರ ಬರಹದಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಬುಸ್ಸಣ್ಣ ವಿ ಯಾದವ್

ಕವಿ, ಲೇಖಕ ಬುಸ್ಸಣ್ಣ ವಿ ಯಾದವ್ ಅವರು ಮೂಲತಃ ಯಾದಗಿರಿಯ ಗುರುಮಿಠಕಲ್ ತಾಲೂಕಿನ ಬದ್ದೆಪಲ್ಲಿಯವರು. ಕಲಿ ಕವಿ ಅವರ ಕಾವ್ಯನಾಮ. ಬಿ. ಎ ವಿದ್ಯಾರ್ಥಿ. ಅವರ ಕವನ ಮತ್ತು ಬರಹಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2020ರಲ್ಲಿ ಯಾದಗಿರಿಯ ಜಿಲ್ಲಾ ಘಟಕ ಕರುನಾಡ ಹಣತೆ ಬಳಗದ ಜಿಲ್ಲಾಧ್ಯಕ್ಷರಾಗಿದ್ದರು.  2021ರಲ್ಲಿ ಯಾದಗಿರಿ ಜಿಲ್ಲಾ ಘಟಕದ ಕರುನಾಡು ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾಧ್ಯಕ್ಷರಾಗಿದ್ದಾರೆ.  ಕೃತಿಗಳು: ಹೆಜ್ಜೆ ಗುರುತುಗಳು (ಕವನ ಸಂಕಲನ) ...

READ MORE

Related Books